ಮೊಬೈಲ್ ಬಿಡಿ, ಪುಸ್ತಕ ಹಿಡಿ: ಪಂಡಿತ ಪೂಜಾರ್

ಮೊಬೈಲ್ ಬಿಡಿ, ಪುಸ್ತಕ ಹಿಡಿ: ಪಂಡಿತ ಪೂಜಾರ್ Drop the mobile, grab the book: Pandit Pujar

              ರನ್ನ ಬೆಳಗಲಿ 05: ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡುವುದರಿಂದ ಮಾತ್ರ ಎನ್‌ಎಂಎಂಎಸ್ ಪರೀಕ್ಷೆಯನ್ನು ಎದುರಿಸಲು ಹಾಗೂ ಶಿಷ್ಯವೇತನಕ್ಕೆ ಆಯ್ಕೆಯಾಗಲು ಸಾಧ್ಯವೆಂದು ಎನ್‌ಎಂಎಂಎಸ್ ನೋಡಲ್ ಅಧಿಕಾರಿಗಳಾದ ಸಂಜು ಸಾವಳಗಿಯವರು ರನ್ನ ಬೆಳಗಲಿ ಬಿವಿವಿಎಸ್ ಶಾಲೆಯಲ್ಲಿ ನಡೆದ ಎನ್‌ಎಂಎಂಎಸ್ ಪರೀಕ್ಷೆಯ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.  ಮೊಬೈಲ್ ಬಿಡಿ, ಪುಸ್ತಕ ಹಿಡಿ, ಸಂಸ್ಕೃತನಾಗಿ, ನಡಿ ಅಂದಾಗ ಮಾತ್ರ ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನವಾಗುತ್ತದೆ ಎಂದು ಬಿ ವಿ ವಿ ಎಸ್ ಸಂಸ್ಥೆಯ  ಚೇರ್ಮನ್ನರಾದ ಪಂಡಿತ್ ಪೂಜಾರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಹೋಗಲಾಡಿಸಲು ಹಾಗೂ ಪರೀಕ್ಷೆಯಲ್ಲಿ ಎದುರಿಸುವ ಸಮಸ್ಯೆಗಳನ್ನು ಈಗಲೇ ಹೋಗಲಾಡಿಸಲು ಇಂತಹ ಕಾರ್ಯಾಗಾರಗಳು ಸಹಕಾರಿ ಎಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ ಎಸ್ ಗಾಣಿಗೇರ್ ತಿಳಿಸಿದರು.  

              ಬಾಗಲಕೋಟ ಜಿಲ್ಲೆಯಲ್ಲಿ  192 ಎನ್‌ಎಂಎಂಎಸ್ ಸೀಟು ಜಾತಿವಾರು ರಾಂಕ್ ಆಧಾರಿತ ಆಯ್ಕೆ ನಡೆಯುತ್ತದೆ ಸುಮಾರು 11 ಸಾವಿರ ವಿದ್ಯಾರ್ಥಿಗಳು ಇದೇ ತಿಂಗಳು 18ರಂದು ಪರೀಕ್ಷೆ ಬರೆಯಲಿದ್ದು ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1000 ರೂಪಾಯಿಗಳಂತೆ 4 ವರ್ಷ ಅಂದರೆ 48000ಗಳನ್ನು ಕೇಂದ್ರ ಸರಕಾರ ನೀಡುತ್ತದೆ. ಇದರ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕೆ ಎ ಧಡುತಿ ಗುರುಗಳು ಕಾರ್ಯಕ್ರಮದಲ್ಲಿ ತಿಳಿಸಿದರು . ಈ ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳ ಸುಮಾರು 250 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಜಮಖಂಡಿ ತಾಲೂಕಿನ ಸಾವಳಗಿಯ ಸಿಆರ​‍್ಿಗಳಾದ ರಘು ಹಿರೇಮಠ ಹಾಗೂ ಶಿಕ್ಷಕರಾದ ವೆಂಕಪ್ಪ ನಾಗನೂರ,ಅರಳಿಮಟ್ಟಿ ಪ್ರೌಢಶಾಲೆಯ ಎಂ ಆರ್ ಕುಂಬಾರ್ ನಾಗರಾಳ ಪ್ರೌಢಶಾಲೆಯ ನದಾಫ್ ಶಿಕ್ಷಕರು ಅಕ್ಕಿಮರಡಿಯ ಗಣಿತ ಶಿಕ್ಷಕರಾದ ಎಸ್ ಎಚ್ ಪುರಾಣಿಕ ರವರು ವಿದ್ಯಾರ್ಥಿಗಳಿಗೆ ಸಂಪೂರ್ಣ ನೀಡಿದರು. ಬೆಳಗಲಿ ಕ್ಲಸ್ಟರ್ನ ಸಿಆರಿ​‍್ಪಗಳಾದ ಬಸವರಾಜ್ ಬಳ್ಳಾರಿ ಹಾಗೂ ನವೀನ್ ಜಿಗಜಿನ್ನಿ, ಬಾಳಪ್ಪ ಮನ್ನಿಕೇರಿ  ಅವರು ಹಾಜರಿದ್ದರು. ಅಮೃತಾ ಕಾನಟ್ಟಿ , ಕಾವ್ಯ ನರಗಟ್ಟಿ ಪ್ರಾರ್ಥಿಸಿ, ಎನ್ ಬಿ ಸಾಬೋಜಿ ಹಾಗೂ ಹೆಚ್ ಜಿ ಕುಂಬಾರ್ ಸ್ವಾಗತಿಸಿ ಕೆ ಎ ಧಡುತಿ ಗುರುಗಳು ನಿರೂಪಿಸಿ ವಂದಿಸಿದರು.