ರಸ್ತೆ ಅಬಿವೃದ್ಧಿ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಮಾಂಜರಿ 26:  ಮಾಂಜರಿ ಜಿ.ಪಂ. ವ್ಯಾಪ್ತಿಯಲ್ಲಿ ಬರುವ ಮಾಂಜರಿ ಯಡುರ ಚಂದೂರ ಗ್ರಾಮಗಳಿಗೆ ಜಿ.ಪಂ. ಅನುದಾನದಲ್ಲಿ ರರಸ್ತೆ ಅಭಿವೃದ್ದಿಗಾಗಿ ಅನುದಾನ ಮಂಜೂರ ಮಾಡಿ ಜನರ ಅನುಕೂಲಕ್ಕಾಗಿ ಸಂಪರ್ಕ ರಸ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮಾಜಿ ಜಿ.ಪಂ. ಸದದಸ್ಯ ಅಣ್ಣಾಸಾಹೇಬ ಪವಾರ ಹೇಳಿದರು.

ಅವರು ಜಿ.ಪಂ. ಸದಸ್ಯ ಬಾರತಿ ಪವಾರ ಇವರ ಅನುದಾನದದಡಿಯಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶೇಡಬಾಳ ರಸ್ತೆಯಿಂದ ಲೋಕುರೆ ತೋಟದ ವರೆಗೆ 2 ಕಿ.ಮೀ. ರಸ್ತೆ ಸುಧಾರಣೆಗಾಗಿ ಮಂಜೂರಾತಿ ಪಡೆದ 9 ಲಕ್ಷ ರೂ. ಅನುದಾನದಡಿಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು ಈ ವೇಳೆ ಸಂಜಯ ಕುಡಚೆ ಶಿವಾನಂದ ಚೌಗಲೆ, ರಾಜು ಗುರವ, ಶಶಿಕಾಂತ ಧನವಾಡೆ, ರಮೇಶ ಮುರಚಿಟ್ಟೆ, ಬಾಬು ಕೊಡತೆ, ಮಹಾದೇವ ಜುಗದಾರ, ಅಣ್ಣಾಸಾಹೇಬ ಲೋಕುರೆ, ರವಿ ಲೋಕುರೆ, ಚಂದ್ರಕಾಂತ ಲಂಗೋಟೆ, ಅಜಿತ ದಿಗ್ಗೆವಾಡಿ, ಪುಂಡಲಿಕ ಜತ್ರಾಟೆ, ಬಾಬು ಮಿಜರ್ೆ ಹಾಗೂ ಇನ್ನಿತರರು ಹಾಜರಿದದ್ದರು ಗುತ್ತಿಗೆದದಾರ ಶಿವಾನಂಧ ಶಿರಗಾಂವೆ ಸ್ವಾಗರಿಸಿ ವಂದಿಸಿದರು.