ಶಿಕ್ಷಣ ತಜ್ಞ ಪ್ರೊ ಎಸ್.ಎಸ್.ಪಟ್ಟಣಶೆಟ್ಟರ ಕಾಯಕಯೋಗಿ ಪ್ರಶಸ್ತಿಗೆ ಭಾಜನ ; ಅಭಿನಂದನೆಗಳ ಮಹಾಪೂರ
Educationist Prof. S.S. Pattanashettar receives Kayakayogi Award; Congratulations galore
ವರದಿ : ಗುಲಾಬಚಂದ ಜಾಧವ
ಆಲಮಟ್ಟಿ 01 : ಸರಳತೆಯ ಭಾವದಿಂದಲೇ ಜನಾನುರಾಗಿರುವ ಗದಗ ತೋಂಟದಾರ್ಯ ಮಠದ ಹಾಗೂ ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಕ್ರಿಯಾಶೀಲ ಕಾರ್ಯದರ್ಶಿ, ಶಿಕ್ಷಣ ತಜ್ಞ ಪ್ರೊ ಶಿವಾನಂದ ಪಟ್ಟಣ ಶೆಟ್ಟರ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಕಾಯಕಯೋಗಿ-2026 ಪ್ರಶಸ್ತಿ ಲಭಿಸಿದೆ. ವಿವಿಧ ಕ್ಷೇತ್ರದಲ್ಲಿ ಪೊ ಶಿವಾನಂದ ಪಟ್ಟಣಶೆಟ್ಟರ ಅವರು ಅರಾ್ಣ ಭಾವದಿಂದ ಗೈದಿರುವ ಸಮಾಜಮುಖಿ ಅನುಪಮ ಸೇವಾ ಕಾಯಕವನ್ನು ದೊಡ್ಡಬಳ್ಳಾಪುರ ಮೂಲದ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಗುರುತಿಸಿ ಕಾಯಕಯೋಗಿ-2026 ಪ್ರಶಸ್ತಿಗೆ ಆಯ್ಕೆಮಾಡಿದೆ. ಆ ಹಿನ್ನೆಲೆಯಲ್ಲಿ ಇದೀಗ ಎಲ್ಲೆಲ್ಲೂ ಅಭಿಮಾನಿಗಳ ಅಭಿಮಾನಪೂರಕ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕಳೆದ ಐವತ್ತು ವಸಂತಗಳಿಂದ ಹತ್ತು ಹಲವಾರು ಬಗೆಯ ಸಮಾಜಮುಖಿ ಕಾಯಕದಲ್ಲಿ ತಮ್ಮನ್ನು ತಾವು ಯಾವುದೇ ಸದ್ದುಗದ್ದಲಗಳಿಲ್ಲದೇ ಅವಿರತವಾಗಿ ತೋಡಗಿಸಿಕೊಂಡು ಬಸವ ತತ್ವದ ಸರಳಾನುಭೂತಿ ಕಾಯಕ ಪ್ರಜ್ಞೆ ಮೆರೆದಿರುವ ಗದುಗಿನ ತೋಂಟದಾರ್ಯ ಮಠದ, ಜೆಟಿವಿಪಿ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು, ಶಿಕ್ಷಣ ತಜ್ಞರು ಅಗಿರುವ ಶ್ರೇಷ್ಠ ಪಂಥದ ಅರ್ಥಶಾಸ್ತ್ರಜ್ಞರಾದ ಪೊ.ಶಿವಾನಂದ ಪಟ್ಟಣಶೆಟ್ಟರ ಅವರು ಗೈದಿರುವ ಸಮಾಜಪರ ಸೇವಾ ಹಿತ ಕಾಯಕಗಳ ಮಹೋನ್ನತ ಮಜಲಗಳು ನಿಜಕ್ಕೂ ಆವಣೀರ್ಯವಾಗಿವೆ ಎಂದು ಆಲಮಟ್ಟಿ ಮಂಜಪ್ಪ ಹರ್ಡೇಕರ ಸ್ಮಾರಕ ಪಪೂ ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಭುಸ್ವಾಮಿ ಹೇಮಗಿರಿಮಠ ಹೇಳಿದ್ದಾರೆ.
