ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸದ ಮೇಲೆ ಈಡಿ ದಾಳಿ
EID raids Karwar Congress MLA Satish Sail's residence
ಕಾರವಾರ 13 : ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ರ ಸದಾಶಿವಗಡದ ನಿವಾಸದ ಮೇಲೆ ಈಡಿ ಬುಧುವಾರ ಬೆಳಿಗ್ಗೆ ದಾಳಿ ಮಾಡಿದೆ.ಶಾಸಕ ಸತೀಶ್ ಸೈಲ್ ಬೆಂಗಳೂರನಲ್ಲಿ ಇದ್ದು, ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.ಕಳೆದ ಕೆಲ ತಿಂಗಳಿನಿಂದ ಶಾಸಕರು ಕುಟುಂಬ ಸಮೇತ ಬೆಂಗಳೂರು ನಿವಾಸದಲ್ಲಿ ವಾಸವಾಗಿದ್ದಾರೆ.
ಈಡಿ ಅಧಿಕಾರಿಗಳು ನಾಲ್ಕು ಕಾರುಗಳಲ್ಲಿ ಸದಾಶಿವಗಡದಲ್ಲಿರುವ ಶಾಸಕರ ಮನೆಗೆ ಬಂದಿದ್ದಾರೆ .ಈ ವೇಳೆಮನೆಯಲ್ಲಿ ಯಾರು ಇರಲಿಲ್ಲ. ಸಿಐಎಸ್ ಎಫ್ ,ಅರೆ ಮಿಲಿಟರಿ ಪಡೆಯ ಸಿಬ್ಬಂದಿ ಗಳನ್ನು ಈಡಿ ಅಧಿಕಾರಿಗಳು ರಕ್ಷಣೆಗೆ ಇಟ್ಟುಕೊಂಡಿದ್ದಾರೆ. ಗೋವಾದಿಂದ ಆರು ವಾಹನಗಳಲ್ಲಿ24 ಜನ ಈಡಿ ಅಧಿಕಾರಿಗಳು ಬೆಳಿಗ್ಗೆ ಆಗಮಿಸಿ, ಶಾಸಕರ ಮನೆಯ ಹೊರಗೆ ಆರಂಭದಲ್ಲಿ ಕಾದರು. ನಂತರದೂರವಾಣಿ ಮೂಲಕ ಈಡಿ ಅಧಿಕಾರಿಗಳು ಶಾಸಕರನ್ನು ಸಂಪರ್ಕಿಸಿದ್ದಾರೆ. ಶಾಸಕರು ಕುಟುಂಬದವರಿಗೆ ಮತ್ತು ಮನೆ ಕೆಲಸದ ಸಿಬ್ಬಂದಿಗೆ ಸಹಕಾರ ನೀಡುವಂತೆ ಸೂಚಿಸಿದರು ಎನ್ನಲಾಗಿದೆ. ಈಡಿ ಸಿಬ್ಬಂದಿ ಶಾಸಕರ ಹೆಸರಿನ ಆಸ್ತಿಗಳು, ಸಂಬಂಧಿಕರ ಮತ್ತು ಅಪ್ತರ ಹೆಸರಲ್ಲಿನ ಆಸ್ತಿಗಳ ನೊಂದಣಿ ದಾಖಲೆಗಳನ್ನು,ಬ್ಯಾಂಕ್ ಖಾತೆಗಳನ್ನು ಪರೀಶೀಲಿಸುತ್ತಿದ್ದಾರೆ ಎನ್ನಲಾಗಿದೆ. ಹಣದ ವಹಿವಾಟು ಪತ್ರ ದಾಖಲೆಗಳ ಪರೀಶೀಲನೆ ನಡೆದಿದೆ. ಸಂಜೆತನಕವಾದರೂ ಮನೆಯಲ್ಲಿ ಶೋಧ ಕಾರ್ಯ ಮುಗಿದಿರಲಿಲ್ಲ.
ಶಾಸಕ ಸೈಲ್ ಬೇಲೇಕೇರಿ ಬಂದರಿನಿಂದ ಮಲ್ಲಿಕಾರ್ಜುನ ಅದಿರು ಅಕ್ರಮ ರಫ್ತು ಸಂಬಂಧ ಆರು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ನಂತರ ಅವರು ಜಾಮೀನು ಪಡೆದಿದ್ದಾರೆ.ಜನಪ್ರತಿನಿಧಿಗಳ ಕೋರ್ಟ ಅದಿರು ಅಕ್ರಮ ಸಾಗಟ ಪ್ರಕರಣದಲ್ಲಿ 7 ವರ್ಷ ಶಿಕ್ಷೆ ಹಾಗೂ 4 ಕೋಟಿ ರೂ. ದಂಡ ತುಂಬುವಂತೆ ಪ್ರಕಟಿಸಿತ್ತು.ಜನಪ್ರತಿನಿಧಿಗಳ ಕೋರ್ಟ ತೀರ್ಿಗೆ ಹೈಕೋರ್ಟ್ ನಿಂದ ಶಾಸಕ ಸೈಲ್ ತಡೆಯಾಜ್ಞೆ ತಂದು, ಜಾಮೀನಿನ ಮೇಲೆ ಹೊರಗೆ ಇದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 