ಚಾಲಕರ ಸೇವೆ ನಿಸ್ವಾರ್ಥದ್ದು: ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್
Driver service is selfless: ZP CEO Mohammed Harris Sumair
ಅಪಘಾತ ರಹಿತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸಿದ 09 ಮಂದಿ ಚಾಲಕರಿಗೆ “ಸುರಕ್ಷ ಚಾಲಕ” ಬೆಳ್ಳಿ ಪದಕ, ನಗದು ವಿತರಣೆ.
ಬಳ್ಳಾರಿ,ಆ.17: ಚಾಲಕರ ಕರ್ತವ್ಯವು ಅತ್ಯಂತ ಕಠಿಣವಾಗಿದ್ದು, ಹಗಲು-ರಾತ್ರಿ ಎನ್ನದೇ ಕುಟುಂಬದಿಂದ ದೂರ ಉಳಿದು ಅತ್ಯಂತ ನಿಸ್ವಾರ್ಥ ಸೇವೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಳ್ಳಾರಿ ವಿಭಾಗ ವತಿಯಿಂದ ಬಳ್ಳಾರಿಯ 01 ನೇ ಘಟಕದಲ್ಲಿ ಶನಿವಾರ ಏರಿ್ಡಸಿದ್ದ 05 ವರ್ಷಗಳ ಕಾಲ ನಿರಂತರ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ “ಸುರಕ್ಷಾ ಚಾಲಕ” ಬೆಳ್ಳಿ ಪದಕ ಹಾಗೂ ನಗದು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಚಾಲಕರು ಎಲ್ಲಾ ವಿಧಗಳಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿದ್ದು, ಅವರ ನಿರಂತರ ಸೇವೆಯಿಂದ ಸರ್ಕಾರಕ್ಕೆ ಉತ್ತಮ ಗೌರವವಿದೆ ಎಂದರು.ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಮಾತನಾಡಿ, ಚಾಲಕರು ಶಿಸ್ತಿನ ಸಿಪಾಯಿ ಇದ್ದಂತೆ. ಸಾರ್ವಜನಿಕ ಪ್ರಯಾಣಿಕರನ್ನು ಅತ್ಯಂತ ಸುರಕ್ಷಿತವಾಗಿ ಮನೆಗೆ ತಲುಪಿಸುವ ಮೂಲಕ ಸಾರಥಿಯಂತೆ ಕೆಲಸ ಮಾಡುತ್ತಾರೆ. ಸಾರ್ವಜನಿಕ ಪ್ರಯಾಣಿಕರು ದೇವರೆಂದೇ ಭಾವಿಸುತ್ತಾರೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶ್ರೀನಿವಾಸಗಿರಿ ಅವರು ಮಾತನಾಡಿ, ವೇಗದ ಮಿತಿ ಮನದಟ್ಟು ಮಾಡಿಕೊಂಡು, ಪಾದಾಚಾರಿಗಳನ್ನು ಗಮನದಲ್ಲಿರಿಸಿಕೊಂಡು, ರಸ್ತೆ-ಸಂಚಾರ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು ಎಂದು ಹೇಳಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಲಕ ಸಿಬ್ಬಂದಿಗಳು ನಿಗಮದ ಕನ್ನಡಿ ಇದ್ದಂತೆ. ದಿನನಿತ್ಯ ಯಾವುದೇ ಅಪಘಾತವಾಗದಂತೆ ಕ್ಷೇಮವಾಗಿ ಹೋಗಿ ಮರಳಿ ಬರುವುದರ ಮೂಲಕ ನಿಗಮಕ್ಕೆ ಕೀರ್ತಿ ತರಬೇಕು ಎಂದರು. ವಿಭಾಗೀಯ ಸಂಚಾರಿ ಅಧಿಕಾರಿ ಬಿ.