ಮಕ್ಕಳಿಗೆ ಶಿಕ್ಷಣ ಒಂದು ಅಮೂಲ್ಯ ರತ್ನ ಇದ್ದಂತೆ : ಮುಖ್ಯ ಶಿಕ್ಷಕ ಪಿ.ಕೆ. ಬಿರಾದಾರ
Education is like a precious gem for children: Headmaster P.K. Biradar
ಲೋಕದರ್ಶನ ವರದಿ
ತಾಂಬಾ 18 : ಮಕ್ಕಳಿಗೆ ಶಿಕ್ಷಣ ಒಂದು ಅಮೂಲ್ಯ ರತ್ನ ಇದ್ದಂತೆ. ಶೈಕ್ಷಣಿಕ ಅಭಿವೃದ್ದಿಯಿಂದ ಎನ್ನೇಲ್ಲಾ ಬದಲಾವಣೆ ಮಾಡುವಂತ ಶಕ್ತಿ ಇದೆ ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಒಳ್ಳೇಯ ಗುಣಮಟ್ಟದ ಶಿಕ್ಷಣ ಜೊತೆ ಮಾನವೀಯ ಮೌಲ್ಯಗಳನ್ನು ನೀಡಿ ಭಾವಿ ಭವಿಷ್ಯತ್ತಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಕೆ. ಬಿರಾದಾರ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನೆಯ ಮೋದಲ ಪಾಠ ಶಾಲೆ ಜನನಿ ತಾನೇ ಮೋದಲ ಗುರು ಆದ್ದರಿಂದ ತಾಯಂದಿಯರು ಮಕ್ಕಳಿಗೆ ಒಳ್ಳೇಯ ಸಂಸ್ಕಾರ ಗುರುಹಿರಿಯರ ಬಗ್ಗೆ ಗೌರವ ಇರುವಂತೆ ನೋಡಿಕೊಳ್ಳಿ. ಕೇವಲ ಶಾಲೆಯ ಶಿಕ್ಷರು ಹೇಳಿದ ಪಾಠ ಪ್ರವಚನಗಳಿಂದ ಸಂತೃಪ್ತಿಯಾಗುವದಕ್ಕಿಂತ ಮಗು ಯಾವ ದಶೇ ದಿಕ್ಕಿನತ್ತ ಸಾಗುತ್ತಿದೆ ಎಂಬುದು ಮನವರಿಕೆ ಮಾಡಿಕೊಳ್ಳಬೇಕು.
ದೇಶದ ಅನೇಕ ಮಹಾನ್ ದಾರ್ಶನಿಕರಾದ ಮಹಾತ್ಮಾಗಾಂಧೀಜಿ ,ಸ್ವಾಮಿ ವಿವೇಕಾನಂದರು, ಡಾ.ಬಿ.ಆರ್ ಅಂಬೇಡ್ಕರ, ಎ.ಪಿ.ಜಿ ಆಬ್ದುಲ್ ಕಲಾಂ, ದೇಶ ರಕ್ಷಿಸಿದ ಶಿವಾಜಿ ಮಹಾರಾಜ ಇಂತಹ ಮಾಹಾತ್ಮರಿಗೆ ಪ್ರೇರಣೆ ನೀಡಿರುವವರೆ ತಾಯಂದಿಯರು ನಿಮ್ಮ ಮಕ್ಕಳಿಗೂ ಕೂಡಾ ಮೋಬೈಲ್ ಸಂಸ್ಕೃತಿಯಿಂದ ದೂರವಿಡಿ. ವಿಜಯಪೂರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ನಮ್ಮಿಂದ ಅಗಲಿದರೂ ಕೂಡಾ ಅವರು ನಡೇದು ಬಂದ ದಾರಿ ಸರಳತೆ ನಮ್ಮೇಲ್ಲರಿಗೂ ಪ್ರೇರಣೆ ಇಂತಹ ಆದರ್ಶ ಮಹಾನ್ ಸಂತರ ಜೀವನ ಆಧಾರಿತ ಪುಸ್ತಕ ಓದಿ ಪಾವನರಾಗಿ ಎಂದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಜಿ.ಎ.ದುದಗಿ, ಜಿ.ಎಸ್.ಬಂದಿ, ಎಸ್.ಆರ್. ಭೋಸಲೆ, ಎಸ್.ವ್ಹಿ.ಮುಂಜಿ, ಸದಾಶಿವ ಅಂಬಾರೆ, ಎಸ್.ಜಿ.ಬಾಣಿಕೊಲ, ಜೋತಿ ಕನ್ನೂರ, ಎಸ್.ಎಸ್. ಖೇಡದ, ಎ.ಎಸ್.ಹರವಾಳ, ಉಪಾಧ್ಯಕ್ಷ ವಿಠ್ಠಲ ಹೋರ್ತಿ, ಮತ್ತು ಎಸ್.ಡಿ.ಎಮ್.ಸಿ. ಸದಸ್ಯರು ಸೇರಿದಂತೆ ಶಿಕ್ಷಕ ಸಿಬ್ಬಂದಿ ವೇದಿಕೆಯಲ್ಲಿದ್ದರು. ನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 