ಲೋಕದರ್ಶನ ವರದಿ
ಅಥಣಿ 25: ಜನವಾಡ ಗ್ರಾಮದವರ ಬಹುದಿನಗಳ ಬೇಡಿಕೆಯಾಗಿದ್ದ ಹಿಪ್ಪರಗಿ ಆಣೆಕಟ್ಟಿನ ಝಿರೋ ಪಾಯಿಂಟ ಹಾಗೂ ಜನವಾಡ ರಸ್ತೆಯನ್ನು 2 ಕೋಟಿ 95 ಲಕ್ಷ ರೂಗಳ ವೆಚ್ಚದಲ್ಲಿ 6 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ತಾಲೂಕಿನ ವಿವಿಧ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ತಾಲೂಕಿನ ಜನವಾಡ ಗ್ರಾಮದಿಂದ ಝೀರೋಪಾಯಿಂಟ ವರೆಗಿನ ಲೋಕೊಪಯೋಗಿ ಇಲಾಖೆಯ ಅನುದಾನದಲ್ಲಿ ಮುಂಜುರಾದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ತಮ್ಮ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಸುಸಜ್ಜಿತ ಸಂಪರ್ಕ ರಸ್ತೆ, ಗುಣಮಟ್ಟದ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಜಾತಾ ಸನದಿ, ಓಂಕಾರಿ ಗುರವ, ಪಿ.ಡಬ್ಲು.ಡಿ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಎಂ.ಎಸ್.ಒಡೆಯರ, ಸಹಾಯಕ ಅಧಿಕಾರಿಗಳಾದ ಎ.ಜಿ. ಮುಲ್ಲಾ, ಎಸ್.ಬಿ. ಕರೆಬಸಪ್ಪನವರ, ರಾಣಿ ಚನ್ನಮ್ಮ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಧರೇಪ್ಪ ಶಿವಪ್ಪ ಠಕ್ಕಣ್ಣವರ, ಮಹಮ್ಮದ ಕಮಾಲನವರ,ರಾಜು ಜಮಖಂಡಿಕರ, ಪ್ರಕಾಶ ಚನ್ನಣ್ಣವರ, ಬಸವರಾಜ ಠಕ್ಕಣ್ಣವರ, ಯಲ್ಲಪ್ಪ ಯಲಶೇಟ್ಟಿ, ಸುರೇಶ ಜಾಮಗೌಡ, ಮಲಿಕ್ ಕಮಾಲನವರ, ಅಶೋಕ ಶೇಟೆ, ಗುರುಬಸು ಕಾಂಬಳೆ, ಈರಪ್ಪ ಬಾಡಗಿ, ನಾಗಪ್ಪ ಗುರವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.