ಸಮೀಕ್ಷೆಯ ಸಂದರ್ಭದಲ್ಲಿ ಧರ್ಮ ಲಿಂಗಾಯತ ಎಂದು ನಮೂದಿಸಿ: ಬಸವರಾಜ ರೊಟ್ಟಿ
During the survey, mention religion as Lingayat: Basavaraja Rotty
ಚಿಕ್ಕೋಡಿ 30 : ಸಮೀಕ್ಷೆಯ ಸಂದರ್ಭದಲ್ಲಿ ಧರ್ಮ ಲಿಂಗಾಯತ ಎಂದು ನಮೂದಿಸಿ ಜಾತಿಯನ್ನು ಲಿಂಗಾಯತ ದೊಂದಿಗೆ ತಮ್ಮ ತಮ್ಮ ಜಾತಿ/ಒಳಪಂಗಡಗಳನ್ನು ನಮೂದಿಸಬೇಕೆಂದು ಬೆಳಗಾವಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.
ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು .ಕರ್ನಾಟಕದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯನ್ನು ಮಾಡಲು ಆದೇಶ ಮಾಡಿದೆ. ಜಾತಿ ಗಣತಿ ಸಮೀಕ್ಷೆಯಲ್ಲಿ ಸುಮಾರು 60 ಕಾಲಂಗಳಿವೆ, ಇದರಲ್ಲಿ ಕುಟುಂಬದ ಎಲ್ಲ ಸದಸ್ಯರ ಮಾಹಿತಿ, ಆರ್ಥಿಕ ಸ್ಥಿತಿ ಮುಂತಾದ ವಿವರಗಳನ್ನು ಒಳಗೊಂಡಿವೆ.ಧರ್ಮದ ಕಾಲಂ 8ರಲ್ಲಿಯ ಕ್ರಮಾಂಕ 11 (ಇತರೆ) ಅಲ್ಲಿ ಲಿಂಗಾಯತ ಎಂದು ಬರೆಸಬೇಕು ಜಾತಿ ಕಾಲಂ 09 ರಲ್ಲಿ ಲಿಂಗಾಯತದೊಂದಿಗೆ ತಮ್ಮ ತಮ್ಮ ಒಳಪಂಗಡ/ ಜಾತಿಯನ್ನು ಬರೆಸಬೇಕು ಎಂದರು.ಲಿಂಗಾಯತವು 12ನೇ ಯ ಶತಮಾನದಲ್ಲಿ ಸ್ಥಾಪಿತವಾದ ಸ್ವತಂತ್ರ ಧರ್ಮ 12ನೇ ಶತಮಾನದಲ್ಲಿಯ ವರ್ಣಾಶ್ರಮ ಪದ್ಧತಿ, ಮೇಲುಕೀಳು, ಸ್ಪರ್ಶ ಆಸ್ಪಶ್ರಕ, ಬಡವ ಬಲ್ಲಿದ, ಜಾತಿ ಮತ, ಪಂಥ ಭಾಷೆ ಲಿಂಗ, ಬೇಧವಿಲ್ಲದೆ ಸಮ ಸಮಾಜವನ್ನು ನಿರ್ಮಾಣ ಮಾಡದರು.ಸಮಾಜದಲ್ಲಿಯ ಅನಿಷ್ಠ ಪದ್ಧತಿಗಳಾದ ಅಂಧಶೃದೆ. ಮೂಢನಂಬಿಕೆ ಕಂದಾಚಾರ, ಢಂಬಾಚಾರ, ಭೇದ ಬಾವ ತೊಡೆದುಹಾಕಿ ಸಮಾಜ ಸುಧಾರಣೆಗಾಗಿ ಅನುಭವ ಮಂಟಪ ಸ್ಥಾಪಿಸಿದರು.ರಾಜಸತ್ತೆಯ ಕಾಲದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಸತ್ತೆಗೆ ನಾಂದಿ ಹಾಡಿದವರು ಬಸವಣ್ಣನವರು ವಚನ ಚಳುವಳಿಯ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿ, ಸ್ತ್ರೀ ಪುರುಷ ಭೇದ ವಿಲ್ಲದೆ, ಎಲ್ಲರಿಗೂ ಸಮಾನ ಅವಕಾಶ ನೀಡಿ ಅಭಿವ್ಯಕ್ತಿ ಸ್ವತಂತ್ರ ಅನುವುಮಾಡಿಕೊಟ್ಟರು.ಆ ಮೂಲಕ ಸಮ ಸಮಾನತೆಯ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು.
