ನಾಟಕದಿಂದ ಮನ ಪರಿವರ್ತನೆ ಸಾಧ್ಯ:ಶ್ರೀ ಬಸವರಾಜ ದೇವರು
Drama can transform the mind: Sri Basavaraj Devaru
ಧಾರವಾಡ 02: ಪ್ರತಿಯೊಬ್ಬರ ಜೀವನದಲ್ಲಿ ನಾಟಕವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜೀವನದಲ್ಲಿ ಮಾಡಿದ ತಪ್ಪಿಗಾಗಿ ಶಿಕ್ಷೆಯನ್ನು ಅನುಭವಿಸುತ್ತಿರುವ ಕೇಂದ್ರ ಕಾರಾಗೃಹದ ನಿವಾಸಿಗಳು ನಾಟಕವನ್ನು ಕೇವಲ ಮನರಂಜನೆಗಾಗಿ ಕಲಿಯದೇ ಅದರಿಂದ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಹಿರೇಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು ಅವರು ಹೇಳಿದರು.ಇಂದು ಧಾರವಾಡ ರಂಗಾಯಣ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಧಾರವಾಡ, ಕೇಂದ್ರ ಕಾರಾಗೃಹ ಹಾಗೂ ಪ್ರಿಜನ್ ಮಿನಿಸ್ಟರಿ ಇವರ ಸಹಯೋಗದಲ್ಲಿ ಕೇಂದ್ರ ಕಾರಾಗೃಹ ನಿವಾಸಿಗಳಿಗೆ ಆಯೋಜಿಸಿದ್ದ ರಂಗ ನಾಟಕ ಶಿಬಿರದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಾರಾಗೃಹ ನಿವಾಸಿಗಳಿಗಾಗಿ ಧಾರವಾಡ ರಂಗಾಯಣವು ನಾಟಕವನ್ನು ಕಲಿಸುತ್ತಿರುವುದುದು ಹೆಮ್ಮೆಯ ವಿಷಯ. ಈ ಮೂಲಕ ಅವರಲ್ಲಿರುವ ಕಲೆಯನ್ನು ಗುರುತಿಸಿ, ಶಿಕ್ಷೆಯ ನಂತರದ ಮುಂದಿನ ಜೀವನದಲ್ಲಿ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸಲು ಸ್ಪೂರ್ತಿಯನ್ನು ನೀಡಿದಂತಾಗುತ್ತದೆ. ಇದರ ಸದುಪಯೋಗವನ್ನು ಕಾರಾಗೃಹ ನಿವಾಸಿಗಳು ಪಡೆದುಕೊಂಡು ತಮ್ಮ ಜೀವನವನ್ನು ನಡೆಸಬೇಕು. ಶ್ರೀಕೃಷ್ಣನು ಕಾರಾಗೃಹದಲ್ಲಿಯೇ ಜನಿಸಿ ಲೋಕಕಲ್ಯಾಣವನ್ನು ಮಾಡಿದರು. ನಿಮ್ಮಲ್ಲಿನ ಬದಲಾವಣೆಗೆ ಈ ರಂಗ ನಾಟಕ ಶಿಬಿರ ಪ್ರೇರಣೆಯಾಗಲಿ, ಜೀವನವನ್ನು ಕತ್ತಲಿಂದ ಬೆಳಕಿನೆಡೆಗೆ ಬದಲಾಸಿಕೊಳ್ಳಿ ಎಂದು ಸಲಹೆ ನೀಡಿದರು.
ಜೀವನದಲ್ಲಿ ತಪ್ಪುಗಳು ನಡೆಯುತ್ತವೆ ಆದರೆ ಅವುಗಳನ್ನು ಸರಿಪಡಿಸಿಕೊಂಡು ತಪ್ಪು ನಡೆಯದಂತೆ ಜೀವನವನ್ನು ನಡೆಸುವುದು ಮುಖ್ಯವಾಗುತ್ತದೆ. ಮಾಡಿದಂತಹ ತಪ್ಪನ್ನು ತಿದ್ದಿಕೊಂಡು ಮುಂದಿನ ಜೀವನದಲ್ಲಿ ಉತ್ತಮ ನಾಗರಿಕರಾಗಿರುವುದು ಅವಶ್ಯವಾಗಿದೆ. ಈ ಶಿಬಿರವನ್ನು ಆಯೋಜಿಸುವ ಮೂಲಕ ಕಾರಾಗೃಹ ನಿವಾಸಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಮುಂದಿನ ಜೀವನದಲ್ಲಿ ಅಳವಡಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ನಿತ್ಯ ಸಹಾಯ ಮಾತೆಯ ದೇವಾಲಯದ ಫಾದರ್ ಜೊ. ರೋಡ್ರಿಗ್ಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಗಾಯಣ ನಿರ್ದೇಶಕರಾದ ಡಾ. ರಾಜು ತಾಳಿಕೋಟಿ ಅವರು ಅಧ್ಯಕ್ಷತೆ ವಹಿಸಿ, ಮನುಷ್ಯ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು. ಜಗತ್ತೆ ಒಂದು ನಾಟಕ. ನಾವೆಲ್ಲರೂ ಪಾತ್ರಧಾರಿಗಳು. ನಮ್ಮ ಪಾತ್ರಗಳನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಕಲೆಗೆ ಜಾತಿ, ಮತ, ಧರ್ಮದ ಭೇದವಿಲ್ಲ. ಧಾರವಾಡ ರಂಗಾಯಣ ಹಾಗೂ ಸಾಧನಾ ಸಂಸ್ಥೆ ಹಾಗೂ ಪ್ರಿಜನ್ ಮಿನಿಸ್ಟರಿ ಸೇರಿ ಹಮ್ಮಿಕೊಂಡಿರುವ ಈ ರಂಗ ನಾಟಕ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದರು.ಇಸ್ಲಾಂ-ಈ-ಜಮಾತ್ ಟ್ರಸ್ಟ್‌ನ ಜನಾಬ ಅತೀಕ್ ಅಹ್ಮದ್ ಸಂಗ್ರಸಕೊಪ್ಪ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ನಿರ್ಮಲ ಬಿ.ಆರ್, ಪ್ರಿಜನ್ ಮಿನಿಸ್ಟರಿಯ ಸದಸ್ಯರಾದ ಸ್ಯಾಲಿ ಡಿಸೋಜಾ, ದಿವ್ಯಾ ಡಿಸೋಜಾ ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಸ್ವಾಗತಿಸಿದರು. ಸಾಧನಾ ಸಂಸ್ಥೆಯ ಸಂಸ್ಥಾಪಕರಾದ ಡಾ.ಇಸಾಬೆಲಾ ಝೇವಿಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರಾಗೃಹದ ಶಿಕ್ಷಕರಾದ ಸಿ.ಪಿ ಕುಮಾರ ಕುರಬೆಟ್ ನಿರೂಪಿಸಿ, ಶಿಬಿರ ನಿರ್ದೇಶಕ ಕಲ್ಲಪ್ಪ ಪೂಜಾರಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 