ಗ್ರಹಣ ನೈಸರ್ಗಿಕವಾಗಿ ಭೂಮಂಡಲದಲ್ಲಿ ಜರುಗುವ ಸಹಜ ಕ್ರಿಯೆಯಾಗಿದೆ: ಅಲ್ಲಮ ಪ್ರಭು ಬೆಟ್ಟದೂರು

ಗ್ರಹಣ ನೈಸರ್ಗಿಕವಾಗಿ ಭೂಮಂಡಲದಲ್ಲಿ ಜರುಗುವ ಸಹಜ ಕ್ರಿಯೆಯಾಗಿದೆ: ಅಲ್ಲಮ ಪ್ರಭು ಬೆಟ್ಟದೂರು Eclipse is a natural phenomenon that occurs naturally on Earth: Allama Prabhu Bettadoor

ಕೊಪ್ಪಳ 22:  ಗ್ರಹಣ ನೈಸರ್ಗಿಕವಾಗಿ ಭೂಮಂಡಲದಲ್ಲಿ ಜರುಗುವ ಸಹಜ ಕ್ರಿಯೆಯಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಹೇಳಿದರು.    

ನಗರದ ಅಶೋಕ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರರು ಕೊಪ್ಪಳ ಇವರು ಆಯೋಜಿಸಿದ ಗ್ರಹಣ ವಿಚಾರ ಮತ್ತು ವೈಜ್ಞಾನಿಕ ನೋಟ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮುಂದುವರೆದು ಮಾತನಾಡಿ ಗ್ರಹಣದಿಂದ ಮನುಷ್ಯರು, ಪ್ರಾಣಿಗಳು ಇತರೆ ಜೀವಿಗಳಿಗೆ ಯಾವುದೇ ಪರಿಣಾಮ ಆಗುವುದಿಲ್ಲ. ಆದರೆ ಬಹಳಷ್ಟು ಜನರು ಮೂಢನಂಬಿಕೆ ಆಚರಣೆಗಳನ್ನು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಆಚರಣೆಗೆ ಮುಂದಾಗಿದ್ದು ಮಕ್ಕಳ ಮೇಲೆ ದುಷ್ಪರಿಣಾಮ ಆಗುತ್ತದೆ. ಗ್ರಹಣವನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡಬೇಕು. ಪ್ರಜ್ಞಾವಂತರು ಮುಂದೆ ನಿಂತು ಇದರಲ್ಲಿ ಯಾವುದೇ ದೋಷ ಇರುವುದಿಲ್ಲ ಎಂದು ಸಾರಬೇಕು ಎಂದರು.    ಮತ್ತೊಬ್ಬ ಸಾಹಿತಿ ಎ.ಎಂ. ಮದರಿ ಮಾತನಾಡಿ ಇದನ್ನು ವೈದಿಕರು ಕೆಟ್ಟ ದಿನ,ದೋಷದ ದಿನವೆಂದು ಜನರಲ್ಲಿ ಭಯ ಉಂಟು ಮಾಡಿ ದೋಷ ನಿವಾರಣೆಗೆ ಅರ್ಚಕರಿಗೆ ದಾನ ಮಾಡಬೇಕೆಂದು ಹೇಳಿ ಆ ತುಪ್ಪ, ಧಾನ್ಯ ತಾವು ತಿನ್ನುತ್ತಾರೆ. ನಮ್ಮ ಮಕ್ಕಳು ಗ್ರಹಣ ದಿನವೇ ಜನಿಸಿದವರು ಯಶಸ್ವಿ ಜೀವನ ಮಾಡುತ್ತಿದ್ದಾರೆ. ಆಹಾರ ಸೇವನೆ ಮಾಡುವ ವಿಷಯದಲ್ಲಿ, ನೀರು ಚೆಲ್ಲಿ ಮನೆ ಶುದ್ಧಿ ಮಾಡುತ್ತಾರೆ. ಗರ್ಭಿಣಿ ಸ್ತ್ರೀಯರಿಗೆ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ ಎನ್ನುವ ಭಯ ಉಂಟು ಮಾಡುತ್ತಾರೆ ಎಂದರು. ಈ ವೈಜ್ಞಾನಿಕ ನೋಟ ಕಾರ್ಯಕ್ರಮದಲ್ಲಿ ಹಣ್ಣುಹಂಪಲು ಸಾರ್ವಜನಿಕರೊಂದಿಗೆ ಸೇವಿಸುವ ಮೂಲಕ ಗ್ರಹಣ ನಮಗಿಲ್ಲ , ಗ್ರಹಣದಿಂದ ದೋಷವಿಲ್ಲ ಎಂದು ಘೋಷಣೆ ಕೂಗಲಾಯಿತು.     

ಮಾನವ ಬಂಧುತ್ವ ವೇದಿಕೆಯ ಮುಖಂಡ ಟಿ.ರತ್ನಾಕರ, ರಾಮಣ್ಣ ಕಲ್ಲನ್ನವರ್, ಭೀಮಣ್ಣ ಹವಳಿ, ವಿಜಯ ಅಮೃತರಾಜ್ ವಕೀಲರು, ಲಿಂಗರಾಜ ನವಲಿ, ಕೆ.ಬಿ. ಗೋನಾಳ, ಶರಣು ಗಡ್ಡಿ, ಅಂದಾನಪ್ಪ ಬೆಣಕಲ್, ಮೂಕಪ್ಪ ಮೇಸ್ತ್ರಿ, ಗಾಳೆಪ್ಪ ಮುಂಗೋಲಿ, ನಿಂಗೂ ಬೆಣಕಲ್, ಗವಿಸಿದ್ದಪ್ಪ ಹಲಗಿ, ಸಂಜೀವಮೂರ್ತಿ ಬೇವಿನಗಿಡದ, ಬೆಟ್ಟಪ್ಪ ಯತ್ನಟ್ಟಿ, ಸೋನಾಕ್ಷಿ ಸಾಸ್ವಿಹಾಳ, ಸೈನಾಜ್ ಬೂದಗುಪಾ, ಗೌರಮ್ಮ ಕುಷ್ಟಗಿ ಮಹ್ಮದ್ ರಫೀ ಗಂಗಾವತಿ, ಶಿವಪ್ಪ ಹಡಪದ, ಮಖಬೂಲ್ ರಾಯಚೂರು ಇವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.