ಶಿಕ್ಷಣ ಕೇವಲ ಅಂಕ ಗಳಿಸುವ ಸಾಧನವಲ್ಲ ಮಾಜಿ ಶಾಸಕ ನೆಹರು ಓಲೆಕಾರ್‌

ಶಿಕ್ಷಣ ಕೇವಲ ಅಂಕ ಗಳಿಸುವ ಸಾಧನವಲ್ಲ ಮಾಜಿ ಶಾಸಕ ನೆಹರು ಓಲೆಕಾರ್‌ Education is not merely a means to secure marks: Former MLA Nehru Olekar

ಬ್ಯಾಡಗಿ 16:  ಶಿಕ್ಷಣವು ಕೇವಲ ಅಂಕಗಳಿಸುವ ಸಾಧನವಲ್ಲ ಉತ್ತಮ ವ್ಯಕ್ತಿತ್ವ. ಸಾಮಾಜಿಕ ಜವಾಬ್ದಾರಿ. ದೇಶಪ್ರೇಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ  ಜಾಲತಾಣಗಳ ದುರುಪಯೋಗ ದಿಂದ ದೂರವಿದ್ದು ತಮ್ಮ ಗುರಿಯತ್ತ ಗಮನ ಹರಿಸಬೇಕು ಎಂದು  ಮಾಜಿ ಶಾಸಕ ನೆಹರು ಓಲೆಕಾರ್ ಅವರು ಹೇಳಿದರು.  

ತಾಲೂಕಿನ ಹಳೆ ಶಿಡೆನೂರು ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ. ನೆಹರು ಶಿಕ್ಷಣ ಸಂಸ್ಥೆ. ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಪ್ರೌಢಶಾಲೆ ಹಾಗೂ   ಚನ್ನಬಸಪ್ಪ ಗುಡ್ಡಪ್ಪ ಓಲೆಕಾರ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ  ಆಶ್ರಯದಲ್ಲಿ 2026.27 ನೇ ಸಾಲಿನ ಶೈಕ್ಷಣಿಕ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು  

ಉದ್ಘಾಟಿಸಿ ಮಾತನಾಡಿದವರು. ಹೊಸದಾಗಿ ಬಂದ ವಿದ್ಯಾರ್ಥಿಯ ಜೀವನದ ಹೊಸ ಅಧ್ಯಾಯ ಇಂದಿನಿಂದ ಆರಂಭವಾಗಿದ್ದು ಉತ್ತಮ ಶಿಕ್ಷಣ ಶಿಸ್ತು ಸಂಸ್ಕಾರ ಮತ್ತು ಕಠಿಣ ಪರಿಶ್ರಮದ ಮೂಲಕ ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ ಶಿಕ್ಷಣದ ಅಭಿವೃದ್ಧಿಗೆ  ನಮ್ಮ ಸಂಸ್ಥೆಯು ಅಗತ್ಯ ಮೂಲ ಸೌಕರ್ಯ ಉತ್ತಮ  ಕಟ್ಟಡಗಳು ಗ್ರಂಥಾಲಯಗಳು ಹಾಗೂ ವಿದ್ಯಾರ್ಥಿ ಕಲ್ಯಾಣ ಯೋಜನೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ಹೇಳಿದರು. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ ಬಿ ಲಿಂಗಯ್ಯ ಅವರು ಮಾತನಾಡಿ ಯಾವುದೇ ವ್ಯಕ್ತಿಯ ಯಶಸ್ಸಿನ ಹಿಂದೆ ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ತ್ಯಾಗ ಇರುತ್ತದೆ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.