ಬೆಂಗಳೂರು, ಏ.16, ಕೊರೊನಾ ವೈರಸ್‌ನಿಂದಾಗಿ ದೇಶಾದ್ಯಂತ ಜಾರಿಗೆ ತರಲಾದ ಲಾಕ್‌ಡೌನ್ ಸಮಯದಲ್ಲಿ ತಂಡವು ಸುಧಾರಿಸಲು ಶ್ರಮಿಸುತ್ತದೆ ಎಂದು ಭಾರತೀಯ ಹಾಕಿ ತಂಡದ ಅನುಭವಿ ಫಾರ್ವರ್ಡ್ ಆಟಗಾರ ಎಸ್‌ವಿ ಸುನಿಲ್ ಅಭಿಪ್ರಾಯಪಟ್ಟಿದ್ದಾರೆ.ಕೊರೊನಾದ ಭೀತಿಯಿಂದ ದೇಶಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ ಮತ್ತು ಈ ಸಮಯದಲ್ಲಿ ಆಟಗಾರರು ತಮ್ಮ ಮನೆ ಅಥವಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.“ನಾವು ಒಂದು ತಿಂಗಳಿಗೂ ಹೆಚ್ಚು ಕಾಲ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯಿ) ಉಳಿದುಕೊಂಡಿದ್ದೇವೆ ಮತ್ತು ತಂಡವು ನಮ್ಮ ತಂಡದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯೊಂದಿಗೆ ಹೆಚ್ಚು ಸಮಯ ಕಳೆಯುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ನಮ್ಮ ಹಿಂದಿನ ಕಾರ್ಯವನ್ನು ನಾವು ವಿಶ್ಲೇಷಿಸುತ್ತಿದ್ದೇವೆ ಮತ್ತು ಆಟ ಪ್ರಾರಂಭವಾಗುವ ಮೊದಲು ಸುಧಾರಿಸಲು ಇದು ಸಹಾಯಕವಾಗಲಿದೆ ಎಂದು ನನಗೆ ವಿಶ್ವಾಸವಿದೆ” ಎಂದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ ತಂಡ ಅರ್ಹತೆ ಪಡೆದಿದ್ದು, ಒಲಿಂಪಿಕ್ಸ್‍ನ್ನು 2021 ರವರೆಗೆ ಮುಂದೂಡಲಾಗಿದೆ. ಈ ಸಮಯದಲ್ಲಿ ಎಫ್‌ಐಎಚ್‌ನ ಪ್ರೊ ಲೀಗ್ ಕೂಡ ಮುಂದೂಡಲ್ಪಟ್ಟಿದೆ. " ಕೊರೊನಾದ ಭೀತಿಯಿಂದ ಲಾಕ್ ಡೌನ್ ಅವಧಿ ಹೆಚ್ಚಾಗುತ್ತದೆ ಎಂದು ನಾವು ಭಾವಿಸಿದ್ದೇವೆ, ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಪಾಯವನ್ನುಂಟುಮಾಡುತ್ತದೆ" ಎಂದು ತಿಳಿಸಿದ್ದಾರೆ.