ಬದುಕಿನ ಎಲ್ಲ ಸಂದರ್ಭದ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ: ಆರ್.ಎಸ್ ಆದಾಪುರ
Education is the solution to all problems in life: R.S. Adapura
ಬೀಳಗಿ 28 : ಇಂದಿನ ವೈಚಾರಿಕ ಯುಗದಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗುವುದು ಅವಶ್ಯಕವಾಗಿದೆ. ಬದುಕಿನ ಎಲ್ಲ ಸಂದರ್ಭಗಳಲ್ಲಿ ಬಂದೊದಗುವ ಸಮಸ್ಯೆಗಳಿಗೆ ಶಿಕ್ಷಣ ಪರಿಹಾರ ದೊರಕಿಸುತ್ತದೆ. ಶಿಕ್ಷಣದಿಂದ ಸರ್ವವೂ ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್ ಆದಾಪುರ ಹೇಳಿದರು.
ತಾಲೂಕಿನ ಮುಂಡಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿಧ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆ ಎಂದರೆ ತಾತ್ಸಾರ ಮಾಡುತ್ತಿರುವ ಈ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಬೋಧನೆ ಮಾಡುತ್ತ ಸಾರ್ವಜನಿಕರ ಪ್ರೀತಿ ಗಳಿಸುತ್ತಿವೆ. ಮುಂಡಗನೂರಿನ ಈ ಶಾಲೆ ಗುಣಮಟ್ಟ ಕಾಯ್ದುಕೊಂಡಿರುವುದು ಸಂತಸ ತಂದಿದೆ ಎಂದರು.
ಬೀಳಗಿ ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ ಮಾತನಾಡಿ, ಸರಕಾರಿ ಶಾಲೆಗಳು ಪ್ರಗತಿದಾಯಕ ಬೋಧನೆ ಮಾಡುತ್ತ ಇಲಾಖೆಯ ಉದ್ದೇಶ ಈಡೇರಿಸುತ್ತಿವೆ. ಸರಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳಿರುವುದರಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ವಿನಂತಿಸಿದರು. ಸರಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಎಚ್ ಜಿ ತಿಪರಡ್ಡಿ ಮತ್ತು ಗ್ರಾಮದ ಬಸವರಾಜ ಧೂತಗುಂಡಿ ಮಾತನಾಡಿದರು.
ಮುಖ್ಯ ಶಿಕ್ಷಕ ಬಾಳನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಮುತ್ತಪ್ಪ ಬಂಡಿ ಅಧ್ಯಕ್ಷತೆ ವಹಿಸಿದ್ದರು. ಮಾಳಿಂಗೇಶ್ವರ ದೇವಸ್ಥಾನದ ಗದ್ದುಗೆ ಪೂಜಾರಿ ಸಾನಿಧ್ಯ ವಹಿಸಿದ್ದರು. ಉಪಾಧ್ಯಕ್ಷ ಅಮೋಘಸಿದ್ದ ಬಿರಾದಾರ, ಪ್ರಕಾಶ ತಿಪರಡ್ಡಿ, ಯಲ್ಲಪ್ಪ ಲೆಂಡಗಿ, ಸುರೇಶ ಮೀಸಿ, ಎಂ ಬಿ ಕುರಿಯವರ, ನಾಮದೇವ ಬಾಡಗಿ, ಈರ್ಪ ಕುಂಬಾರ, ರಾಯಪ್ಪ ಗಾಡದ, ಲಕ್ಷ್ಮಣ ಬಿರಾದಾರ, ಚಿಕ್ಕಯ್ಯ ಪೂಜಾರಿ, ಶಿಕ್ಷಕರಾದ ಮಲ್ಲಿಕಾರ್ಜುನ ಸೋಲಾಪುರ, ಮಂಜುನಾಥ ಬಿರಾದಾರ, ಉಮಾ ಪವಾರ, ಮದೀನಾ ಪೀರಜಾದೆ, ಯಲ್ಲಮ್ಮ ಕಾಂಬಳೆ ಇತರರು ಇದ್ದರು. ಶಾಲೆಯ ಆದರ್ಶ ವಿಧ್ಯಾರ್ಥಿನಿ ಸಾಕ್ಷಿ ಕುಂಬಾರ ಮತ್ತು ಟಾಪರ್ ವಿದ್ಯಾರ್ಥಿ ರವಿ ಬಿರಾದಾರ ಇವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿದವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 