ಲಿಂಗಾಯತ ಧರ್ಮ ಬಸವಣ್ಣನವರಿಂದ 12ನೇ ಶತಮಾನದಲ್ಲಿ ಸ್ಥಾಪಿತವಾದ ಸರ್ವತಂತ್ರ ಸ್ವತಂತ್ರ ಧರ್ಮ. ಲಿಂಗಾಯತ ಧರ್ಮದ ಆಚರಣೆಗಳು ಉಳಿದ ಧರ್ಮದವರಿಂದ ಬಿನ್ನವಾಗಿದೆ.ಸರ್ವೋಚ್ಚ ನ್ಯಾಯಾಲಯದ ತೀರ್ುಗಳಲ್ಲಿಯೂ ಕೂಡ ಇದು ಉಲ್ಲೇಖವಾಗಿದೆ. ಆದ್ದರಿಂದ ಲಿಂಗಾಯತರ ಬಸವಣ್ಣನವರ ಅನುಯಾಯಿಗಳು ಈ ಸಮೀಕ್ಷೆಯಲ್ಲಿ ಧರ್ಮ ಲಿಂಗಾಯತ ಎಂದು ನಮೂದಿಸ ತಕ್ಕದ್ದು ಜಾತಿ ಕಾಲಂದಲ್ಲಿ ಲಿಂಗಾಯತದೊಂದಿಗೆ ತಮ್ಮ ತಮ್ಮ ಒಳಪಂಗಡ(ಜಾತಿಯನ್ನು)ವನ್ನು ಬರೆಸಬೇಕು.ಈ ನಿರ್ಣಯವನ್ನು ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲ ಬಸವಪರ ಸಂಘಟನೆಗಳ ಒಮ್ಮತದಿಂದ ಕೈಗೊಂಡಿದೆ.ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಲಿಂಗಾಯತದ ಒಳಪಂಗಡಗಳು ಧರ್ಮ ಕಾಲಯದಲ್ಲಿ ಲಿಂಗಾಯತವೆಂದು ನಮೂದಿಸಿದರೆ ಮೀಸಲಾತಿ ಸೌಲಭ್ಯಕ್ಕೆ ಯಾವುದೇ ತೊಂದರೆ ಇರುವದಿಲ್ಲ ಈ ಕುರಿತು ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ುಕೂಡ ಇದೆ.ಈಗಾಗಲೇ ಕರ್ನಾಟಕ ಸರ್ಕಾರವು 2018ರ ಮಾರ್ಚ ತಿಂಗಳಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತ ಧರ್ಮವೆಂದು ಘೋಷಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿದೆ ಕೇಂದ್ರ ಸರ್ಕಾರ ಅನುಮೋದನೆ ಮಾಡಿದಾಗ ಇದು ಜಾರಿ ಬರುತ್ತದೆ. ಅದಕ್ಕಾಗಿ ಹೋರಾಟ ನಿರಂತರವಾಗಿ ನಡೆಯುತ್ತದೆ.2025ರ ಸೆಪ್ಟೆಂಬರ 01 ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವೂ ಕೂಡ ಹೋರಾಟದ ಅಂಗವಾಗಿ ಜನ ಜಾಗೃತಿ ಮೂಡಿಸುವ ಒಂದು ಭಾಗ. ಬಸವ ಸಂಸ್ಕೃತಿ ಅಭಿಯಾನಕ್ಕೆ ರಾಜ್ಯಾದ್ಯಂತ ಅಭೂತ ಪೂರ್ವ ಬೆಂಬಲ ದೊರೆಯುತ್ತಿದ್ದು ದಿನಾಂಕ 05-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ ಸಮಾರೋಪ ಸಮಾರಂಭಕ್ಕೆ ಎಲ್ಲ ಬಸವಾನುಯಾಯಿಗಳು ಭಾಗವಹಿಸಿ ನಮ್ಮ ಜಾಗೃತಿ ಒಗ್ಗಟ್ಟನ್ನು ಪ್ರದರ್ಶಿಸಲು ಜಾಗತಿಕ ಲಿಂಗಾಯತ ಮಹಾಸಭಾವು ಕೋರುತ್ತದೆ ಎಂದರು.
ಈ ಸಂದರ್ಭದಲ್ಲಿ ನಿಡಸೋಶಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ.ಚಿಕ್ಕೋಡಿ ಜಿಲ್ಲಾ ಅದ್ಯಕ್ಷ ಚಂದ್ರಶೇಖರ ಗುಡಸಿ. ರವಿಂದ್ರ ಹಂಪನ್ನವರ. ಅಶೋಕ ಮಳಗಲಿ. ಸಿದ್ದು ಪಾಟೀಲ. ಬಸವರಾಜ ಮಂಟೂರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 