ಶ್ರಾವಣ ಮಾಸದ ಪ್ರಯುಕ್ತ ದುಗರ್ಾದೇವಿಗೆ ಮಹಾ ಕುಂಬಾಭಿಷೇಕ
ಲೋಕದರ್ಶನ ವರದಿ
ಬ್ಯಾಡಗಿ05:ಶ್ರಾವಣ ಮಾಸದ ಪ್ರಯುಕ್ತ ತಾಲೂಕಿನ ಸುಕ್ಷೇತ್ರಕೆಂಗೊಂಡ ಗ್ರಾಮದಲ್ಲಿನ ದುಗರ್ಾದೇವಿಗೆ ಮಹಾ ಕುಂಬಾಭಿಷೇಕ ನೇರವೇರಿಸಲಾಯಿತು..
ಶ್ರಾವಣ ಮಾಸದಲ್ಲಿ ಪ್ರತಿ ವರ್ಷಆಚರಿಸುವ ನಡೆಯುವ ಕುಂಬ ಮೇಳಕ್ಕೆ ಮಂಗಳವಾರ ಕೆಂಗೊಂಡಗ್ರಾಮಅಕ್ಷರಸಹಃ ಮಧುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತದಲ್ಲದೇ ಗ್ರಾಮದ ತುಂಬೆಲ್ಲ ತಳಿರು ತೋರಣಗಳು ಕಂಗೊಳಿಸುತ್ತಿದ್ದವು.
ಗ್ರಾಮದ ಅಷ್ಟೇ ಏಕೆ ರಾಜ್ಯದಲ್ಲಿಯೇ ತನ್ನದೇ ಆದ ಭಕ್ತರ ವರ್ಗ ಹೊಂದಿರುವಕೆಂಗೊಂಡ ಗ್ರಾಮದ ದುಗರ್ಾದೇವಿಗೆ ಬೆಳಿಗ್ಗೆಯೆ ಅಭಿಷೇಕ, ವಿಶೇಷ ಪೂಜೆ ನೇವರೇರಿಸಿ ನಂತರ ಕುಂಬಾಭಿಷೇಕ ಮಾಡಿ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
108 ಕುಂಭ ಮೇಳ:ದೇವಿಗೆ ಪೂಜೆ ಸಲ್ಲಿಸಿದ ನಂತರ 108 ಮುತ್ತೈದೆಯರುಹೊತ್ತಿತ್ತ108 ಕುಂಭ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಧಾಮರ್ಿಕ ಕಾರ್ಯಗಳು ಮಾನವಲ್ಲಿನ ಮೇಲು ಕೀಳು ಎಂಬ ಭಾವ ನೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಶಾಂತಿ ಸಹನೆ ಸಹಬಾಳ್ವೆ ನೆಲೆಸುವಲ್ಲಿ ಸಹಕಾರಿಯಾಗಲಿವೆ ಎಂದರು. ನಂತರ ಕುಂಭಮೇಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನ ತಲುಪಿತು.
ಹರಿದು ಬಂದ ಭಕ್ರ ಸಾಗರ: ಶ್ರಾವಣ ಮಾಸದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮೂಲೆ ಮೂಲೆ ಗಳಿಂದ ಬಂದ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತದಂಡೆ ಸೇರಿತ್ತು. ಜಾತ್ರೆಯಂತೆ ಭಾಸವಾದ ಕಾರ್ಯಕ್ರಮದಲ್ಲಿ ಎಲ್ಲರೂ ದೇವಿಯ ದರ್ಶನ ಪಡೆದು ಪುನೀತರಾದರು ಮದ್ಯಾಹ್ನ ಅನ್ನಸಂತರ್ಪಣೆ ನೇರವೆರಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 