ಯರಗಟ್ಟಿ ತಾಲೂಕಿನಲ್ಲಿ ಸರಳವಾಗಿ ಈದ್ ಮಿಲಾದ್ ಆಚರಣೆ

ಯರಗಟ್ಟಿ ತಾಲೂಕಿನಲ್ಲಿ ಸರಳವಾಗಿ ಈದ್ ಮಿಲಾದ್ ಆಚರಣೆ  Eid Milad celebrated simply in Yaragatti taluk


ಯರಗಟ್ಟಿ 26: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಯರಗಟ್ಟಿ ತಾಲೂಕಿನಾದ್ಯಂತ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಿದರು.  ಪಟ್ಟಣದ ಮುಸ್ಲಿಂ ಸಮಾಜ ಹಾಗೂ ಯಂಗ್ ಒಕ್ಕೂಟದ ವತಿಯಿಂದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.  

ಈ ಸಂದರ್ಭದಲ್ಲಿ ಯಂಗ್ ಕಮಿಟಿ ಮುಖಂಡ ಫಿರೋಜ್ ಖಾದ್ರಿ ಮಾತನಾಡಿ, ಈದ್ ಮಿಲಾದ್ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾಗಿದ್ದು, ಪ್ರವಾದಿ ಮೊಹಮ್ಮದ್ ಅವರ ಜೀವನ ಹಾಗೂ ಅವರು ಸಾರಿದ ಶಾಂತಿ, ಪ್ರೀತಿ, ಸಹೋದರತ್ವ ಮತ್ತು ಮಾನವೀಯತೆಯ ಸಂದೇಶಗಳನ್ನು ಸ್ಮರಿಸುವ ದಿನವಾಗಿದೆ ಎಂದರು.  

ಅಮೀರ್ ದೇವಡಿ ಮಾತನಾಡಿ, ಈದ್ ಮಿಲಾದ್ ಹಬ್ಬವು ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಸಹಬಾಳ್ವೆಯನ್ನು ಬೆಳೆಸುತ್ತದೆ. ಎಲ್ಲರೂ ಶಾಂತಿ ಮತ್ತು ಸಹೋದರತ್ವದಿಂದ ಬದುಕಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು ಎಂದರು.  

ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಸಲೀಂಬೇಗ ಜಮಾದಾರ, ಇಮ್ತಿಯಾಜ್ ಖಾದ್ರಿ, ಅಲ್ತಾಫ್ ಮುಲ್ಲಾ, ಸಮೀರ್ ಜಮಾದಾರ, ಕಾಸಿಮಅಲಿ ನದಾಫ್, ಗುಡಚಾಂದ ದೇವಳಿ, ಬಾಪುಗೌಡ ಪಾಟೀಲ, ನಜೀರ್ ನದಾಫ್, ಮಕುತಮ ದಳವಾಯಿ, ಕಾಸಿಂ ಅನ್ಸಾರಿ, ಬಬುಲ್ ಸನದಿ, ಫಾರೂಕ್ ಅತ್ತಾರ, ಹಸನ್ ಹುಸೇನನಾಯ್ಕರ್, ಫಿರೋಜ್ ಖಾದ್ರಿ ಸೇರಿದಂತೆ ಯಂಗ್ ಕಮಿಟಿ ಸದಸ್ಯರು ಹಾಗೂ ಮುಸ್ಲಿಂ ಸಮಾಜದ ಗುರುಹಿರಿಯರು ಉಪಸ್ಥಿತರಿದ್ದರು.