ದುರ್ಗಾದೇವಿ ಜಾತ್ರಾ ಮಹೋತ್ಸವ ಅದ್ಧೂರಿ ಕುಂಭ ಮೆರವಣೆಗೆ
Durga Devi Jatra Mahotsav to witness grand Kumbh procession
ಗಂಗಾವತಿ 18: : ಬಹುಜನರ ಆರಾಧ್ಯ ನಗರ ದೇವತೆ ಶ್ರೀ ದುರ್ಗಾದೇವಿ ನಾಲ್ಕು ದಿನಗಳ ಜಾತ್ರಾಮಹೋತ್ಸವದ ಪ್ರಥಮ ದಿನವಾದ ಇಂದು ನಗರದ ಕಲ್ಮಠದ ಬಳಿ ಚಿಇರುವ ಶ್ರೀ ಗಾಳೆಮ್ಮ ದೇವಿ ದೇವಸ್ಥಾನದಿಂದರೆಗೆ 251 ಕ್ಕು ಹೆಚ್ಚು ಕುಂಭ ಹೊತ್ತ ಮಹಿಳೆಯರೊಂದಿಗೆ ಬಾಜಾ ಭಜಂತ್ರಿ, ಡೊಳ್ಳು ಕುಣಿತ ಹಾಗು ವೈಭವದ ವಾದ್ಯ ಭಜನೆ ಮೇಳಗಳೊಳಗೂಡಿ ಅದ್ಧೂರಿ ಮೆರವಣೆಗೆ ಜರುಗಿತು.
ನಗರ ಶ್ರೀ ಕಲ್ಮಠದ ಹತ್ತಿರದ ಗಾಳೆಮ್ಮ ದೇವಸ್ಥಾನದಿಂದ ಬಸವಣ್ಣ ವೃತ್ತ, ಗಾಂಧಿ ವೃತ್ತ, ಗಣೇಶ ವೃತ್ತದೊಂದಿಗೆ ಶ್ರೀ ದುರ್ಗಾದೇವಿ ದೇವಸ್ಥಾನ ಸೇರಿತು. ನಂತರ ದೇವಿಯ ದೇವಸ್ಥಾನದಲ್ಲಿ ಸಂಕಲ್ಪ ದುರ್ಗಾಸಪ್ತಪತಿ ಪಾರಾಯಣ ಜರುಗಿತು ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ದಂಪತಿಗಳು ಪೂಜಾ ಕಂಕೈರ್ಯದಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಮಹಾ ಅನ್ನಸಂತರೆ್ಣ ಯೊಂದಿಗೆ ಸಂಜೆ ಕುಂಕಮಾರ್ಚನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಲಾಯಿತು.
ಕಲ್ಮಠದ ಶ್ರೀ ಕೊಟ್ಟೂರೇಶ್ವರ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಪ್ರಮುಖರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಕೆ.ಕಾಳಪ್ಪ, ಸಿಂಗನಾಳ ವಿರುಪಾಕ್ಷಪ್ಪ, ಬ ನೆಕ್ಕಂಟಿ ಸೂರಿಬಾಬು, ನರಸಪ್ಪ ಅಮರಜ್ಯೋತಿ, ಜೋಗದ ಹನುಮಂತಪ್ಪ ನಾಯಕ, ವೀರಭದ್ರ್ಪ ನಾಯಕ, ಬಸಪ್ಪ ನಾಯಕ, ಸುನಿತಾ ಶಾವಿ, ಗೀತಾ ವಿಕ್ರಮ್, ಜಿ.ಶ್ರೀಧರ, ಸಾಗರ ಮುನವಳ್ಳಿ, ಎಫ್ ರಾಘು, ಜೋಗದ ಕೃಷ್ಣಾ ನಾಯಕ, ಅಂಜಿನಪ್ಪ, ಬಿ.ರಾಜು ಇತರರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 