ಕಂಕಣವಾಡಿ ಗ್ರಾಮದಲಿ ಸೇತುವೆ ಕುಸಿದು ಚಾಲಕನ ರಕ್ಷಣೆ
Driver rescued after bridge collapses in Kankanwadi village
ಕಂಕಣವಾಡಿ ಗ್ರಾಮದಲಿ ಸೇತುವೆ ಕುಸಿದು ಚಾಲಕನ ರಕ್ಷಣೆ
ಜಮಖಂಡಿ 02: ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸೇತುವೆ ಕುಸಿದು ಕಡಿಯನ್ನು ತುಂಬಿರುವ ಟಿಪ್ಪರ್ ಕೃಷ್ಣಾ ನದಿಯ ಹಿನ್ನೀರಿಗೆ ಉರುಳಿ ಬಿದ್ದು ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ.
ಸೇತುವೆ ಕುಸಿದ ಪರಿಣಾಮ ಟಿಪ್ಪರ್ ಕೃಷ್ಣಾ ನದಿಗೆ ಬಿಳುತ್ತಿದಂತೆ ಚಾಲಕ ಟಿಪ್ಪರ್ ಮೇಲೆ ಕುಳಿತುಕೊಂಡು ಕೂಗಾಟ, ಚಿರಾಟ ಮಾಡುತ್ತಿದಂತೆ ರಸ್ತೆಯಲ್ಲಿ ಹೋಗುತ್ತಿದ ಗ್ರಾಮಸ್ಥರು ಹಗ್ಗದ ಮೂಲಕ ಚಾಲಕನನ್ನು ರಕ್ಷಣೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಕಂಕಣವಾಡಿ ಗ್ರಾಮಸ್ಥರು ಪ್ರತಿನಿತ್ಯ ಜಮಖಂಡಿಗೆ ಶಾಲಾ-ಕಾಲೇಜು ಮಕ್ಕಳು ಹಾಗೂ ಸಂತೆಗೆ, ವ್ಯಾಪಾರಕ್ಕೆ, ಆಸ್ಪತ್ರೆಗೆ ಗ್ರಾಮಸ್ಥರು ಹೋಗಬೇಕಾದರೆ ಮುಖ್ಯ ರಸ್ತೆವಾಗಿದ್ದು. ಈ ರಸ್ತೆಯ ಮಧ್ಯಭಾಗದಲ್ಲಿ ಸೇತುವೆ ಇದ್ದ ಕಾರಣ ಗ್ರಾಮಸ್ಥರು ತಮ್ಮ ಜೀವವನ್ನು ಕೈಯಲ್ಲಿ ಹಿಡಿಕೊಂಡು ಹೋಗುವ ಪರಿಸ್ಥಿತಿ ಸುಮಾರು ವರ್ಷಗಳಿಂದ ನಡೆದಿದೆ. ಸಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಮನವಿ ಮಾಡಿದರು ಸಹ ಕ್ಯಾರೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿನಿತ್ಯ ಸಾರಿಗೆ ಬಸ್‌ನಲ್ಲಿ ಶಾಲಾ ಮಕ್ಕಳನ್ನು ಹಾಗೂ ಗ್ರಾಮಸ್ಥರನ್ನು ತುಂಬಿಕೊಂಡು ಹೋಗುತ್ತದೆ. ಅದೃಷ್ಟವಶಾತ ಕೆಲವೆ ನಿಮಿಷದಲ್ಲಿ ಬಸ್ ಬರುವ ಸಮಯವಾಗಿತು. ಬಸ್ ಬಂದಿದರೆ ತುಂಬಿದ ಬಸ್ ಕೃಷ್ಣಾ ನದಿ ಹಿನ್ನೀರಿಗೆ ಬಿದ್ದ ಪರಿಣಾಮ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ ಅನೀಲ ಬಡಿಗೇರ, ಕಂದಾಯ ನೀರೀಕ್ಷಕ ಮಂಜು ದೊಡಮನಿ, ಗ್ರಾಮೀಣ ಪೋಲಿಸರು. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಭೇಟಿ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 