ನಾಟಕಗಳು ಸಾಮಾಜಿಕ ಪ್ರಜ್ಞೆ ಮೂಡಿಸುತ್ತವೆ
Dramas create social awareness
ಲೋಕದರ್ಶನ ವರದಿ
ಹೂವಿನ ಹಡಗಲಿ: 03- ನಾಟಕಗಳು ಸಾಮಾಜಿಕ ಪ್ರಜ್ಞೆ ಅರಿವು ಮೂಡಿಸುತ್ತವೆ ಎಂದು ಶಾಸಕ ಎಲ್ ಕೃಷ್ಣನಾಯಕ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಹಿರೇಮಲ್ಲಿನ ಕೇರಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವದ ಪ್ರಯುಕ್ತ ನಡೆದ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ ಹಬ್ಬ ಧಾರ್ಮಿಕ ಉತ್ಸವ ನಿಮಿತ್ತ ಸಂಸ್ಕೃತಿ ಬಿಂಬಿಸುವಕಂಪನಿ ಸಾಮಾಜಿಕ ನಾಟಕಗಳನ್ನು ಹಳ್ಳಿಯ ಜನರೇ ಸ್ವಂತ ದುಡಿಮೆಯಿಂದ ಹಣ ಹೊಂದಿಸಿಕೊಂಡು ಪ್ರದರ್ಶನ ಮಾಡುವ ಕಾರ್ಯ ಅನನ್ಯ ಎಂದು ಬಣ್ಣಿಸಿದರು. ಸಾನಿಧ್ಯವನ್ನು ಶ್ರೀ ಚನ್ನಬಸವೇಶ್ವರ ಸ್ವಾಮಿಗಳು ವಹಿಸಿದ್ದರು . ಮುಖಂಡರಾದ ವಾರದ್ ಗೌಸ್ ಮೋಹಿದ್ದಿನ್. ಈ ಟಿ ಲಿಂಗರಾಜ್,ಕೊಟ್ರೇಶ್ ನಾಯಕ್. ಡಂಬಳದ ನಾಗರಾಜ್. ದೇವಲಾ ನಾಯಕ್. ಶ್ರೀಮತಿ ರೇಣುಕಮ್ಮ. ಆರ್ ಮಲ್ಲಣ್ಣ. ಡಿ ಆಂಜನೇಯ. ಹೊಂಬಳ ನಾಗರಾಜ್. ಎಂ ಎಲ್ಲಪ್ಪ. ರಾಮಣ್ಣ. ಎಚ್ ಪ್ರಕಾಶ. ಅಂಜಿನಪ್ಪ. ಎಂ ಪರಮೇಶ. ಕೆ ವಿಜಯ್ ಕುಮಾರ್ ಅನೇಕ ಹಿರಿಯ ಮುಖಂಡರು ಹಾಗೂ ಶ್ರೀ ಆಂಜನೇಯ ಸ್ವಾಮಿಯ ಭಕ್ತರು ಭಾಗವಹಿಸಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 