ಕೊನೆಯ ಕ್ಷಣಗಳಲ್ಲಿ ಮಂಕಾಳು ವೈದ್ಯರ ಹೆಸರನ್ನು ಕೈಬಿಟ್ಟದ್ದು, ಮೀನುಗಾರ ಸಮಾಜಕ್ಕೆ ಎಸಗಿದ ಅನ್ಯಾಯ: ಮೀನುಗಾರರ ಮುಂಖಡರು

ಕೊನೆಯ ಕ್ಷಣಗಳಲ್ಲಿ ಮಂಕಾಳು ವೈದ್ಯರ ಹೆಸರನ್ನು ಕೈಬಿಟ್ಟದ್ದು,  ಮೀನುಗಾರ ಸಮಾಜಕ್ಕೆ  ಎಸಗಿದ ಅನ್ಯಾಯ: ಮೀನುಗಾರರ ಮುಂಖಡರು Dropping Mankalu Vaidya's name at the last minute is an injustice to the fishing community: Fisherme

ಕಾರವಾರ 07 : ಶಾಸಕ ಮಂಕಾಳು ವೈದ್ಯ ಅವರ ಹೆಸರು ಸಂಪುಟ ಪಟ್ಟಿಯಲ್ಲಿ ಪ್ರಕಟಗೊಂಡು, ಕೊನೆಯ ಕ್ಷಣಗಳಲ್ಲಿ  ಅವರ  ಹೆಸರನ್ನು ಕೈಬಿಟ್ಟದ್ದು  ಇಡೀ ಮೀನುಗಾರ ಸಮಾಜಕ್ಕೆ  ಎಸಗಿದ ಘೋರ ಅನ್ಯಾಯ ಎಂದು ಮೀನುಗಾರರ  ಸಮುದಾಯದ ಮುಖಂಡರು ಅಳಲು ತೋಡಿಕೊಂಡರು.  ಕಾರವಾರ ನಗರದ  ಪತ್ರಿಕಾಭವನದಲ್ಲಿ  ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರ ಸಂಘಟನೆ ಮುಖಂಡ  ಜೈವಿಠ್ಠಲ ಕುಬಾಲ  ಕರಾವಳಿ  ಮೀನುಗಾರರು ಸಮುದಾಯ ದೊಡ್ಡ ಸಂಖ್ಯೆ ಸಂಖ್ಯೆಯಲ್ಲಿದೆ . ಸಾಮಾಜಿಕ ನ್ಯಾಯ ಹಾಗೂ ಜಾತಿವಾರು ಪ್ರಾತಿನಿಧ್ಯ ನೀಡುವ ಸಂದರ್ಭದಲ್ಲಿ ಮೀನುಗಾರ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಎಂದು ಅಪಾದಿಸಿದರು. 

ಆರಂಭದಲ್ಲಿ ಸಚಿವ ಸ್ಥಾನದ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಸೇರಿಸಿ, ನಂತರ ಕೊನೆ ಕ್ಷಣದಲ್ಲಿ ದಾವಣಗೆರೆ ಶಾಸಕ  ಎಸ್‌.ಎಸ್‌.  ಮಲ್ಲಿಕಾರ್ಜುನ್ ಅವರಿಗೆ ಅವಕಾಶ ನೀಡಿದ್ದು ಸರಿಯಲ್ಲ. ಈ  ಮೂಲಕ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಇಡೀ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ದೂರಿದರು.  ಮುಖಂಡ ಜಗದೀಶ ಹರಿಕಂತ್ರ ಮೀನುಗಾರ ಸಮುದಾಯದಿಂದ ಆಯ್ಕೆಯಾಗಿದ್ದ ಏಕೈಕ ಶಾಸಕ ಮಂಕಾಳು ವೈದ್ಯ. ತಮ್ಮ ಅಧಿಕಾರಾವಧಿಯಲ್ಲಿ ಜನತಾ ದರ್ಶನ ಸೇರಿದಂತೆ ಹಲವು ಜನಪರ ಕಾರ್ಯಗಳ ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಇಂತಹ ದಕ್ಷ ನಾಯಕನನ್ನು ಕಡೆಗಣಿಸಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೂಡಲೇ ತಮ್ಮ ನಿರ್ಧಾರವನ್ನು ಪುನರ್ ಪರೀಶೀಲಿಸಬೇಕು ಎಂದು ಆಗ್ರಹಿಸಿದರು.

ಮೀನುಗಾರ ಧುರೀಣ ರಾಜು ಹರಿಕಂತ್ರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ನಾಲ್ವರು ಶಾಸಕರು  ಒಬ್ಬರಿಗೂ ಸಚಿವ ಸ್ಥಾನ ನೀಡದಿರುವುದು ತೀವ್ರ ಬೇಸರ ತಂದಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಜಿಲ್ಲೆಗೆ ಸಚಿವ ಸ್ಥಾನ ನೀಡದೆ, ಹೊರ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ತರುವ ವಾತಾವರಣ ನಿರ್ಮಾಣ ಮಾಡಿರುವುದು ಜಿಲ್ಲೆಯ ಜನರಿಗೆ ಮಾಡುವ ದೊಡ್ಡ ಅವಮಾನ ಎಂದರು. ಇನ್ನು ಅವಕಾಶ ಮೀರೋಗಿಲ್ಲ, ಜಿಲ್ಲೆಯ ನಾಲ್ವರು ಶಾಸಕರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಉಸ್ತುವಾರಿ ವಹಿಸಬೇಕು ಎಂದು ಅವರು ಮನವಿ ಮಾಡಿದರು.  ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಾಬು ಕುಬಾಳ, ಗಣೇಶ ಅಂಬಿಗ, ವೈದ್ಯನಾಥ ಹರಿಕಂತ್ರ, ಚಿದಾನಂದ ಲಕ್ಕುಮನೆ, ವೆಂಕಟರಮಣ ಮೊಗೇರ ಸೇರಿದಂತೆ ಹಲವು ಪ್ರಮುಖರು ಇದ್ದರು.