ಪೊ ಪಟ್ಟಣಶೆಟ್ಟರ ಅವರಲ್ಲಿ ಹುದುಗಿರುವ ಕಾಯಕ ನಿಷ್ಠೆ ಬಹುವಿಶಾಲ. ಕೊಡುಗೆ ಅಭೂತಪೂರ್ವವಾಗಿವೆ. ಪ್ರಾಮಾಣಿಕತೆಯ ಶಿಸ್ತು ಬದ್ದತೆಯ ಕಾಯಕ ತತ್ಪರತೆಯಿಂದ ತೋಂಟದಾರ್ಯ ಶ್ರೀಮಠಕ್ಕೆ ಹೊಸತನದ ಮೆರುಗು ತಂದಿದ್ದಾರೆ, ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಯಲ್ಲಿ ಮಿನುಗುತ್ತಿವೆ. ನವತನದ ಹೊಸಭಾವ ಮೇಳೈಸಿವೆ. ಸಂಸ್ಥೆಯ ನೌಕರರ ಬದುಕಿಗೆ ಆಶಾಕಿರಣವಾಗಿ ಗೋಚರಿಸಿದ್ದಾರೆ. ಪ್ರೊ ಪಟ್ಟಣಶೆಟ್ಟರ ಅವರ ಪ್ರತಿಯೊಂದು ಕೆಲಸ, ಕಾರ್ಯಗಳು ಅತ್ಯಂತ ಚಿಂತನಾಶೀಲವಾಗಿ, ವೈಚಾರಿಕವಾಗಿ ಸಾಗಿವೆ ಎಂದರು. ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಪ್ರೊ ಪಟ್ಟಣಶೆಟ್ಟರ ಅವರು ಸಮಾಜಕ್ಕಾಗಿ, ಪರಹಿತಕ್ಕಾಗಿ ಇಡೀ ಜೀವಮಾನವನ್ನೇ ಮೀಸಲಿಟ್ಟು ತಮ್ಮ ರಸಧಾರೆಯ ಜೀವತನವನ್ನು ಸವೆದಿದ್ದಾರೆ.
ಲಿಂ,ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳ ವೈಚಾರಿಕ ನಿಲುವುಗಳ ಚಿಂತನೆಗಳಿಗೆ ಸ್ಪಂದಿಸಿ, ಹಗಲಿರುಳು ಸಾಥ್ ನೀಡಿ ಭಕ್ತಿಭಾವದಿಂದ ಅರ್ಿತರಾಗಿ ಕೆಲಸ ಮಾಡಿದ್ದಾರೆ. ಅವರ ಕಾಯಕದ ತೃಷೆ ಭಾಷ್ಪ ಸಮಾಜ ಎಂದು ಮರೆಯುವುದಿಲ್ಲ. ತೋಂಟದ ಡಾ. ಸಿದ್ದರಾಮ ಪೂಜ್ಯರ ಚಿಂತನೆಗಳಿಗೂ ಪೊ, ಪಟ್ಟಣಶೆಟ್ಟರ ಅವರು ಪ್ರಾಮುಖ್ಯತೆಯನ್ನು ನೀಡಿ ಶ್ರೀಮಠ ಹಾಗೂ ಶಿಕ್ಷಣ ಸಂಸ್ಥೆಗಳ ಉನ್ನತಿಗೆ ಶ್ರಮಿಸಿ ಉಭಯ ಶ್ರೀಗಳವರ ಕನಸುಗಳನ್ನು ಸಾಕಾರಗೊಳಿಸುತ್ತಿರುವುದು ಗಮನಾರ್ಹವಾಗಿದೆ ಎಂದರು.
ಪಟ್ಟಣಶೆಟ್ಟರ ಅವರು ಸಾಮಾನ್ಯ ಕುಟುಂಬ ಪರಿವಾರದಲ್ಲಿ ಜನ್ನವೆತ್ತಿ ಅಸಾಮಾನ್ಯ ಕೈಂಕರ್ಯಗಳೊಂದಿಗೆ ಬೆಳೆದುಬಂದ ಪಯಣ ಚೈತ್ರದ ದ್ಯೋತಕವಾಗಿವೆ. ಗದುಗಿನ ತೋಂಟದಾರ್ಯ ಮಠದ, ವಿದ್ಯಾಪೀಠದ ಆಡಳಿತಾಧಿಕಾರುಗಳಾಗಿ, ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಕಾರ್ಯದರ್ಶಿಗಳಾಗಿ, ಡಂಬಳ ಕಾಲೇಜಿನ ಪ್ರಾಂಶುಪಾಲರಾಗಿ, ವಿವಿಧ ಸಾಮಾಜಿಕ ರಂಗದಲ್ಲಿ ಅಗಣನೀಯ ಸೇವೆ ಸಲ್ಲಿಸಿದ್ದಾರೆ. ಒಂದು ಕಾಲದಲ್ಲಿ ತೋಂಟದಾರ್ಯ ಮಠ ಮಾಸಿ ಮುಸುಕಾಗುತ್ತಿದ್ದ ಸಂದರ್ಭದಲ್ಲಿ ಶ್ರೀಮಠದ ಪುನಶ್ಚೇತನದ ಶ್ರೇಯೋಭಿವೃಧ್ಧಿಗಾಗಿ ಕೈಗೊಂಡ ಅಚಲ ಸಂಕಲ್ಪ ಪರಿಕಲ್ಪನೆಗೆ ನಿಲುಕುದಂಥದ್ದು.
ಶ್ರೀಮಠ, ಶಿಕ್ಷಣ ಸಂಸ್ಥೆಗಳು ಇಂದು ವೈಭವೋಪೇತ ರೂಪ ತಾಳಿವೆ. ನಿಷ್ಕಲ್ಮಶ ಪ್ರೀತಿ, ವಿಶ್ವಾಸಾರ್ಹ ಕಾಯಕ ಜೀವ ಶುಭ್ರ ನಡೆಯಿಂದ ಸಾಗಿರುವ ಪ್ರೊ ಶಿವಾನಂದ ಪಟ್ಟಣಶೆಟ್ಟರ ಅವರು ವ್ಯಕ್ತಿ ಅಲ್ಲ. ಅವರೊಬ್ಬರು ದೊಡ್ಡ ಶಕ್ತಿಯಾಗಿದ್ದಾರೆ. ಸದ್ಗುಣ, ಸಜ್ಜನಿಕೆ ಈ ಅಪರೂಪದ ಜೀವ ಎಂದೂ ಪ್ರಶಸ್ತಿ, ಪುರಸ್ಕಾರ, ಸನ್ಮಾನಕ್ಕೆ ಹಂಬಲಿಸಿದವರಲ್ಲ.ರಂಜಿತ ಗೋಜಿಗೆ ಹೋದವರಲ್ಲ. ಪ್ರಚಾರದಿಂದ ಅದೆಷ್ಟೋ ದೂರುಳಿದು ಸೌಮ್ಯದಿಂದಲೇ ಬಸವಣ್ಣನವರ ಕಾಯಕ ತತ್ವಕ್ಕೆ ಅಂಟಿಕೊಂಡು ಗತ್ತು, ಗಮ್ಮಗಳಿಲ್ಲದೇ ಸರಳತೆಯಿಂದ ಕೆಲಸ, ಕಾರ್ಯಗಳನ್ನು ಮಾಡಿದ್ದಾರೆ.
