ಬಳ್ಳಾರಿಏ.03: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿರುವುದರಿಂದ ನಗರಕ್ಕೆ ಯಾವುದೇ ವಾಹನಗಳ ಸಂಚಾರಕ್ಕೆ ನಿಬರ್ಂಧ ಇರುವ ಕಾರಣದಿಂದ ಸಾರ್ವಜನಿಕರಿಗೆ ದಿನನಿತ್ಯದ ಬಳಕೆಗೆ ತರಕಾರಿಗಳನ್ನು ತಾಲೂಕು ಆಡಳಿತದ ವತಿಯಿಂದ ಸಂಚಾರಿ ತರಕಾರಿ ಮಾರಾಟದ ವಾಹನಗಳ ಮೂಲಕ ಎಲ್ಲಾ ವಾಡರ್್ಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಹಾಯಕಆಯುಕ್ತ ಶೇಖ್ ತನ್ವೀರ್ಆಸೀಫ್ ಅವರು ತಿಳಿಸಿದರು.
ಹೊಸಪೇಟೆಯ ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲ ಅವರು ಈ ವಿಷಯ ತಿಳಿಸಿದರು.
ಹೊಸಪೇಟೆಯಲ್ಲಿ ಕರೋನಾ ಪಾಸಿಟೀವ್ ಪ್ರಕರಣ ಕಂಡುಬಂದ ಕಾರಣ ಕಳೆದ ಮೂರು ದಿನಗಳಿಂದ ತರಕಾರಿಯ ಆಮದನ್ನು ನಿಬರ್ಂಧಿಸಲಾಗಿತ್ತು. ಈಗ ನಿಬರ್ಂಧವನ್ನು ತೆರವುಗೊಳಿಸಿ ಬೆಳಿಗ್ಗೆ 5ರಿಂದ 10ರವರೆಗೆ ಕೇವಲ ರೈತರಿಂದ ಸಗಟು ವ್ಯಾಪಾರಿಗಳಿಂದ ತರಕಾರಿಗಳನ್ನು ಕೊಳ್ಳಲು ಅವಕಾಶವಿದೆ. ಚಿಲ್ಲರೆ ವ್ಯಾಪಾರಕ್ಕೆ ಅನುವುಮಾಡಿಕೊಟ್ಟರೆ ಜನ ದಟ್ಪಣೆ ಉಂಟಾಗುವುದರಿಂದ ಚಿಲ್ಲರೆ ವ್ಯಾಪಾರಕ್ಕೆ ನಿಬರ್ಂಧ ಹೇರಲಾಗಿದ್ದು, ಸಾರ್ವಜನಿಕರಿಗೆ ತರಕಾರಿ ಸರಬರಾಜು ಮಾಡುವ ಸಲುವಾಗಿ ನಗರಸಭೆ ವತಿಯಿಂದ ತರಕಾರಿ ಮಾರಾಟ ಸಂಚಾರಿ ವಾಹನ ವ್ಯವಸ್ಥೆಯನ್ನು ಇಂದಿನಿಂದ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಅರಣ್ಯ ಸಚಿವರಾದ ಆನಂದ್ ಸಿಂಗ್ ರವರು ಉದ್ಘಾಟಿಸಿದ್ದು ಪ್ರಾಯೋಗಿಕವಾಗಿ ಇಂದು 14 ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು, ನಾಳೆ 10 ಹೆಚ್ಚು ವಾಹನಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಹಾಲು ವಿತಕರಿಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಿದ್ದು ಸಾರ್ವಜನಿಕರು ಡೈರಿಗೆ ಬಾರದಂತೆ ವಿತಕರೇ ಹೆಚ್ಚಿನ ಮಾನವ ಸಂಪನ್ಮೂಲ ಬಳಸಿ ಮನೆಮನೆಗೆ ಸರಬರಾಜು ಮಾಡುವಂತೆ ವಿತರಕರಿಗೆ ಸೂಚಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹೆಚ್.ವಿಶ್ವನಾಥ್, ಪೌರಾಯುಕ್ತೆ ಜಯಲಕ್ಷ್ಮೀ, ಸರ್ಜನ್ ಡಾ.ಸಲೀಂ ಸೇರಿದಂತೆ ತೋಟಗಾರಿಕೆ ಇಲಾಖೆಯ ಸಹಾಯಕ ನಿದರ್ೇಶಕ ರಾಜೇಂದ್ರ, ಪರಮೇಶ್ ಇದ್ದರು