ಕೊಪ್ಪಳದಲ್ಲಿ ಕಲಿಕೆಯೇ ಕಲ್ಯಾಣ ಅಭಿಯಾನ ಪ್ರಾರಂಭ

ಕೊಪ್ಪಳದಲ್ಲಿ ಕಲಿಕೆಯೇ ಕಲ್ಯಾಣ ಅಭಿಯಾನ ಪ್ರಾರಂಭ Education is welfare campaign launched in Koppal

              ಕೊಪ್ಪಳ 31:  ಕಲ್ಯಾಣ ಕರ್ನಾಟಕ ಪ್ರದೇಶದ ಗಂಭೀರ ಶೈಕ್ಷಣಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ವಿಧ್ಯಾರ್ಥಿಗಳ ಹಿತ ದೃಷ್ಠಿಯಿಂದಸ್ಟೂಡೆಂಟ್ಸ್‌ ಇಸ್ಲಾಮಿಕ್ ಆರ್ಗನೈಸೇಶನ್ ಓಫ್ ಇಂಡಿಯಾ ಮತ್ತು ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್‌ ್ಘ ಅನಾಲಿಸಿಸ್  ಸಹಯೋಗದೊಂದಿಗೆ “ಕಲಿಕೆಯೇ ಕಲ್ಯಾಣ” ಎಂಬ ತಿಂಗಳ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಇಲಿಯಾಸ್ ನಾಲ್ಬಂದ್ ಅವರು ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಡಿ 15 ರಿಂದ ಫೆಬ್ರವರಿ 15, 2026 ರವರೆಗೆ ಈ ಅಭಿಯಾನ ನಡೆಯಲಿದ್ದು, ಈ ಅಭಿಯಾನದಲ್ಲಿ ವಿಧ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಷಯವಾರು ಭೂದನೆ ಮಾಡಲಾಗುವುದು ಎಂದು ಹೇಳಿದರು.ಭೌಗೋಳಿಕವಾಗಿ ಪ್ರಮುಖವಾದರೂ, ಕಲ್ಯಾಣ ಕರ್ನಾಟಕ ಪ್ರದೇಶ ಶಿಕ್ಷಣದಲ್ಲಿ ಇತರ ಪ್ರದೇಶಗಳಿಗಿಂತ ತೀವ್ರವಾಗಿ ಹಿಂದುಳಿದಿದೆ.

              ಇತ್ತೀಚಿನನ ಎಸ್‌ಎಸ್‌ಎಲ್ಸಿ ಮತ್ತು ದ್ವಿತಿಯ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳು ವಿದ್ಯಾರ್ಥಿಗಳ ಕಾರ್ಯಕ್ಷಮತೆಯಲ್ಲಿ ಆತಂಕಕಾರಿ ಮಟ್ಟವನ್ನು ಎತ್ತಿ ತೋರಿಸಿವೆ, ಈ ಅಭಿಯಾನವು ಸರ್ಕಾರಿ ಮತ್ತು ಮೌಲಾನಾ ಆಜಾದ್ ಶಾಲೆಗಳ ಮೇಲೆ ಗಮನಹರಿಸಿ, ಸಮುದಾಯ-ಕೇಂದ್ರಿತ ಕಾರ್ಯತಂತ್ರವನ್ನು ಹೊಂದಿದ್ದು, ತಕ್ಷಣದ ಮತ್ತು ಸುಸ್ಥಿರ ಬದಲಾವಣೆಯನ್ನು ತರುವ ಗುರಿಯೊಂದಿಗೆ ಈ ಅಭಿಯಾನವನ್ನು ರೂಪಿಸಲಾಗಿದೆ ಎಂದರು.ಇದನ್ನು ಹೊರತು ಪಡಿಸಿ ಎಲ್ಲಿ ಶಿಕ್ಷಕರಿಗೆ ತರಬೇತಿಯ ಅವಶ್ಯಕತೆ ಇದ್ದರೆ ಅವರಿಗೆ ಕೂಡ ತರಬೇತಿ ನೀಡುವ ಕೆಲಸ ಮಾಡಲಾಗುವುದು ಎಮದು ಹೇಳಿದರು.ಈ ಸಂದರ್ಭದಲ್ಲಿ ಎಸ್‌ಐಒ ಜಿಲ್ಲಾಧ್ಯಕ್ಷ ನಬೀಲ್ ಉಮ್ರಿ, ಘಟಕಾಧ್ಯಕ್ಷ ಫುರ್ಖಾನ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.