ಗದಗ 05: ಪರಿಶಿಷ್ಟ ವರ್ಗದ ಉನ್ನತ ಶಿಕ್ಷಣ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ 650 ಕಾಲೇಜು ಯುವತಿಯರ ವಸತಿ ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಆದ ಗೋವಿಂದ ಕಾರಜೋಳ ನುಡಿದರು.
ಗದಗ-ಬೆಟಗೇರಿ ನಗರದ ಡಿಸಿಎಂ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 3.98 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿದ ಡಾ. ಬಾಬು ಜಗಜೀವನರಾಂ ಭವನ 232 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಮುಳಗುಂದ ಪಟ್ಟಣದಲ್ಲಿ 10.46 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿದ ಮೊರಾಜರ್ಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳನ್ನು ಒಂದೇ ವೇದಿಕೆಯಡಿ ಉದ್ಘಾಟಿಸಿ ವಸತಿ ನಿಲಯಗಳ ನವೀಕರಣ, ದುರಸ್ತಿ ಹಾಗೂ ಕೊಠಡಿ ನಿಮರ್ಾಣದ 3.49 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪರಿಶಿಷ್ಟ ಕಾಲೇಜು ಯುವತಿಯ ಹಾಸ್ಟೆಲ್ ಗಳ ನಿರ್ಮಾಣಕ್ಕೆ ತಲ 50 ಕೋಟಿ ವೆಚ್ಚವಾಗಲಿದ್ದು ರಾಜ್ಯ ಸರ್ಕಾರ ತಲಾ 10 ಕೋಟಿ ರೂ. ನೀಡಲಿದ್ದು ಉಳಿದುದನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಉಪಮುಖ್ಯಮಂತ್ರಿಗಳು ನುಡಿದರು. ಗದಗ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 46 ವಿದ್ಯಾರ್ಥಿ ನಿಲಯಗಳು 12 ವಸತಿ ಶಾಲೆಗಳು ಇದ್ದು 5500 ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ನೀಡಿರುವುದು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ 402 ವಿದ್ಯಾರ್ಥಿಗಳಿಗೆ 87 ಲಕ್ಷ ರೂ. ನಗದು ಪುರಸ್ಕಾರ ನೀಡಿರುವುದು ಅಭಿನಂದನೀಯ ಕಾರ್ಯ. ಸ್ವಾತಂತ್ರ್ಯಾನಂತರ ನಿರೀಕ್ಷಿತ ಮಟ್ಟದಲ್ಲಿ ಸಾಮಾಜಿಕ, ಆಥರ್ಿಕ, ಏಳ್ಗೆ ಆಗದಿರುವುದಕ್ಕೆ ಶಿಕ್ಷಣದ ಕೊರತೆ ಮುಖ್ಯವಾಗಿದೆ. 1995 ರಲ್ಲಿ ರಾಜ್ಯದಲ್ಲಿ ಒಂದೇ ವಸತಿ ಶಾಲೆ ಇದ್ದು ಈಗ 824 ವಸತಿ ಶಾಲೆಗಳಲ್ಲಿ 1.7 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಒಟ್ಟಾರೆ 1233 ವಿದ್ಯಾರ್ಥಿನಿಲಯಗಳಲ್ಲಿ 3.71ಲಕ್ಷ ಪರಿಶಿಷ್ಟ ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಪ್ರಸಕ್ತ ರಾಜ್ಯ ಸರ್ಕಾರ ಪರಿಶಿಷ್ಟರ ಅಭ್ಯುದಯಕ್ಕಾಗಿ 30 ಸಾವಿರ ರೂ.ಗಳ ವಿಶೇಷ ಘಟಕ ಯೋಜನೆ ರೂಪಿಸಿದೆ. 1000 ಕೋಟಿ ರೂ. ವೆಚ್ಚದಲ್ಲಿ ಭೂ ಒಡೆತನ ಯೋಜನೆ ಜಾರಿಗೊಳಿಸಲಾಗುತ್ತಿದ್ದು ಈಗಾಗಲೇ 247 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 25 ಸಾವಿರ ಪಂಪ್ಸೆಟ್ ಕೊಡಲು ಕ್ರಮ ಕೈಕೊಳ್ಳಲಾಗಿದೆ. ಪರಿಶಿಷ್ಟರ ಸ್ವಯಂ ಉದ್ಯೋಗ , ಕೌಶಲ್ಯಾಭಿವೃದ್ಧಿ ಹಾಗೂ ಮನೆ ನಿಮರ್ಾಣಕ್ಕೆ ರಾಜ್ಯ ಸಕರ್ಾರ ಪ್ರಥಮಾದ್ಯತೆ ನೀಡಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನುಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ ಗಣಿ, ಭೂ ವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಗಳ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಅಭಿನಂದನಾರ್ಹವಾಗಿದೆ. ಚುನಾವಣೆ ನಂತರ ಅಭಿವೃದ್ಧಿಯೇ ಎಲ್ಲ ಜನಪ್ರತಿನಿಧಿಗಳ ಪ್ರಥಮಾದ್ಯತೆ ಆಗಬೇಕು ಎಂದರು. ಬಡಜನರು, ರೈತರ, ಪರಿಶಿಷ್ಟರ, ಹಿಂದುಳಿದ, ಅಲ್ಪಸಂಖ್ಯಾತರ ಹೀಗೆ ವಿವಿಧ ವರ್ಗಗಳ ಅಭಿವೃದ್ಧಿಗೆ ರಾಜ್ಯ ಸಕರ್ಾರ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸಕರ್ಾರದಿಂದ ನೀಡಲಾದ ಸೌಲಭ್ಯಗಳು ಸಾರ್ವಜನಿಕವಾಗಿ ಉಪಯೋಗವಾಗುವಂತೆ ಬಳಕೆಯಾಗುವುದು ಬಹು ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ ಗದಗ ಜಿಲ್ಲೆಯಲ್ಲಿ ಗದಗ-ಬೆಟಗೇರಿ ಪಟ್ಟಣದಲ್ಲಿ 7 ಸೇರಿದಂತೆ ಒಟ್ಟು 14 ಹೆಚ್ಚುವರಿ ವಿದ್ಯಾಥರ್ಿನಿಲಯಗಳ ಕೊರತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಟ 5 ವಿದ್ಯಾರ್ಥಿನಿಲಯಗಳಿಗೆ ಮಂಜೂರಾತಿ ನೀಡಲು ವಿದ್ಯಾಥರ್ಿನಿಲಯಗಳ ನಿರ್ವಹಣೆ ವಿಶೇಷ ಅನುದಾನ ನೀಡಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಜಿಲ್ಲೆಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲು ಅಗ್ರಹಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ ಡಾ. ಬಾಬು ಜಗಜೀವನರಾಂ ಭವನ ಎಲ್ಲ ಮೂಲ ಸೌಲಭ್ಯಗಳನ್ನು ಹೊಂದಿದ ಉತ್ತಮ ಸಮುದಾಯ ಭವನವಾಗಿದೆ. ಇಂದು ಹರಿಣಶಿಕಾರಿ ಸಮುದಾಯದವರಿಗೆ ಉತ್ತಮ ಮೂಲಸೌಲಭ್ಯವುಳ್ಳ 40 ಮನೆಗಳನ್ನು ಪ್ರಥಮ ಹಂತವಾಗಿ ಉದ್ಘಾಟನೆ ಮಾಡಲಾಗಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಗದಗ ಬೆಟಗೇರಿ ಹಾಕಿ ಸ್ಟೇಡಿಯಂ ಇನ್ನು ಮೂರು ತಿಂಗಳಲ್ಲಿ ಆರಂಭಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿ ಇದಕ್ಕಾಗಿ ಉಪಮುಖ್ಯಮಂತ್ರಿ ಕಾರಜೋಳ ಅವರ ಸಹಕಾರ ಅಭಿನಂದನೀಯ ಎಂದರು.
ಸಮಾರಂಭದಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ನೀಡಲಾದ ವಿವಿಧ ಸೌಲಭ್ಯಗಳನ್ನು ಉಪಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಫಲಾನುಭವಿಗಳಿಗೆ ವಿತರಿಸಿದರು. ಇದಕ್ಕೂ ಮುನ್ನ ಬೆಟಗೇರಿ ಭಾಗದಲ್ಲಿ ಹರಿಣಶಿಕಾರಿಗಳ ಸಮುದಾಯದವರಿಗೆ 2.20 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಿದ 40 ಮನೆಗಳನ್ನು ಹುಯಿಲಗೋಳ ರಸ್ತೆಯಲ್ಲಿ 3.38 ಕೋಟಿ ರೂ. ವೆಚ್ಚದಲ್ಲಿ ನಿಮಿಸಿದ ವೃತ್ತಿಪರ ಬಾಲಕಿಯರ ವಸತಿ ನಿಲಯ ಹಾಗೂ ರಾಜೀವ ಗಾಂದಿ ನಗರದ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕಂಪ್ಯೂಟರ್ ಲ್ಯಾಬ್ಅನ್ನು ಉಪಮುಖ್ಯಮಂತ್ರಿಗಳು ಉದ್ಘಾಟಿಸಿದರು. ತದನಂತರ ಬೆಟಗೇರಿ ಮುಕ್ತಿಧಾಮಕ್ಕೆ ಭೇಟಿ ನೀಡಿದರು.
ಸಮಾರಂಭದಲ್ಲಿ ಗದಗ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕುಮಾರ ಸಿದ್ಧಲಿಂಗೇಶ್ವರ ಎಚ್.ಪಾಟೀಲ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ, ಜಿ.ಪಂ. ಸಾಮಾಜಿಕ ನ್ಯಾಯ ಸ್ತಯಿ ಸಮಿತ ಅಧ್ಯಕ್ಷ ಹನುಮಂತಪ್ಪ ಪೂಜಾರ, ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್.ಎಸ್. ಪೆದ್ದಪ್ಪಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ತಾಪಕ ನಿದರ್ೇಶಕ ಪರಶುರಾಮ ಶಿನ್ನಾಳಕರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶ್ರೀನಾಥ ಜೋಶಿ , ಪೌರಾಯುಕ್ತ ಮನ್ಸೂರ ಅಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ ಮುಧೋಳ, ಮಾಜಿ ನಗರಸಭೆ ಸದಸ್ಯ ಕೃಷ್ಣಾ ಪರಾಪೂರ, ಎಸ್.ಎನ್. ಬಳ್ಳಾರಿ , ರಾಜು ಕುರಡಗಿ, ಜನಪ್ರತಿನಿಧಿಗಳು, ಸಮುದಾಯಗಳ ಗಣ್ಯರು, ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.