ವೈನ್ ಶಾಪ್ ಪಕ್ಕದ ಮಳಿಗೆಯಲ್ಲೇ ಪರವಾನಿಗೆ ಇಲ್ಲದೇ ಕುಳಿತು ಮದ್ಯ ಸೇವನೆಗೆ ಅವಕಾಶ : ಮಾಲೀಕರ ವಿರುದ್ಧ ಸೂಕ್ತಕ್ರಮಕ್ಕೆ ಹೆಚ್.ಶೇಖರ ಆಗ್ರಹ
Drinking alcohol without a permit is allowed in the shop next to the wine shop: H. Shekhar demands a
ಲೋಕದರ್ಶನ ವರದಿ
ಕಂಪ್ಲಿ 22: ಪಟ್ಟಣದ ಹಳೇ ಬಸ್ ನಿಲ್ದಾಣದ ಪುರಸಭೆಗೆ ಒಳಪಡುವ ಮಳಿಗೆಯಲ್ಲಿ ನಡೆಯುತ್ತಿರುವ ಉದಯ ವೈನ್ ಶಾಪ್ ಅಂಗಡಿಯವರು ಪಕ್ಕದ ಮಳಿಗೆಯಲ್ಲಿ ಅಕ್ರಮವಾಗಿ ಮದ್ಯಮಾರಾಟದೊಂದಿಗೆ ಕುಳಿತುಕೊಂಡು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು, ಇಂತಹ ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯ ಯುವ ಮುಖಂಡ ಹೆಚ್.ಶೇಖರ ಆಗ್ರಹಿಸಿದರು.
ಇಲ್ಲಿನ ಮದ್ಯದ ಅಂಗಡಿಗೆ ತೆರಳಿ, ಅಲ್ಲಿನ ಪಕ್ಕದ ಮಳಿಗೆಯಲ್ಲಿ ಕೂತು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದು ಕಾನೂನುಬಾಹಿರವಾಗಿದೆ. ಇದಕ್ಕೆ ಅನುಮತಿ ಇದೆಯಾ? ಎಂದು ಅಂಗಡಿ ಸಿಬ್ಬಂದಿಗಳನ್ನು ಪ್ರಶ್ನೆಸಿದಾಗ ಸಮಜಾಯಿಷಿ ಉತ್ತರ ನೀಡದ ಹಿನ್ನಲೆ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ಇಲ್ಲಿನ ಸಿಎಲ್-2 ಮದ್ಯದಂಗಡಿ ಕೇವಲ ಮದ್ಯ ಮಾರಾಟ ಮಾಡಲು ಮಾತ್ರ ಅನುಮತಿ ಪಡೆದಿರುತ್ತವೆ. ಈ ಪರವಾನಗಿ ಅಡಿಯಲ್ಲಿ ಅಂಗಡಿಯ ಪಕ್ಕದಲ್ಲೇ ಮತ್ತೊಂದು ಮಳಿಗೆಯಲ್ಲಿ ಮದ್ಯಪ್ರೀಯರಿಗೆ ಕುಳಿತು ಸೇವನೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಇಲ್ಲಿ ಕುಳಿತುಕೊಂಡು ಮದ್ಯಪಾನ ಮಾಡಲು (ಸೇವನೆಗೆ) ಅವಕಾಶವಿರುವುದಿಲ್ಲ. ಇಲ್ಲಿಂದ ಗ್ರಾಹಕರು ಮದ್ಯವನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಬಹುದೇ ಹೊರತು, ಅಂಗಡಿಯ ಒಳಗೆ ಅಥವಾ ಹೊರಗೆ ಕುಳಿತು ಕುಡಿಯುವಂತಿಲ್ಲ. ಆದರೆ, ಇಲ್ಲಿನ ಮದ್ಯದ ಅಂಗಡಿಯ ನಿರ್ವಹಣೆಯ ಜವಾಬ್ದಾರಿ ಒತ್ತ ಚಂದ್ರ್ಪ ಎಂಬುವರು ಪಕ್ಕದಲ್ಲೇ ಕುಳಿತು ಸೇವನೆ ಮಾಡಲು ಗ್ರಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸಾಕಷ್ಟು ದಿನಗಳಿಂದ ಕೂತುಕೊಂಡು ಕುಡಿಯಲು ಮಾಲೀಕರೇ ಖುದ್ದಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ಅಂಗಡಿ ಮುಂಭಾಗದ ಮುಖ್ಯರಸ್ತೆ ಮೂಲಕವೇ ಅಬಕಾರಿ ಅಧಿಕಾರಿಗಳು ಸಂಚಾರ ಮಾಡುತ್ತಿದ್ದರೂ ಅವರ ಕಣ್ಣಿಗೆ ಮಾತ್ರ ಕಾಣಿಸುತ್ತಿಲ್ಲ.
ಇದರಿಂದ ಅಬಕಾರಿ ಮತ್ತು ಅಂಗಡಿಗಳ ಮಾಲೀಕರು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಈಗಾಗಲೇ ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಏನು ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ. ಒಂದು ವೇಳೆ ಮದ್ಯದಂಗಡಿಯ ಪಕ್ಕದಲ್ಲಿ ಕುಳಿತ ಮದ್ಯ ಸೇವನೆ ಮಾಡಿತ್ತಿರುವುದು ಕಂಡು ಬಂದರೆ, ಮೇಲಿನ ಅಧಿಕಾರಿಗಳಿಗೆ ತರುವ ಜೊತೆಗೆ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 