ಋತುವಿಗೆ ತಕ್ಕಂತ ಹಿತ, ಮಿತ, ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ
Eating seasonal, healthy foods in moderation is good for health.
ಬೆಳಗಾವಿ, 19 ; ಕೆ.ಎಲ್.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿಯಲ್ಲಿ ದಿ 19ರಂದು ಹೆಚ್ಚುತ್ತಿರುವ ಹೃದಯಾಘಾತಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಡಾ: ಅರ್ಿತಾ ವಿ.ಎಸ್ ಮಹಿಳಾ ವೈದ್ಯಾಧಿಕಾರಿ, ಹಿರಿಯ ರೆಸಿಡೆಂಟ್ ಸಮುದಾಯ ವೈದ್ಯಕೀಯ ವಿಭಾಗ ಅವರು ಆಗಮಿಸಿದ್ದರು. ಹಾಗೆಯೇ ಪ್ರಾಚಾರ್ಯರಾದ ಡಾ; ವಿ.ಪಿ.ಕುರಿ, ಕಾರ್ಯಕ್ರಮದ ಸಂಯೋಜಕರಾದ ಭುವನೇಶ್ವರಿ ಪಾಟೀಲ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾದ ಡಾ: ಅರ್ಿತಾ ವಿ.ಎಸ್ ಅವರು ಹೃದಯಾಘಾತಕ್ಕೆ ಸಂಬಂಧಿಸಿದ ಅಂಕಿ ಅಂಶಗಳು, ಹೃದಯಾಘಾತಕ್ಕೆ ಕಾರಣಗಳು, ವ್ಯಸನಗಳ ಪರಿಣಾಮಗಳು, ಲಕ್ಷಣಗಳು, ಅ,ಕ,ಖ ನಿಯಂತ್ರಣ ಕ್ರಮಗಳು “ಹಿತ, ಮಿತ, ಋತುವಿಗೆ ತಕ್ಕಂತ ಆಹಾರ ಸೇವನೆ ಆರೋಗ್ಯದ ರಕ್ಷಣೆಗೆ ಎಷ್ಟು ಸಹಾಯಕಾರಿ ಎಂಬುದನ್ನು ತಿಳಿಸಿದರು. ಪ್ರಾಚಾಯ್ರಾದ ಡಾ; ವಿ.ಪಿ.ಕುರಿ ಗುರುಗಳು ಅಧ್ಯಕ್ಷೀಯ ನುಡಿಗಳನ್ನಾಡಿದರು.
ರಾಘವೇಂದ್ರ ಪಾಟೀಲ ಪ್ರಾಥನಾ ಗೀತೆಯನ್ನು ಹಾಡಿದರು, ಬಸವಲಿಂಗಪ್ಪ ಅವರು ಬಂದ ಅತಿಥಿಗಳನ್ನು ಸ್ವಾಗತಿಸಿದರು. ಲಕ್ಷ್ಮೀ ಹಿರೇಮಠ ಅತಿಥಿ ಪರಿಚಯ ಮಾಡಿದರು, ಮಹಾದೇವಿ ಬಾಳೇಕುಂದ್ರಿ ಅವರು ವಂದಿಸಿದರು, ತುಳಸವ್ವಾ ತಳವಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ಪ್ರಶಿಕ್ಷನಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 