ಇ.ಎಸ್.ಐ.ಸಿ, ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಔಷಧಿ ಸಿಂಪಡಣೆ
ಕಲಬುರಗಿ,ಮಾ.24, ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜಿಮ್ಸ್ ಮತ್ತು ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಆಸ್ಪತ್ರೆ ಮತ್ತು ಸುತ್ತಮುತ್ತ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಂಗಳವಾರ ಬೆಳಿಗ್ಗೆ ಡಿಸ್ ಇನ್ಫೆಕ್ಷನ್ ಔಷಧಿ ಸಿಂಪಡಣೆ ಮಾಡಲಾಯಿತು.ನೀರು, ಫಿನಾಯಿಲ್ ಹಾಗೂ ಡೆಟಾಲ್ ಮಿಶ್ರಣವುಳ್ಳ ಡಿಸ್‍ಇನ್‍ಫೆಕ್ಷನ್ ಔಷಧಿಯನ್ನು ಮಂಗಳವಾರ ಬೆಳಿಗ್ಗೆ ಸಿಂಪಡಿಸಲಾಯಿತು. ಬಳಿಕ ನೀರು ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣವುಳ್ಳ ಹೈಪೊಫ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಸಹ ಮಾಡಲಾಯಿತು. ಈ ಅಸ್ಪತ್ರೆಗಳ ಆವರಣದ ಮತ್ತು ಸುತ್ತಮುತ್ತ ಪ್ರತಿ ದಿನವು ಔಷಧಿ ಸಿಂಪಡಿಸುವ ಕಾರ್ಯ ಮುಂದುವರಿಯಲಿದೆ.ಕಲಬುರಗಿಯಲ್ಲಿ ಸಂಪೂರ್ಣವಾಗಿ ಕೊರೋನಾ ಸೋಂಕು ಹತೋಟಿಯಲ್ಲಿಡಲು ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ನಿರ್ದೇಶನದಂತೆ ಈ ರೀತಿಯ ಔಷಧಿ ಸಿಂಪಡಣೆ ಕಾರ್ಯ ಸೋಮವಾರದಿಂದ ಆರಂಭಗೊಂಡಿದೆ.ಸೋಮವಾರ ನಗರದ ಪ್ರಮುಖ ರಸ್ತೆಗಳಾದ ಹುಮನಾಬಾದ್ ಬೇಸ್ -ಸೂಪರ್ ಮಾರ್ಕೆಟ್-ಜಗತ್ ವೃತ್ತ-ಸರ್ದಾರ ವಲ್ಲಭಭಾಯಿ ಪಟೇಲ್ -ರಾಷ್ಟ್ರಪತಿ ಚೌಕ್-ರಾಮ ಮಂದಿರ-ಹಳೇ ಜೇವರ್ಗಿ ರಸ್ತೆಯಲ್ಲಿ ಔಷಧಿ ಸಿಂಪಡಿಸಲಾಗಿತ್ತು.ಮಂಗಳವಾರ ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ಅರ್.ಟಿ.ಓ.ಕ್ರಾಸ್-ಖರ್ಗೆ ಪೆಟ್ರೋಲ್ ಪಂಪ್-ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ವರೆಗೆ ಸಿಂಪಡಿಸಲಾಯಿತು.ನಗರದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾದ ವ್ಯಕ್ತಿಗಳ ವಾಸಸ್ಥಾನಗಳಾದ ಕಲಬುರಗಿಯ ವಾರ್ಡ್ ನಂ.14 ಮತ್ತು 30 ರಲ್ಲಿ ಮಂಗಳವಾರ ಔಷಧಿ ಸಿಂಪಡಣೆ ಜೊತೆ ಸ್ಯಾನಿಟೈಜೇಷನ್ ಔಷಧಿ ಸಿಂಪಡಣೆ ಸಹ ನಡೆಯಲಿದೆ. ಮುಂದಿನ ಒಂದು ತಿಂಗಳು ಕಾಲ ನಗರದೆಲ್ಲೆಡೆ ಈ ರೀತಿಯ ನಿರಂತರ ಔಷಧಿ ಸಿಂಪರಣೆ ಕಾರ್ಯ ಮುಂದುವರೆಯಲಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 