ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ: ಮಹಾಂತೇಶ ಗೋಡಿ
Dramas are necessary for social transformation: Mahantesh Godi
ಯರಗಟ್ಟಿ, 25 ; ಸಮಾಜ ಪರಿವರ್ತನೆಗೆ ನಾಟಕಗಳು ಅಗತ್ಯ’ ಎಂದು ಸತ್ತಿಗೇರಿ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಗೋಡಿ ಅಭಿಪ್ರಾಯಪಟ್ಟರು.
ಸಮೀಪದ ಇಟ್ನಾಳ ಗ್ರಾಮದ ಬಸವೇಶ್ವರ ಜಾತ್ರಾ ನಿಮಿತ್ಯ ಬಸವ ಭವನದಲ್ಲಿ ಜರುಗಿದ ಮಾನವಂತರ ಮನೆತನ ಎಂಬ ಸಾಮಾಜಿಕ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ಪ್ರದರ್ಶನಗಳ ಹಿಂದೆ ಸಮಾಜದ ಅಂಕುಡೊಂಕು ತಿದ್ದುವ ಉದ್ದೇಶ ಇರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಆ ಕೆಲಸವನ್ನು ಸಾಮಾಜಿಕ ಕಥಾಹಂದರ ಒಳಗೊಂಡ ನಾಟಕಗಳು ನಿಭಾಯಿಸಿದವು. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಜಾತಿ ಸೂಚಕ ಶೀರ್ಷಿಕೆಯನ್ನು ಒಳಗೊಂಡ ನಾಟಕಗಳು ಬರುತ್ತಿವೆ. ನಾಟಕಗಳು ಒಂದು ಜಾತಿಗೆ ಸೀಮಿತಗೊಂಡರೆ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಈ ವೇಳೆ ಪಂಚಮಸಾಲಿ ಮುಖಂಡ ಸಂಜುಕುಮಾರ ನವಲಗುಂದ, ಪಿಕೆಪಿ ಅಧ್ಯಕ್ಷ ವಿಠ್ಠಲ ಬಂಟನೂರ, ಮಾಜಿ ಗ್ರಾ. ಪಂ. ಅಧ್ಯಕ್ಷ ಗೌಡಪ್ಪ ಸವದತ್ತಿ, ಮಾಜಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ, ಗ್ರಾ. ಪಂ. ಬಂಗಾರೆವ್ವ ಮಾದರ, ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಯರಗಟ್ಟಿ, ಶಿವಾನಂದ ಕುಸಲಾಪೂರ, ಸಂಜು ಚಂದರಗಿ, ಬಸವರಾಜ ಪೂಜೇರಿ, ಸೋಮು ಹೊಸಳ್ಳಿ ಸೇರಿದಂತೆ ಅನೇಕರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 