ಹಿತೈಷಿಗಳ ಒತ್ತಾಸೆ ಮೇರಿಗೆ ಗೌರವದಾಯಕವಾಗಿ ಕೊಡಮಾಡುವ ಪ್ರಾಂಜಲ್ಯಪೂರ್ವಕ ಪ್ರೀತಿ ಸನ್ಮಾನ ಗೌರವಗಳನ್ನು ಲಿಂ, ಸಿದ್ದಲಿಂಗ ಶ್ರೀಗಳವರ ಅಣತಿಯಂತೆ ಇತ್ತೀಚಿನ ವರ್ಷಗಳಲ್ಲಿ ಸ್ವೀಕರಿಸಿದ್ದಾರೆ. ಇಂಥ ವಿಶಿಷ್ಟ, ಭಾವೈಕ್ಯತಾ ಭಾವದಿಂದ ಕಾಯಕ ರಂಗಕ್ಕೆ ಹಗಲು, ರಾತ್ರಿ ಎನ್ನದೇ ಮನಪೂರಕ ಸಮರ್ಿಸಿಕೊಂಡು ಗೈದಿರುವ ಅಮೋಘಯುತ ಕಾಯಕ ನಮಗೆಲ್ಲ ಪ್ರೇರಣಾದಾಯಕವಾಗಿದೆ. ದಣಿವರಿಯದ ಜೀವ ಚೈತ್ರ ಪಟ್ಟಣಶೆಟ್ಟರ ಅವರಿಗೆ ಇಂದು ಕಾಯಕಯೋಗಿ ಪ್ರಶಸ್ತಿ ದೊರೆತಿರುವುದು ಅಪಾರ ಸಂತಸ ತಂದಿದೆ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಹೃದಯ ಪೂರಕವಾಗಿ ಅಭಿನಂದಿಸಿದ್ದಾರೆ.
ಎಂಎಚ್‌ಎಂ ಪದವಿ ಕಾಲೇಜಿನ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ನೇತೃತ್ವದಲ್ಲಿ ಪ್ರಾಧ್ಯಾಪಕಿ ಅಂಬಿಕಾ ಇಟಗಿ, ಸಿದ್ದಮ್ಮ ಪಾಟೀಲ, ಸಾವಿತ್ರಿಬಾಯಿ ಕಲ್ಖಾಣಿ, ಆಶಾ ಬಿರಾದಾರ, ರೇಣುಕಾ ಮಾದರ, ಪ್ರಾಧ್ಯಾಪಕ ಪ್ರಭು ಕಲಗೊಂಡ, ಸಿ.ಎಸ್.ಹೊಸಮನಿ, ತೀರ್ಥಲಿಂಗ ಮೇಟಿ, ಈರಣ್ಣ ಕುಮಟಗಿ ಹಾಗೂ ಎಂಎಚ್‌ಎಂ ಪಪೂ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಚ್.ಎನ್.ಕೆಲೂರ, ಪ್ರಕಾಶ ಧನಶೆಟ್ಟಿ, ಎಮ್.ಎಸ್.ಸಜ್ಜನ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ, ಧನರಾದ ಸಿಂಗಾರಿ, ತಿಮ್ಮಣ್ಣ ದಾಸರ ಸೇರಿದಂತೆ ಅಂಗ ಸಂಸ್ಥೆಯ ಶಾಲೆಗಳ ಮುಖ್ಯಸ್ಥರು, ಸಿಬ್ಬಂದಿಗಳು ಪೊ, ಶಿವಾನಂದ ಪಟ್ಟಣಶೆಟ್ಟರ ಅವರ ಮುಡಿಗೆ ಕಾಯಕಯೋಗಿ ಪ್ರಶಸ್ತಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಕಾರ್ಮಿಕ ದಿನಾಚರಣೆ ಶುಕ್ರವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಆಯೋಜನೆಗೊಂಡಿರುವ ಸಮಾರಂಭದಲ್ಲಿ ಪೊ. ವಾನಂದ ಪಟ್ಟಣಶೆಟ್ಟರ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ, ಹುಲಿಕಲ್ ನಟರಾಜ್,ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್ ಬಣಕಾರ, ರಾಜ್ಯ ಉಪಾಧ್ಯಕ್ಷೆ ಸುಧಾ ಹುಚ್ಚಣ್ಣವರ ಇತರರು ಅಭಿನಂದಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 