ವಂಚನೆಯ ಬಗ್ಗೆಸೂಕ್ತ ತನಿಖೆ ನಡೆಯಲಿ: ಗ್ರಾಹಕರ ಆಗ್ರಹ
Durgamata Society's Rs 56 crore customer money embezzlement case
ದುರ್ಗಾಮಾತಾ ಸೊಸೈಟಿಯ 56 ಕೋಟಿ ಗ್ರಾಹಕರ ಹಣ ಗುಳುಂ ಪ್ರಕರಣ
ಕಾರವಾರ 29: ತಾಲೂಕಿನ ಸದಾಶಿವಗಡದ ದುರ್ಗಾಮಾತಾ ಕೋ ಆಪರೇಟಿವ್ ಸೊಸೈಟಿಯಲ್ಲಿಟ್ಟಿದ್ದ ಗ್ರಾಹಕರ ಹಣ, ಠೇವಣಿ ಮೊತ್ತವು ನಾಪತ್ತೆಯಾಗಿದ್ದು, ಗ್ರಾಹಕರಿಗೆ ವಂಚನೆಯಾಗಿದೆ. ಈ ಕುರಿತು ಸಹಕಾರಿ ಸಂಘದ ನಿಬಂಧಕರು ಸೂಕ್ತ ತನಿಖೆ ನಡೆಯಬೇಕು ಎಂದು ಗ್ರಾಹಕ ಅಜಿತ ನಾಯ್ಕ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವಗಡದುರ್ಗಾಮಾತಾ ಕೋ ಆಪರೇಟಿವ್‌ಸೊಸೈಟಿಯಲ್ಲಿ ಗ್ರಾಹಕರ ಪಿಗ್ಮಿ, ಎಫ್‌ಡಿ ಸೇರಿದಂತೆ ಒಟ್ಟೂ 56 ಕೋಟಿ ಠೇವಣಿ ಇದೆ. ಆದರೆ ಬ್ಯಾಲೆನ್ಸ್ ಶೀಟ್‌ನಲ್ಲಿ 50 ಕೋಟಿ ರೂ. ಹಣವನ್ನು ಸಾಲವಾಗಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಆರು ತಿಂಗಳಿನಿಂದ ಸೊಸೈಟಿಯಲ್ಲಿ ಯಾವುದೇ ವ್ಯವಹಾರ ನಡೆಯುತ್ತಿಲ್ಲ. ಜೊತೆಗೆ ಗ್ರಾಹಕರ ಹಣವನ್ನು ದುರ್ಗಾಮಾತಾ ಕೋ ಆಪರೇಟಿವ್ ಸೊಸೈಟಿಯವರು ವಾಪಾಸ್ ನೀಡುತ್ತಿಲ್ಲ ಎಂದು ಅವರು ದೂರಿದರು.ಈ ಬಗ್ಗೆ ಕೇಳಿದರೆ ಗ್ರಾಹಕರಿಗೆ ,ಸೊಸೈಟಿಯವರು ಹಾರಿಕೆಯ ಉತ್ತರ ನೀಡುತ್ತಾರೆ. ಈ ಹಿಂದೆ ಗ್ರಾಹಕರೊಂದಿಗೆ ಸಭೆ ನಡೆಸಿ ಜೂ.25 ರಂದು ಹಣ ವಾಪಾಸ್ ನೀಡುತ್ತೇವೆ ಎಂದು ನೋಟೀಸ್ ನೀಡಿದ್ದರು. ಆದರೆ ಈವರೆಗೆ ಹಣ ನೀಡಿಲ್ಲ. ಸೊಸೈಟಿಯ ಮುಖ್ಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅವರ ಸಹೋದರಿ ಅರ್ಿತಾ ಅವರಿಗೆ ಕೇಳಿದರೆ , ಸರಿಯಾಗಿ ಉತ್ತರಿಸುತ್ತಿಲ್ಲ. ಈ ವಂಚನೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೂ ಮನವಿ ನೀಡಿದ್ದೇವೆ ಎಂದರು.
ಸೊಸೈಟಿಯ ಗ್ರಾಹಕರಾದ ಮನೋಜ ಎಸ್ ನಾಯ್ಕ, ವೆಂಕಟರಮಣ ಹರಿಕಾಂತ, ಅಕ್ಷತಾ, ಸಾಯಿನಾಥ ಬಾಬಿ ತಾಮ್ಸೆ, ರೋಹಿದಾಸ್ ತಾಮ್ಸೆ ಹಾಗೂ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 