ಮುಸ್ಲಿಂ ಸಮುದಾಯದವರಿಂದ ಶ್ರದ್ಧಾ-ಭಕ್ತಿಯಿಂದ ಈದ್ ಮಿಲಾದ್ ಆಚರಣೆ

ಮುಸ್ಲಿಂ ಸಮುದಾಯದವರಿಂದ ಶ್ರದ್ಧಾ-ಭಕ್ತಿಯಿಂದ ಈದ್ ಮಿಲಾದ್ ಆಚರಣೆ Eid Milad celebrated with devotion by Muslim community

ಮುಸ್ಲಿಂ ಸಮುದಾಯದವರಿಂದ ಶ್ರದ್ಧಾ-ಭಕ್ತಿಯಿಂದ ಈದ್ ಮಿಲಾದ್ ಆಚರಣೆ 

ಮುಂಡಗೋಡ 05: ಪಟ್ಟಣದಲ್ಲಿ ಹಜರತ್ ಮೊಹ್ಮದ್ ಪೈಗಂಬರ ಜನ್ಮದಿನ ಅಂಗವಾಗಿ ಆಚರಿಸುವ ಈದ್ -ಎ-ಮಿಲಾದ ಹಬ್ಬದ ಪ್ರಯುಕ್ತ ಮುಸ್ಲಿಂಬಾಂಧವರು ಹಬ್ಬವನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.  

ತಾಲೂಕಿನಾದ್ಯಂತ ಹಜರತ್ ಮೊಹ್ಮದ್ ಪೈಗಂಬರ್ ಜಯಂತ್ಯುತ್ಸವನನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.  

ಪಟ್ಟಣದಲ್ಲಿ ಬೆಳಿಗ್ಗೆ ನೂರಾನಿ ಮಸೀದಿ ಹತ್ತಿರ ಮುಸ್ಲಿಂ ಸಮುದಾಯದ ಅಬಾಲ ವೃದ್ಧರು ಜಮಾವಣೆಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮೆರವಣಿಗೆ ಸಂದರ್ಭದಲ್ಲಿ ಅಲ್ಲಾಹನ ನಾಮಸ್ಮರಣೆ, ಮೊಹ್ಮದ್ ಪೈಗಂಬರ್ ಆದರ್ಶಗಳು ಹೇಳಲಾಗುತ್ತಿತ್ತು. ಮೆರವಣಿಗೆಯಲ್ಲಿ ಮುಸ್ಲಿಮ ಸಮುದಾಯದ ವರು ಡಿಜೆ ಗೆ ಅವಕಾಶ ನೀಡಲಿಲ್ಲ. ಇದರಿಂದಾಗಿ ಮೆರವಣಿಗೆಯು ಅತ್ಯಂತ ಅರ್ಥಪೂರ್ಣವಾಗಿ ಕಂಡು ಬಂದಿತು.ಕಾರವಾರ ಡಿಎಸ್ಪಿ ಅಶ್ವಿನಿ ಯವರು ಕಟ್ಟುನಿಟ್ಟಿನ ಬಂದೋಬಸ್ತ್‌ ತಾಲೂಕಿನಾದ್ಯಂತ ಮಾಡಿದ್ದರು.  

ಪಟ್ಟಣದಲ್ಲಿಕಾರವಾರ ಡಿಎಸ್ಪಿ ಅಶ್ವಿನಿ ಮಾರ್ಗ ದರ್ಶನದಲ್ಲಿ ಸಿಪಿಐ ರಂಗನಾಥ ನಿಲಮ್ಮನವರ ಬಂದೋಬಸ್ತ್‌ ಏರಿ​‍್ಡಸಿದ್ದರು. ಮೆರವಣಿಗೆ ಮುಗಿಯುವವರೆಗೂ ಪೋಲೀಸರು ಹದ್ದಿನ ಕಣ್ಣಿಟ್ಟಿದ್ದರು. ಪೊಲೀಸರ ಕಾರ್ಯಕ್ಕೆ ಮುಸ್ಲಿಂ ಸಮುದಾಯದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೆರವಣಿಗೆ ಅತ್ಯಂತ ಶಾಂತಿಯುತವಾಗಿತ್ತು. ಪಟ್ಟಣದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರ ಜನರು ಭಾಗವಹಿಸಿದ್ದರು.