ಬೆಂಗಳೂರು, ಅ. 16: ಕನ್ನಡದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಉದ್ದೇಶದಿಂದ ಎನ್ಗೂರು ಸಂಸ್ಥೆಯು ತನ್ನ ಆ್ಯಪ್ ಮೂಲಕ 'ಲೈವ್ ಕ್ಲಾಸ್'ಗೆ ಚಾಲನೆ ನೀಡಿದೆ. ಕೇಂಬ್ರಿಡ್ಜ್ ನಿಂದ ಅರ್ಹತೆ ಪಡೆದ ಶಿಕ್ಷಕರು ಇಂಗ್ಲಿಷ್ ಭಾಷೆಯನ್ನು ಭೋದಿಸುತ್ತಾರೆ ಹಾಗು ಮೊದಲ 'ಲೈವ್ ಕ್ಲಾಸ್' ಸಂಪೂರ್ಣ ಉಚಿತವಾಗಿರುತ್ತದೆ.
ಎನ್ಗೂರು ಆ್ಯಪ್ 30 ದಶಲಕ್ಷ ಬಳಕೆದಾರರನ್ನು ಹೊಂದಿದ್ದು 'ಲೈವ್ ಕ್ಲಾಸ್'ನಲ್ಲಿ ಗರಿಷ್ಠ 15 ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಪರಿಣಾಮ ಪ್ರತಿ ವಿದ್ಯಾರ್ಥಿಗಳ ಮೇಲೆ ನಿಗಾ ಇಡಬಹುದು. ಇತ್ತೀಚೆಗಷ್ಟೆ 8 ವಾರಗಳ ಬೀಟಾ 'ಲೈವ್ ಗ್ರೂಪ್ ಕ್ಲಾಸ್' ಸಂಸ್ಥೆಯು ನಡೆಸಿತ್ತು. 12,500 ಸೆಷನ್ ನಲ್ಲಿ ಸುಮಾರು 5,500 ಬಳಕೆದಾರರು ಭಾಗವಹಿಸಿದ್ದರು. ಒಂದು ವಿಷಯದ ಬಗ್ಗೆ ದಿನದ ಬೇರೆ ಬೇರೆ ಅವಧಿಯಲ್ಲಿ 'ಲೈವ್ ಕ್ಲಾಸ್' ನಡೆಸುವುದರ ಮೂಲಕ ವಿದ್ಯಾರ್ಥಿಗಳ ಕಲಿಕಗೆ ಅನುಕೂಲವನ್ನು ಮಾಡಿಕೊಡಲಾಗಿದೆ.
"8 ವಾರಗಳಿಂದ 'ಲೈವ್ ಕ್ಲಾಸ್' ನಡೆಸಲಾಗುತ್ತಿದ್ದು ಪ್ರತಿದಿನ 20 ರಿಂದ 544 ಸೆಷನ್ ಗಳನ್ನು ನಡೆಸಲಾಗುತ್ತಿದೆ. ಗುಣಮಟ್ಟದ ಇಂಗ್ಲಿಷ್ ಭಾಷೆ ಕಲಿಕೆ ಎಲ್ಲಾರಿಗೂ ಕನಿಷ್ಠ ದರದಲ್ಲಿ ಒದಗಿಸುವುದು ನಮ್ಮ ಗುರಿ" ಎಂದು ಎನ್ಗೂರು ಸಂಸ್ಥೆಯ ಸಂಸ್ಥಾಪಕ ಹಾಗು ಸಿಇಒ ಅರ್ಷನ್ ವಾಕಿಲ್ ತಿಳಿಸಿದ್ದಾರೆ.