ಇ-ಆಸ್ತಿ ನೋಂದಣಿಗೆ ಕಡಿಮೆ ದಾಖಲಾತಿಗಳನ್ನು ಪಡೆಯಬೇಕು : ವಿಜಯ್ ಪಾಟೀಲ
E-Property Registration Needs Fewer Entries : Vijay Patil
ಬೆಳಗಾವಿ 09: ಇ-ಆಸ್ತಿ ನೋಂದಣಿಗಾಗಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಸಂಬಂಧವಿರದ ದಾಖಲಾತಿಗಳ ಬೇಡಿಕೆಯನ್ನು ಮಾಡದೇ, ಕಡಿಮೆ ದಾಖಲಾತಿಗಳನ್ನು ಪಡೆದು ಇ-ಆಸ್ತಿ ನೋಂದಣಿ ಮಾಡಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ್ ಪಾಟೀಲ್ ಇಂದಿಲ್ಲಿ ಒತ್ತಾಯಿಸಿದರು.
ಬುಧವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಆಸ್ತಿ ಇದು ಮಹತ್ವದ ಪ್ರಕ್ರಿಯೆಯಾಗಿದೆ. ಬೆಂಗಳೂರಿನಲ್ಲಿ ಕೇವಲ 4 ದಾಖಲೆಗಳನ್ನು ಕೇಳುತ್ತಿರುವಾಗ ಬೆಳಗಾವಿ ಪಾಲಿಕೆಯಲ್ಲಿ ಹತ್ತಾರು ದಾಖಲೆಗಳನ್ನು ಕೇಳುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಕಿರಿ ಕಿರಿಯಾಗುತ್ತಿದೆ. ಸಿಟಿಎಸ್ ಇದ್ದವರಿಗೆ ಇ-ಆಸ್ತಿ ನೀಡಬೇಕು. ನೂರಾರು ವರ್ಷಗಳ ಕಾಲ ಹಳೆಯದಾದ ಸಾಲ ಬಾಧ್ಯತಾ ಪ್ರಮಾಣಪತ್ರ ನೀಡುವುದು ಕಷ್ಟಕರ. ಸಾಲ ಬಾಧ್ಯತಾ ಪ್ರಮಾಣಪತ್ರಕ್ಕೂ ಮತ್ತು ಇ- ಆಸ್ತಿಗೆ ಯಾವುದೇ ಸಂಬಂಧವಿಲ್ಲ ಎಂದರು.
ಇನ್ನು ಬಿ-ಖಾತಾ ನೋಂದಣಿ ಕುರಿತು ಮೊದಲೂ ಜನರಿಗೆ ಸ್ಪಷ್ಟತೆಯನ್ನು ನೀಡಬೇಕು. ಜಿಲ್ಲಾಧಿಕಾರಿಗಳು ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರು ಈ ಕುರಿತು ಮಾಧ್ಯಮಗೋಷ್ಟಿಯನ್ನು ನಡೆಸಿ ಮಾಹಿತಿಯನ್ನು ನೀಡಬೇಕು. ಎರಡುವರೆ ಲಕ್ಷ ಆಸ್ತಿಗಳಿರುವುದಾಗಿ ಮಹಾನಗರ ಪಾಲಿಕೆಯೇ ಮಾಹಿತಿ ನೀಡುತ್ತಿರುವಾಗ, ದಾಖಲಾತಿಗಳನ್ನು ಕಡಿಮೆ ಪಡೆದು, ಇ- ಆಸ್ತಿಯ ನೋಂದಣಿ ಹೆಚ್ಚಾಗಬೇಕು. ಸಿ.ಟಿ.ಎಸ್. ಆಧಾರದ ಮೇಲೆ ಮನೆ ಮನೆಗೆ ತೆರಳಿ ಇ-ಆಸ್ತಿಯನ್ನು ನೋಂದಾಯಿಸಬೇಕು ಎಂದು ಆಗ್ರಹಿಸಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿ ಪವನ್ ಕುಮಾರ್, ಸೋನಿಯಾ ಡಿಸೋಜಾ ದಕ್ಷಿಣ ಜಿಲ್ಲಾದ್ಯಕ್ಷ ಸುದೀಪ್ ನೇಸರಕರ, ಯುವ ಘಟಕದ ಅಧ್ಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 