ರೈತರ ಆರ್ಥಿಕ ಭಲವರ್ಧನೆಗೆ ಶ್ರಮಿಸಬೇಕು : ಶ್ರೀಕಾಂತ ದುಂಡಿಗೌಡ್ರ
Efforts should be made for the economic upliftment of farmers: Srikanth Dundigowdra
ರೈತರ ಆರ್ಥಿಕ ಭಲವರ್ಧನೆಗೆ ಶ್ರಮಿಸಬೇಕು : ಶ್ರೀಕಾಂತ ದುಂಡಿಗೌಡ್ರ
ಲೋಕದರ್ಶನ ವರದಿ
ಶಿಗ್ಗಾವಿ 18 : ಹೆಚ್ಚಿನ ರೀತಿಯಲ್ಲಿ ರೈತರಿಗೆ ನೆರವು ಕೊಡಿಸುವಂತಹ ಕೆಲಸಗಳನ್ನ ನೂತನ ಕೆಎಂಎಫ್ ನಿರ್ದೇಶಕರು ಮಾಡಿ ರೈತರ ಆರ್ಥಿಕ ಭಲವರ್ಧನೆಗೆ ಶ್ರಮಿಸಬೇಕು ಎಂದು ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಗಂಗೇಬಾವಿ ರೆಸಾರ್ಟನಲ್ಲಿ ಮಾಜಿ ಜಿಲ್ಲಾ ಪಂಚಾಯತಿಯ ಸದಸ್ಯ ಶಶಿಧರ ಹೊನ್ನಣ್ಣವರ ಬಳಗದ ವತಿಯಿಂದ ಹಮ್ಮಿಕೊಂಡ ನೂತನ ಶಿಗ್ಗಾವಿ ಹಾಗೂ ಸವಣೂರ ತಾಲೂಕಿನ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೆಎಂಎಫ್) ನಿರ್ಧೇಶಕರಾದ ಶಶಿಧರ ಯಲಿಗಾರ ಹಾಗೂ ತಿಪ್ಪಣ್ಣ ಸಾತಣ್ಣವರ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ರೈತರ ಉಪಕಸುಬಾಗಿದೆ ಇದನ್ನು ಉದ್ಯಮವಾಗಿ ಪರಿಗಣಿಸಿ ಇದಕ್ಕೆ ವ್ಯಾಪಕವಾದ ಸೌಲಭ್ಯವನ್ನು ಕಲ್ಪಿಸಿ ಅವಶ್ಯವಿರುವ ಸಾಲ ಸೌಲಭ್ಯ, ಆಕಳು ಹಾಗೂ ಎಮ್ಮೆಗಳನ್ನ ನೀಡುವುದು ಮತ್ತು ಮೇವು, ಹಿಂಡಿಯನ್ನು ಸಬ್ಸಿಡಿ ದರದಲ್ಲಿ ನೀಡುವಂತಹ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯವಾಗಲಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ, ಮುಖಂಡರಾದ ಗದಿಗಯ್ಯ ಹಿರೇಮಠ, ಸಿದ್ದಲಿಂಗೇಶ ಕಲಿವಾಳ, ಸಿರಾಜಅಹ್ಮದ್ ಮುಲ್ಲಾ, ಮಲ್ಲೇಶ್ ಬೂದಿಹಾಳ, ಯಲ್ಲಪ್ಪಗೌಡ ಪಾಟೀಲ್, ಸುರೇಶ್ ಮುರಾರಿ, ರಮೇಶ್ ಹುಬ್ಬಳ್ಳಿ, ಬಾಪುಗೌಡ ಪಾಟೀಲ ಹಾಗೂ ಇನ್ನೂ ಅನೇಕರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 