ರಸ್ತೆ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ   

ಮುಗಳಖೋಡ: ಪಟ್ಟಣದ ತೇರದಾಳ ರಸ್ತೆಗೆ ಶಾಸಕರ ಅನುದಾನದಲ್ಲಿ 40 ಲಕ್ಷ ರೂ/- ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಕುಡಚಿ ಶಾಸಕ ಪಿ.ರಾಜು ಗುದ್ದಲಿ ಪೂಜೆ ನೇರವೇರಿಸಿದರು. ಗುತ್ತಿಗೆದಾರರಿಗೆ ಒಳ್ಳೆಯ ಗುಣಮಟ್ಟದ ಕೆಲಸ ಮಾಡಿ ಮತ್ತು ನಿಯಮಿತ ಅವಧಿ ಒಳಗೆ ಪೂರ್ಣಗೊಳಿಸಿ ಎಂದು ಕಿವಿಮಾತು ಹೇಳಿದರು.

             ಈ ಸಂದರ್ಭದಲ್ಲಿ ಕೆಂಪಣ್ಣ ಮೂಸಿ, ಶಿವಾನಂದ ಗೋಕಾಕ, ರಮೇಶ ಖೇತಗೌಡರ, ಮುತ್ತಪ್ಪ ಬಾಳೋಜಿ, ಗೌಡಪ್ಪ ಕೇತಗೌಡರ, ಮಹಾಂತೇಶ ಯರಡತ್ತಿ, ಹಾಲಪ್ಪ ಶೇಗುಣಿಸಿ, ರಾಮಚಂದ್ರ ಯಡವಣ್ಣವರ, ರಾಮನಗೌಡ ಖೇತಗೌಡರ, ಅನ್ನಪೂಣರ್ಾ ಯರಡತ್ತಿ, ಮಂಗಲ ಪಣದಿ, ಪಿ.ಡಬ್ಲೂ.ಡಿ ಇಲಾಖೆಯ ವರ್ಕ ಇನ್ಸಪೆಕ್ಟರ್ ಶಿವಾಜಿ ದಳವಿ, ಗುತ್ತಗೆಗಾರ ಡಿ.ಎಸ್.ಚೌಗಲಾ ಮುಂತಾದವರು ಉಪಸ್ಥಿತರಿದ್ದರು.