ಅಂಕಗಳನ್ನು ಪಡೆಯುವದಕ್ಕೆ ಶಿಕ್ಷಣ ಮಿಸಲಾಗಬಾರದು ಮಹಾಂತೇಶ ದರಗದ
Education should not be equated with getting marks, says Mahantesh Dargada
ಕೊಪ್ಪಳ 23: ವಿದ್ಯಾರ್ಥಿಗಳ ಹೆಚ್ಚು ಅಂಕಗಳನ್ನು ಪಡೆಯುವುದು ಮುಖ್ಯವಲ್ಲ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಶಿಕ್ಷಣದ ಮುಖ್ಯ ಉದ್ಧೇಶ ಆಗ ಬೇಕಾಗಿದೆ ಎಂದು ಜಿಲ್ಲಾ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ರವರು ಹೇಳಿದರು. ಪಟ್ಟಣದ ಸಮೀಪ ದದೇಗಲ್ಲದಲ್ಲಿರುವ ಎಸ್.ಎ.ನಿಂಗೋಜಿ ಇಂಟರ್ ನ್ಯಾಶನಲ್ ಪಬ್ಲಿಕ ಶಾಲೆಯ 11 ನೇ ವಾರ್ಷೀಕೊತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂದಿನ ಪೂರ್ವ ಶಿಕ್ಷಣದಲ್ಲಿನೈತಿಕತೆಗೆ ಹೆಚ್ಚು ಆಧ್ಯತೆಯನ್ನು ಕೊಡಲಾಗುತ್ತಿತ್ತು. ಶಿಕ್ಷಣದ ಉದ್ಧೇಶ ನೌಕರಿಯನ್ನು ಪಡೆದುಕೊಳ್ಳುವದಕ್ಕೆ ಸೀಮಿತವಾಗಬಾರದು ಉತ್ತಮ ಸಮಾಜವನ್ನು ಕಟ್ಟುವುದು ಹಾಗೂ ನೈತಿಕತೆಯು ಅಧಃಪತನವಾಗದಂತೆ ಸಂರಕ್ಷಿಸಿದಾಗ ಜೀವನ ಸಮ್ರದ್ಧಿ ಆಗುತ್ತದೆ.
ವಿದ್ಯೆಗಿಂತ ವಿನಯ ಮುಖ್ಯಪ್ರೀತಿ ಪ್ರೇಮ ಹೆಸರಿನಲ್ಲಿ ಮೋಸ ವಂಚನೆ ಆಗದಂತೆ ಪವಿತ್ರತೆಗೆ ಹೆಸರಾಗಬೇಕು ಎಂದರು. ಮಕ್ಕಳ ಮನಸನ್ನು ಅರಿತು ಅವರ ಅಭಿರುಚಿಗೆ ತಕ್ಕ ಶಿಕ್ಷಣವನ್ನು ಶಿಕ್ಷಕರು ಬೋಧಿಸಿದಾಗ ಆ ಮಗುವಿನ ಕಲಿಕಾಸಕ್ತಿ ಇಮ್ಮಡಿಗೊಂಡು ಮುಂದೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಈ ದಿಶೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಜಾಗೂರಕತೆ ವಹಿಸಬೇಕೆಂದು ಕರೆ ನೀಡಿದರು. ಕಾನೂನಿನ ತಿಳುವಳಿಕೆ ಇಲ್ಲದೆ ಇರುವದಕ್ಕೆ ಅಪರಾಧಿ ಮನೋಭಾವನೆಯುಳ್ಳವರು ಸಮಾಜದಲ್ಲಿ ಹೆಚ್ಚಾಗುತ್ತಿರುವದಕ್ಕೆ ಕಳವಳ ವ್ಯಕ್ತಪಡಿಸಿದರು. ಸಾನಿಧ್ಯವಹಿಸಿದ್ದ ಚುಕನಕಲ್ಲ ವಿವೇಕಾನಂದ ಆಶ್ರಮದ ಚೈತನ್ಯಾನಂದ ಸ್ವಾಮೀಜಿಗಳು ಆಶೀರ್ವದಿಸುತ್ತಾ ನಿಂಗೋಜಿ ಶಿಕ್ಷಣ ಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ನೀಡುವದರ ಜೊತೆಗೆ ನೈತಿಕತೆಯ ಪಾಠಗಳನ್ನು ಬೋಧಿಸಿ ವಿದ್ಯಾರ್ಥಿಗಳ ಮನೋ ವಿಕಾಸಕ್ಕೆ ಪ್ರೇರಣೆ ನೀಡುವುದು ಸ್ವಾಗತಾರ್ಹವಾಗಿದೆ ಎಂದರಲ್ಲದೆ ಶಿಕ್ಷಣದ ಮಹತ್ವವನ್ನು ಗ್ರಾಮೀಣಪ್ರದೇಶಕ್ಕೆ ಕೊಂಡೊಯ್ದು ಗ್ರಾಮೀಣ ಪ್ರತಿಭೆಗಳ ಅನಾವರಣ ಗೊಳಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಈಗಾಗಲೆ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲಾದ್ಯಾಂತ ಹೆಸರು ಮಾಡಿರುವ ನಿಂಗೋಜಿ ಶಿಕ್ಷಣ ಸಂಸ್ಥೆ ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು. ಅಧ್ಯಕ್ಷತೆಯನ್ನು ನಿ.ಪ್ರಾಚಾರ್ಯ ಜಿ.ಎಂ.ನಿಂಗೋಜಿ ವಹಿಸಿಕೊಂಡು ಮಾತನಾಡುತ್ತಾ ಅನೇಕ ಕಷ್ಟ ನಷ್ಟಗಳ ಮಧ್ಯ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ ಮಕ್ಕಳಿಗೆ ನಿಲುಕಲಾರದ ಶಿಕ್ಷಣವನ್ನು ಗ್ರಾಮಾಂತಾರ ಜನರಿಗೆ ತಲುಪಿಸುವ ಕಾರ್ಯ ವನ್ನು ಎಲ್ಲರೂ ಮೆಚ್ಚಲೆ ಬೇಕೆಂದು ಹೇಳುತ್ತಾ ಇನ್ನು ಅನೇಕ ಕೋರ್ಸಗಳನ್ನು ತಂದು ಎಲ್ಲರಿಗೂ ಅನುಕೂಲವಾಗಲಿ ಎಂದು ಶುಭ ಕೋರಿದರು. ಮರಿಯಪ್ಪ ಲಿಂಗಣ್ಣನವರ ದಂಪತಿಗಳ ಸುವರ್ಣ ವಿವಾಹ ಮಹೋತ್ಸವವನ್ನು ಹಾಗೂ ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣಾಭಿವ್ರದ್ಧಿ ಟ್ರಸ್ಟಿನ ಅಧ್ಯಕ್ಷರು ಹಾಗೂ ಹಿರಿಯ ನ್ಯಾಯವಾದಿಗಳಾದ ಶಶಿಕಾಂತ ನಿಂಗೋಜಿ ರವರ 55 ನೇ ಹುಟ್ಟು ಹಬ್ಬವನ್ನು ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳು ಆಚರಿಸಿದರು.
ವಾರ್ಷೀಕ ಕ್ರೀಡಾ ಕೂಟದಲ್ಲಿ ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು ಚಿಣ್ಣರ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ನ್ಯಾಯವಾದಿಗಳಾದ ವಿವೇಕ ಜೈನ ಐ.ಬಿ.ನಿಡಗುಂದಿ ಬಿ.ಎಂ.ಸಜ್ಜನ ಪ್ರಕಾಶ ಹಾದಿಮನಿ ರಾಜಾಸಾಬ ಬೆಳ್ಳಕುರ್ಕಿ ಯು.ಎಸ್. ಸೊಪ್ಪಿಮಠ ರತ್ನಮ್ಮ ನಿಂಗೋಜಿ ರಾಜಶೇಖರ ನಿಂಗೋಜಿ ಪ್ರಾ. ಸಂಪತ್ ಆಕಳವಾಡಿ ರವಿ ನಿಂಗೋಜಿ ಅಂದಪ್ಪ ಸೊಂಪುರ ಬಸವರಾಜ ಸೊಂಪೂರ ?ಶಶಿಕಲಾ ನಿಂಗೋಜಿ ಶಿವಪುತ್ರ್ಪ ಹಾಗೂ ಇನ್ನೀತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಲಿಂಗರಾಜ ಬಿಸನಳ್ಳಿ ಹಾಗೂ ಖಾನಸಾಬ ಕಲ್ಲೂರ ರವರು ಸಂಗೀತ ಕಾರ್ಯಕ್ರಮ ನೀಡಿ ಸ್ವಾಗತ ಗೀತೆ ಗೈದರು. ಗದುಗಿನ ಪಿಪಿಜಿ ಕಾಲೇಜಿನ ಸಹ ಪ್ರಾಧ್ಯಾಪಕರು ಹಾಗೂ ಟ್ರಸ್ಟಿಗಳಾದ ಫ್ರೊ.ಡಾ. ವಿ.ಎ. ನಿಂಗೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವಯ್ಯ ನಿರೂಪಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 