ಸಂಭ್ರಮದಿಂದ ಜರುಗಿದ ದುರ್ಗಾದೇವಿ ಜಾತ್ರಾ ಮಹೋತ್ಸವ
Durga Devi Jatra festival celebrated with enthusiasm
ತಾಳಿಕೋಟೆ 30: ತಾಲ್ಲೂಕಿನ ಚಬನೂರ ಗ್ರಾಮದ ಮಾದರ ಚೆನ್ನಯ್ಯ ಸಮಾಜದ ದೇವತೆಯಾದ ದುರ್ಗಾದೇವಿಯ ಜಾತ್ರಾಮಹೋತ್ಸವವು ಭಕ್ತಿ, ಶ್ರದ್ದೆ, ಸಂಭ್ರಮಗಳಿಂದ ನೆರವೇರಿತು. ತನ್ನಿಮಿತ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಏ.24 ರಂದು ಹಲಗಿ ಮಜಲು, ಚೌಡಕಿ ಪದಗಳು, ಹಾಗೂ 25 ರಂದು ದುರ್ಗಾದೇವಿಯ ದರ್ಶನ, 26 ರಂದು ತಿಪ್ಪಣ್ಣ ಸುಬ್ಬಣ್ಣ ಹಿರೇಕುರುಬರ ಇವರಿಂದ ಅನ್ನ ಸಂತರೆ್ಣ ನಡೆಯಿತು. ಏಪ್ರಿಲ್ 27ರಂದು ಎಲ್ಲಮ್ಮ ದೇವಿಯ ಪೌರಾಣಿಕ ಬೈಲಾಟ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಏಪ್ರಿಲ್ 28ರಂದು ಶ್ರೀ ಮಾತಾ ದುರ್ಗಾದೇವಿಯ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ಮೇಳಗಳೊಂದಿಗೆ ಜರುಗಿತು. ನಂತರ ಶ್ರೀ ದುರ್ಗಾ ದೇವಿವು ಗರ್ಭಗುಡಿ ಪ್ರವೇಶಿಸಿದಳು. ಜಾತ್ರಾ ಮಹೋತ್ಸವ ಅಂಗವಾಗಿ ಧರ್ಮಸಭೆ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಬನೂರ ರಾಮಲಿಂಗೇಶ್ವರ ಮಠದ ಸಿದ್ದಿಪುರುಷ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ವಹಿಸಿದ್ದರು. ಗ್ರಾಮದ ಗಣ್ಯರಾದ ಬಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯಡಿಯಾಪುರ ಸಮಾರಂಭವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಹಿರಿಯರು ಹಾಗೂ ಶ್ರೀ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವ ಕಮಿಟಿಯ ಪದಾಧಿಕಾರಿಗಳಾದ ಸಿದ್ದಣ್ಣ ಹೋಳಗಿ, ಸಿದ್ದಪ್ಪ ದೊಡಮನಿ, ಪೀರ್ಪ ಯ.ದೊಡಮನಿ, ಶೇಖಪ್ಪ ಹೋಳಗಿ, ಪೀರ್ಪ ತಿ.ದೊಡಮನಿ, ಕಾಸಪ್ಪ ಕಲ್ಮನಿ, ಅಮೋಘ ದೊಡಮನಿ, ಹಣಮಂತ ದು.ದೊಡಮನಿ, ಸಿದ್ದಪ್ಪ ಮ.ಹೋಳಗಿ, ಭೀಮಪ್ಪ ದು. ತಮದಡ್ಡಿ, ದಂಡಪ್ಪ ಅ.ಗುಗ್ರಿ, ತಿಪ್ಪಣ್ಣ ಚ.ನಿರಲಗಿ, ಪರಸಪ್ಪ ಯ. ಸಾಸನೂರ, ಸಿದ್ದಪ್ಪ ಮ.ಹಂದ್ರಾಳ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 