ಶೈಕ್ಷಣಿಕ ಸಾಧಕರಿಗೆ ಪ್ರೋತ್ಸಾಹ ಅಗತ್ಯ: ಕೆ.ಜಿ. ಮೋಹನ್
Educational achievers need encouragement: K.G. Mohan
ರಾಣೇಬೆನ್ನೂರು 27: ಯಾವುದೇ ಪ್ರತಿಭೆಗಳಿಗೆ ಮತ್ತು ಅವರು ಮಾಡಿದ ವಿಶೇಷ ಸಾಧನೆಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವರಲ್ಲಿರುವ ಆಂತರಿಕ ಶಕ್ತಿ ಮತ್ತಷ್ಟು ಹೆಚ್ಚಳವಾಗಲು ಮತ್ತು ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆಯ ಧರ್ಮದರ್ಶಿ ಕೆ.ಜಿ. ಮೋಹನ್ ಹೇಳಿದರು.
ಅವರು ಇಲ್ಲಿನ ಶ್ರೀರಾಮನಗರದಲ್ಲಿರುವ ಸಂಸ್ಥೆಯ ಸಭಾಭವನದಲ್ಲಿ ನಡೆದ, 9ನೇ ವಾರ್ಷಿಕೋತ್ಸವ, ದ್ವಿತೀಯ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳ ಅಭಿನಂದನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಪೂರ್ಣ ಸೇವೆಯೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಅದರ ಬೆಳವಣಿಗೆ ಮತ್ತು ಸಾಧನೆಗೆ ನಗರದ ನಾಗರಿಕರ ತುಂಬು ಸಹಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪವನ್ ಕುಮಾರ ಮಲ್ಲಾಡದ, ಚಿಕ್ಕೋಡಿಯ ಪ್ರಾಚಾರ್ಯ ಪ್ರಕಾಶ ಗಂಗಾ, ರೋಟರಿ ಅಧ್ಯಕ್ಷ ಬಿ.ಜಿ. ಹಿರೇಮಠ, ಇನ್ನರ್ ವ್ಹಿಲ್ ಅಧ್ಯಕ್ಷ ಡಾ, ದೀಪಾಲಿ ಪುನೀತ್, ಸಂಸ್ಥೆಯ ವರದರಾಜು, ವರ್ತಕ ಜಿ.ಜಿ. ಹೊಟ್ಟಿಗೌಡ್ರ, ಸುಧೀರ್ ಕುರುವತ್ತಿ, ವಸಂತ ಹುಲ್ಲತ್ತಿ, ಸಂಜನಾ ಕುರುವತ್ತಿ ಪರಮೇಶಪ್ಪ ಮುದಿಗೌಡರ, ಸುಮಾ ಹೊಟ್ಟಿಗೌಡ್ರ ಸೇರಿದಂತೆ ಮತ್ತಿತರ ಗಣ್ಯರು ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 