ಮಾದಕ ಸೇವನೆ ಜೀವನಕ್ಕೆ ಮಾರಕವಾಗಲಿದೆ: ತಹಶಿಲ್ದಾರ ಕಟ್ಟಿಮನಿ
Drug abuse will be fatal: Tahsildar Kattimani
ಮುದ್ದೇಬಿಹಾಳ 30: ಸಾಮಾನ್ಯವಾಗಿ ಮಾದಕ ಪದಾರ್ಥಗಳ ಸೇವನೆಯು ಹತ್ತಿರದ ಸ್ನೇಹಿತರ ಒತ್ತಾಯಕ್ಕೋ ಅಥವಾ ಆಮೀಷಕ್ಕೋ ಒಳಗಾಗಿ ಆರಂಭವಾಗಿ ನಂತರ ಚಟವಾಗಿ ಪರಿಣಮಿಸಿ ಮಾದಕ ಪದಾರ್ಥಗಳ ಸೇವನೆಯಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಗಂಭೀರ ತೀವ್ರತರವಾದ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಎದುರಾಗಿ ಜೀವನ ಪರ್ಯಂತ ಒಂದಲ್ಲೊಂದು ರೀತಿಯಲ್ಲಿ ಕೆಟ್ಟವನಾಗಿ ಮನುಷ್ಯ ಗುಣಕ್ಕೆ ಮಾರಕನಾಗಿ ಬದುಕಬೇಕಾದ ಸ್ಥಿತಿ ಎದುರಾಗುತ್ತದೆ ಮಾದಕ ಸೇವನೆ ಜೀವನಕ್ಕೆ ಮಾರಕವಾಗಲಿದೆ ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ತಾಲೂಕಾ ಆಡಳಿತ ಹಾಗೂ ಪೋಲಿಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ, ವಸ್ತುಗಳ ದ ಕುರಿತು ತಹಶಿಲ್ದಾರ ಕಚೇರಿಯಲ್ಲಿ ನಡೆದ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಯುವಕರು ಮಾದಕ ವಸ್ತುಗಳ ಸೇವೆಯಯಿಂದದಾಗಿ ಯುವಕ ದುಶ್ಚಟಗಳ ದಾಸರಾಗಿ ಇಡೀ ತಮ್ಮ ವಿದ್ಯಾರ್ಥಿ ಜೀವನದ ಜೊತೆಗೆ ತಮ್ಮ ವಯಕ್ತಿಕ ಬದುಕನ್ನೇ ಹಾಳುಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಯುವಕರ ಜಾಗೃತರಾಗಬೇಕು ಯಾವುದು ಕೆಟ್ಟದ್ದು ಯಾವೂದು ಒಳ್ಳೆಯದ್ದು ಎಂಬುದು ಅರ್ಥೈಸಿಕೊಳ್ಳಬೇಕು. ಪ್ರತಿಯೊಬ್ಬರೂ ಮೊದಲು ತಮ್ಮ ಜೀವನವನ್ನು ಆಯ್ದುಕೊಳ್ಳಿ, ಮಾದಕ ಪದಾರ್ಥಗಳನ್ನು ಅಲ್ಲ ಎಂಬುದನ್ನು ಅರಿಯಬೇಕು. ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ಮಾದಕ ದ್ರವ್ಯ, ವಸ್ತುಗಳ ದುಶ್ಪರಿಣಾಮದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಎಲ್ಲರೂ ಸಹಕರಿಸುವುದರ ಜತೆಗೆ ತಾವೂ ಕೂಡ ಜಾಗೃತರಾಗಬೇಕು ಎಂದರು.
ಸಿಪಿಐ ಮೊಹಮ್ಮದ ಫಸಿಯುದ್ದೀನ ಅವರು ಮಾತನಾಡಿ ಮಾದಕ ಪದಾರ್ಥಗಳ ಸೇವನೆಯು ವ್ಯಕ್ತಿಯ ಜೀವನಕ್ಕೆ ಮಾರಕವಾಗಿದೆ ಕೋಟ್ಪಾ ಕಾಯ್ದೆಯನ್ವಯ ಶೈಕ್ಷಣಿಕ ಸಂಸ್ಥೆಗಳ 100 ವ್ಯಾಸದೊಳಗಿನ ಪ್ರದೇಶದಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವಂತಿಲ್ಲ. ಈ ಕಾಯ್ದೆಗಳ ಮುಖ್ಯ ಉದ್ದೇಶ ಮಕ್ಕಳು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ಗಾಗಲೇ ಕಾನೂನು ಬಾಹಿರ ಮಾರಾಟ ಮಾಡುವ ಬಂಧಿಸಿ ಪ್ರಕರಣ ದಾಖಲಿಸಲಾಗುವುದು ಈ ಬಗ್ಗೆ ಹೆಚ್ಚು ಯುವಕ ಯುವತಿಯ ಜಾಗೃತರಾಗಬೇಕು ಎಂದರು.
ಈ ವೇಳೆ ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎಸ್ ಸಾವಳಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕಂದಾಯ ನೀರೀಕ್ಷಕ ಡಿ ಎಸ್ ತಳವಾರ, ಶಿಕ್ಷಕ ಟಿ ಡಿ ಲಮಾಣಿ, ಬಿ ಆರ್ ಸಿ ಗುಂಡು ಲಮಾಣಿ ಸೇರಿದಂತೆ ಪೋಲಿಸ್ ಸಿಬ್ಬಂದಿವರ್ಗ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 