ಟೋಕಿಯೊ, ಡಿಸೆಂಬರ್ 18 ದಕ್ಷಿಣ
ಜಪಾನ್‌ನ ಕಾಗೋಶಿಮಾ ಪ್ರಾಂತ್ಯದಲ್ಲಿ ಬುಧವಾರ ಭುಕಂಪ
ಸಂಭವಿಸಿದ್ದು ತೀವ್ರತೆ ರಿಕ್ಟರ್ ಮಾಪನದಲ್ಲಿ 5.0 ಎಂದು ದಾಖಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.ಕಂಪನ 25 ಮೈಲಿ ಆಳದಲ್ಲಿ ದಾಖಲಾಗಿದ್ದರೆ, ಭೂಕಂಪದ ಕೇಂದ್ರಬಿಂದು
ಒಕಿನಾವಾಕ್ಕೆ ಸಮೀಪವಿರುವ ಅಮಾಮಿ ದ್ವೀಪಸಮೂಹದ ಪ್ರದೇಶದಲ್ಲಿ ಕೇಂದಿಕೃತವಗಿತ್ತು ಎನ್ನಲಾಗಿದೆ ದೆ.ಜಪಾನಿನ
ಏಳು-ಬಿಂದುಗಳ ಭೂಕಂಪನ ತೀವ್ರತೆಯ ಪ್ರಮಾಣದಲ್ಲಿ ನಾಲ್ಕು ಎಂದು ಅಳೆಯಲಾಗಿದೆ ಎಂದು ಸ್ಪುಟ್ನಿಕ್ ವರದಿ
ಮಾಡಿದೆ.ಭೂಕಂಪದಿಂದ ಯಾವುದೇ ಸಾವು -ನೋವು ವರದಿಯಾಗಿಲ್ಲ ಮೇಲಾಗಿ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ.