ಅಲಾಸ್ಕಾದಲ್ಲಿ ಭೂಕಂಪ

ನ್ಯೂಯಾರ್ಕ್, ಡಿ19 ಅಲಾಸ್ಕಾದ ಗುಸ್ಟಾವಸ್ ನ 111 ಕಿಲೋಮೀಟರ್ ಪಶ್ಚಿಮದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ.  ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.5 ರಷ್ಟು ದಾಖಲಾಗಿದ್ದು ಬುಧವಾರ ಜಿಎಮ್ ಟಿ 21.52 ಕ್ಕೆ ಈ ಕಂಪನ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. 58.4399 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 137.6481 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ 20.9 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂದು ವರದಿಯಾಗಿದೆ.