ದುರ್ಗಾದೇವಿ ಜಾತ್ರಾ ಮಹೋತ್ಸವ - ಜನಪದ ಚಿಲಿಪಿಲಿ ಸಂಭ್ರಮ ಕಾರ್ಯಕ್ರಮಕ್ಕೆ ಶಾಸಕ ವೈದ್ಯ ಚಾಲನೆ

 ದುರ್ಗಾದೇವಿ ಜಾತ್ರಾ ಮಹೋತ್ಸವ - ಜನಪದ ಚಿಲಿಪಿಲಿ ಸಂಭ್ರಮ ಕಾರ್ಯಕ್ರಮಕ್ಕೆ ಶಾಸಕ ವೈದ್ಯ ಚಾಲನೆ Durgadevi Jatra Mahotsav - MLA Vaidya drives for folk chirping celebration

ಲೋಕದರ್ಶನ ವರದಿ 

ಯರಗಟ್ಟಿ, 23 : ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಜನಪದ ಚಿಲಿಪಿಲಿ' ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡು ಕಲಾ ಪ್ರೇಮಿಗಳೊಂದಿಗೆ ಹರ್ಷ ಹಂಚಿಕೊಳ್ಳಲಾಯಿತು. 

ಜಾನಪದ ಕಲೆ, ಇತಿಹಾಸ ಮತ್ತು ಸಾಹಿತ್ಯವನ್ನು ಉಳಿಸಿ, ಬೆಳೆಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಕಾರ್ಯಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಗ್ರಾಮೀಣ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಲು ಯುವಜನತೆ ವಿಶೇಷ ಆಸಕ್ತಿ ವಹಿಸಬೇಕು ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ಮೂಲ ಕಲೆಗಳು ನಶಿಸದಂತೆ ಎಚ್ಚರ ವಹಿಸಲು ಒತ್ತಾಯಿಸಲಾಗಿದೆ. 

ಜಾನಪದ ಕಲೆ ನಮ್ಮ ಸಂಸ್ಕೃತಿಯ ಜೀವಾಳ. ಇಂತಹ ಕಾರ್ಯಕ್ರಮಗಳು ನಮ್ಮ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಲ್ಲದೆ, ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಲಾವಿದರ ಅದ್ಭುತ ಪ್ರದರ್ಶನ ಇಡೀ ಜಾತ್ರೆಯ ಕಳೆಯನ್ನು ಹೆಚ್ಚಿಸಿತು. 

 ಈ ಸಂದರ್ಭದಲ್ಲಿ ಸ್ಥಳೀಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಗುರು ವಾಲಿ, ಬಂಗಾರೆಪ್ಪ ಹರಳಿ, ಯುವ ಮುಖಂಡರ ಪ್ರಕಾಶ ವಾಲಿ, ಬನಪ್ಪಗೌಡ ಪಾಟೀಲ, ಉಮೇಶ ಮಾಗುಂಡನ್ನವರ, ಗೌಡಪ್ಪ ಸವದತ್ತಿ, ಕಳಸಪ್ಪ ಕಳಸಪ್ಪನ್ನವರ, ಯಲ್ಲಪ್ಪ ಪಟ್ಟಪ್ಪನ್ನವರ, ನಿಂಗಪ್ಪ ನುಗ್ಗಾನಟ್ಟಿ, ಹನಮಂತ ಪಟ್ಟಪ್ಪನ್ನವರ, ರಾಜು ಸೋಮನ್ನವರ, ಹೊನ್ನಪ್ಪ ಪಟ್ಟಪ್ಪನ್ನವರ, ಈರ​‍್ಪ ಗೋಡಿ, ಗ್ರಾ. ಪಂ. ಸದಸ್ಯ ಶಾಹಿನಶಾ ಬಾಗವಾನ ಸೇರಿದಂತೆ ಗ್ರಾಮದ ಹಿರಿಯರು, ಜಾತ್ರಾ ಕಮಿಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.