ಬ್ಯಾಡಗಿ ಅಳಲಗೇರಿ ಗ್ರಾಮದಲ್ಲಿ ಸೇತುವೆ ಕಾಮಗಾರಿಗೆ ಚಾಲನೆ
ಬ್ಯಾಡಗಿ: ಗ್ರಾಮೀಣ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ 1 ಕೋಟಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಿಮರ್ಾಣವಾಗುತ್ತಲಿರುವ ಸೇತುವೆ ನಿಮರ್ಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಹತ್ತು ಹಲವು ಗ್ರಾಮಗಳ ರಸ್ತೆಗಳಿಗೆ ಸೇತುವೆಗಳ ಅವಶ್ಯಕತೆ ಇದೇ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿರುವ ಅವಶ್ಯಕತೆ ಹೊಂದಿರುವ ಎಲ್ಲ ಗ್ರಾಮಗಳ ರಸ್ತೆಗಳಿಗೆ ಸೇತುವೆಗಳನ್ನು ನಿಮರ್ಿಸಿ ಕೊಡುವುದಾಗಿ ತಿಳಿಸಿದರಲ್ಲದೇ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈಗಾಗಲೇ ಗ್ರಾಮದ ರಸ್ತೆಗಳನ್ನು ಕಾಂಕ್ರೀಟ್ಕರಣಗೊಳಿಸಲಾಗಿದ್ದು ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು ಈ ಮೂಲಕ ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಬಿಜೆಪಿ ಧುರೀಣ ಸುರೇಶ ಯತ್ನಳ್ಳಿ ಮಾತನಾಡಿ ಅಭಿವೃದ್ಧಿಯನ್ನೇ ಆಡಳಿತ ಮಂತ್ರವನ್ನಾಗಿಸಿಕೊಂಡು ಆಡಳಿತ ನಡೆಸುತ್ತಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ದೇಶದ ಜೀವನಾಡಿಯಾಗಿರುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಲಿದ್ದಾರೆ. ವಿವಿಧ ಯೋಜನೆಗಳಡಿಯಲ್ಲಿ ಹಲವಾರು ಗ್ರಾಮಗಳನ್ನು ಸವರ್ಾಂಗೀಣ ಅಭಿವೃದ್ದಿಗೆ ಒಳಪಡಿಸಿ ಅತ್ತುತ್ಯಮ ಗ್ರಾಮಗಳನ್ನಾಗಿ ನಿಮರ್ಿಸಲು ಪ್ರಯತ್ನಿಸುತ್ತಲಿರುವುದು ಸಂತೋಷ ತಂದಿದೆ ಎಂದರು.
ನಿವೃತ್ ಇಂಜನೀಯರ ಸಿ.ಆರ್.ಬಳ್ಳಾರಿ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ದಿಳ್ಳೆಪ್ಪ ಮೇಡ್ಲೆರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಅನಸೂಯಾ ಕುಳೇನೂರ, ತಾ.ಪಂ.ಸದಸ್ಯೆ ಪಾರ್ವತೆಮ್ಮ ಮುದಕಮ್ಮನವರ, ಗ್ರಾ.ಪಂ.ಉಪಾಧ್ಯಕ್ಷೆ ನೀಲಮ್ಮ ಕಿತ್ತೂರ, ಸದಸ್ಯರಾದ ನಾಗಪ್ಪ ಯತ್ನಳ್ಳಿ, ಹನುಮಂತಪ್ಪ ತಂಗೌಡ್ರ, ರವಿ ಪಟ್ಟಣಶೆಟ್ಟಿ, ಶಿವಬಸಪ್ಪ ಕುಳೇನೂರ, ಚಂದ್ರಶೇಖರ ಆನ್ವೇರಿ, ನಾಗಪ್ಪ ಕೋಟಿಯವರ, ಪುಟ್ಟಪ್ಪ ಕಿತ್ತೂರ, ಲೋಕೋಪಯೋಗಿ ಇಂಜನೀಯರ ಶೆಟ್ಟಿಕೇರಿ, ಸಹಾಯಕ ಇಂಜನೀಯರ ರಾಜಶೇಖರ ಹರಮಗಟ್ಟಿ, ಗುತ್ತಿಗೆದಾರ ಸುಭಾಶ ಕಪ್ಪಲಗುಡ್ಡ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 