ಚಾಮರಾಜ ಅವರು ನಿಗಮವು ನಡೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸನ್ಮಾನಿತರ ವಿವರ:ಕಾರ್ಯಕ್ರಮದಲ್ಲಿ ವರ್ಷಗಳ ಕಾಲ ನಿರಂತರ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ “ಸುರಕ್ಷಾ ಚಾಲಕ” ಬೆಳ್ಳಿ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಪಟ್ಟಿ: ಬಳ್ಳಾರಿ ಘಟಕ-1 ರ ಕಳಕಪ್ಪ ಗೌಡ, ಪ್ರಸಾದ್ ಬಾಬು, ರೇಣುಕಾಚಾರಿ, ಬಳ್ಳಾರಿ ಘಟಕ-2 ರ ಶಿವಾರೆಡ್ಡಿ, ಮಜೀದ್, ಸಿರುಗುಪ್ಪ ಘಟಕದ ಸಿದ್ದಪ್ಪ, ಶಂಕರಗೌಡ, ಕುರುಗೋಡು ಘಟಕದ ಶಾಂತ ಕುಮಾರ್, ಸಂಡೂರು ಘಟಕದ ರುದ್ರ್ಪ. ಸತತ 25 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿ ಹಿರಿಯ ಚಾಲಕರಾಗಿ ಮುಂಬಡ್ತಿ ಹೊಂದಿದ 09 ಜನ ಚಾಲಕರನ್ನು ಸನ್ಮಾನಿಸಿ, ಅವರಿಗೆ ಆದೇಶ ಪತ್ರ ವಿತರಿಸಲಾಯಿತು.ಪಟ್ಟಿ: ಬಳ್ಳಾರಿ ಘಟಕ-1 ರ ಡಿ.ಎಡ್ವಾರ್ಡ್ ಕುಮಾರ್, ವಲಿಭಾಷಾ, ಜೆ.ಹುಸೇನ್ ಸಾಬ್, ಕೃಷ್ಣನಾಯಕ, ರಾಮಾಂಜಿನಿ, ಎಸ್.ವಿಶ್ವನಾಥ, ಬಳ್ಳಾರಿ ಘಟಕ-2 ರ ಕೆ.ಠಾಕೂರ್ ನಾಯ್ಕ, ಸಿರುಗುಪ್ಪ ಘಟಕದ ಲಕ್ಷ್ಮಣ್ ಮೊದಲಿರ್ ಮತ್ತು ಸಂಡೂರು ಘಟಕದ ಸಿ.ರುದ್ರ್ಪ.2024-25 ನೇ ಸಾಲಿನಲ್ಲಿ ಉತ್ತಮ ಸೇವೆ ಸಲ್ಲಿಸಿದ 07 ಜನ ಸಿಬ್ಬಂದಿಗಳಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು.ಪಟ್ಟಿ: ಬಳ್ಳಾರಿ ಘಟಕ-1 ರ ಸೋಮಶೇಖರ್ ರೆಡ್ಡಿ, ಯುವರಾಜ ನಾಯ್ಕ, ಸಂತೋಷ್, ಪ್ರಕಾಶ್ ಪರಸಪ್ಪನವರ್, ನವೀನ್ ಕುಮಾರ್, ವೀರೇಶ್, ಗೋಪಾಲ ಕೃಷ್ಣ.2022 ರಿಂದ 2025ರ ವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಸರಾಸರಿ 343 ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ಬಳ್ಳಾರಿ 1ನೇ ಘಟಕದ ನಿರ್ವಾಹಕ ನೇಮಿನಾಥ ಅವರ ಕರ್ತವ್ಯ ನಿಷ್ಠೆ ಹಾಗೂ ಅತ್ಯುತ್ತಮ ಸೇವೆ ಪರಿಗಣಿಸಿ ಪ್ರಶಸ್ತಿ ಪತ್ರದೊಂದಿಗೆ ನಗದು ಬಹುಮಾನ ರೂ.10 ಸಾವಿರ ನೀಡಿ ಸತ್ಕರಿಸಲಾಯಿತು.
ಈ ವೇಳೆ ಬಳ್ಳಾರಿ 1 ನೇ ಘಟಕದ ವ್ಯವಸ್ಥಾಪಕ ಪಿ.ಶಿವಪ್ರಕಾಶ ಸೇರಿದಂತೆ ವಿಭಾಗೀಯ ಕಾರ್ಯ ಅಧೀಕ್ಷಕರು, ಕಚೇರಿ ಸಿಬ್ಬಂದಿಗಳು, ಚಾಲಕರು, ತಾಂತ್ರಿಕ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 