ಲೋಕದರ್ಶನ ವರದಿ
ಕೂಡ್ಲಿಗಿ07: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವ ಮೂಲಕ ಜನರಿಗೆ ಕೆಲಸ ಒದಗಿಸಬೇಕು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು. ಅವರು ತಾಲ್ಲೂಕಿನ ಬೀರಲಗುಡ್ಡದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡಿರುವ ಕಂಪೌಂಡ ನಿಮರ್ಾಣಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಎಲ್ಲಾ ಶಾಲೆಗಳಿಗೆ ಕಂಪೌಂಡ್ ನಿಮರ್ಾಣ ಮಾಡುವಂತೆ ಮಕ್ಕಳ ಪೋಷಕರ ಹಾಗೂ ಸಾರ್ವಜನಿರಕ ಅನೇಕ ದಿನಗಳ ಬೇಡಿಕೆಯಾಗಿತ್ತು. ಇದರಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆಗಳಿಗೆ ಕಂಪೌಂಡ್ ನಿಮರ್ಾಣ ಮಾಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ತಾಲ್ಲೂಕಿನ 30 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಕಂಪೌಂಡ್ ನಿಮರ್ಾಣದಿಂದ ಶಾಲೆಗೆ ಭದ್ರತೆ ಹಾಗೂ ಮಕ್ಕಳಿಗೆ ಸುರಕ್ಷತೆ ನೀಡಿದಂತಾಗುತ್ತದೆ. ಅಲ್ಲದೆ ಸ್ಥಳೀಯರಿಗೆ ಸ್ಥಳದಲ್ಲಿಯೇ ಉದ್ಯೋಗ ನೀಡಿದಂತಾಗುತ್ತದೆ. ಅದ್ದರಿಂದ ಜನರಿಗೆ ಕೆಲಸ ನೀಡುವುದರ ಜೊತೆಗೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ, ಸದಸ್ಯರಾದ ಚಿನ್ನಾಪ್ರಪ್ಪ, ಅಧಿಮನಿ ಕೊಟ್ರೇಶ್, ಪಾಪ ನಾಯಕ, ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ನಾಯ್ಕ್, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ರೇವಣ್ಣ, ಮುಖಂಡರಾದ ಕೆ.ಎಚ್. ವೀರನಗೌಡ, ಕೆ.ಎಂ. ತಿಪ್ಪೇಸ್ವಾಮಿ, ಟಿ.ಜಿ. ಮಲ್ಲಿಕಾಜರ್ುನಗೌಡ, ಮಂಜುನಾಥ ನಾಯಕ, ಗುನ್ನಳ್ಳಿ ನಾರಾಯಣ, ಮಾಳ್ಗಿ ನಾರಾಯಣಪ್ಪ, ಗೌಡ್ರು ಸುನಿಲ್ ಸೇರಿದಂತೆ ಅನೇಕರು ಇದ್ದರು.