ವಿಜಯಪುರ: 11- ಭಾರತ
ಚುನಾವಣಾ ಆಯೋಗದ ನಿದರ್ೇಶನದಂತೆ
ಅಕ್ಟೋಬರ್ 10 ರಂದು ಕರಡು ಮತದಾರರ
ಪಟ್ಟಿಯನ್ನು ಆಯಾ ಮತ ಕ್ಷೇತ್ರ
ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದ್ದು,
ಮತದಾರರ ಪಟ್ಟಿಯಿಂದ ಹೊರಗುಳಿದ ಮತದಾರರನ್ನು ಮತದಾರ ಪಟ್ಟಿಗೆ ಸೇರ್ಪಡೆಗೊಳಿಸಲು ಸೂಕ್ತ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ
ಅವರು ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು,
ಈಗಾಗಲೇ ಜಿಲ್ಲೆಯ ಮತದಾರರಿಗೆ ಸಂಬಂಧಪಟ್ಟಂತೆ ಕರಡು ಮತದಾರರ ಪಟ್ಟಿ
ಪ್ರಕಟಿಸಲಾಗಿದೆ. ಜಿಲ್ಲೆಯಲ್ಲಿ ಮೊದಲು ಇದ್ದ ಒಟ್ಟು 2098 ಮತಗಟ್ಟೆಗಳಲ್ಲಿ
ಗ್ರಾಮೀಣ 1300 ಮೇಲ್ಪಟ್ಟು ಹಾಗೂ ಪಟ್ಟಣ ಪ್ರದೇಶದಲ್ಲಿ
1400 ಮೇಲ್ಪಟ್ಟು ಮತದಾರರಿರುವ ಮತಗಟ್ಟೆಗಳಲ್ಲಿ ಧ್ರುವಿಕರಿಸಿ ಹೊಸದಾಗಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಈಗ ಒಟ್ಟು 2101 ಮತಗಟ್ಟೆಗಳು
ಆಗಿವೆ. ಅದರಂತೆ ಮತದಾರರ ಪಟ್ಟಿ ಸಂಕ್ಷೀಪ್ತ ಪರಿಷ್ಕರಣೆ-2019ರ ವೇಳಾಪಟ್ಟಿ ಸಹ
ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಮತಕ್ಷೇತ್ರವಾರು ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 103932 ಪುರುಷ, 99305 ಮಹಿಳಾ ಹಾಗೂ 34 ಇತರೆ ಮತದಾರರು ಸೇರಿದಂತೆ
203271 ಮತದಾರರಿದ್ದಾರೆ.
27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 108130 ಪುರುಷ, 100953 ಮಹಿಳಾ ಹಾಗೂ 19 ಇತರೆ ಮತದಾರರು ಸೇರಿದಂತೆ
209102 ಮತದಾರರಿದ್ದಾರೆ.
28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 103328 ಪುರುಷ, 97595 ಮಹಿಳಾ ಹಾಗೂ 18 ಇತರೆ ಮತದಾರರು ಸೇರಿದಂತೆ
200941 ಮತದಾರರಿದ್ದಾರೆ.
29-ಬಬಲೇಶ್ವರ ಮತಕ್ಷೇತ್ರದಲ್ಲಿ 105332 ಪುರುಷ, 101200 ಮಹಿಳಾ ಹಾಗೂ 12 ಇತರೆ ಮತದಾರರು ಸೇರಿದಂತೆ
206544 ಮತದಾರರಿದ್ದಾರೆ.
30-ಬಿಜಾಪುರ ನಗರ ಮತಕ್ಷೇತ್ರದಲ್ಲಿ 122018 ಪುರುಷ, 120339 ಮಹಿಳಾ
ಹಾಗೂ 80 ಇತರೆ ಮತದಾರರು ಸೇರಿದಂತೆ
242437 ಮತದಾರರಿದ್ದಾರೆ.
31-ನಾಗಠಾಣ ಮತಕ್ಷೇತ್ರದಲ್ಲಿ 132566 ಪುರುಷ, 124289 ಮಹಿಳಾ ಹಾಗೂ 32 ಇತರೆ ಮತದಾರರು ಸೇರಿದಂತೆ
256887 ಮತದಾರರಿದ್ದಾರೆ.
32-ಇಂಡಿ ಮತಕ್ಷೇತ್ರದಲ್ಲಿ 120253 ಪುರುಷ, 111739 ಮಹಿಳಾ ಹಾಗೂ 23 ಇತರೆ ಸೇರಿದಂತೆ 232015 ಮತದಾರರಿದ್ದಾರೆ
ಹಾಗೂ 33-ಸಿಂದಗಿ ಮತಕ್ಷೇತ್ರದಲ್ಲಿ 116823 ಪುರುಷ, 109063 ಮಹಿಳಾ ಹಾಗೂ 28 ಇತರೆ ಮತದಾರರು ಸೇರಿದಂತೆ
225914 ಮತದಾರರಿದ್ದು, ಒಟ್ಟು ಜಿಲ್ಲೆಯಾದ್ಯಂತ ಒಟ್ಟು 1777111 ಮತದಾರರಿದ್ದಾರೆ ಎಂದು ಹೇಳಿದರು.
ಮತದಾರರ ಪಟ್ಟಿ ಸಂಕ್ಷೀಪ್ತ ಪರಿಷ್ಕರಣೆ-2019ರ ವೇಳಾಪಟ್ಟಿಯಂತೆ ದಿನಾಂಕ
: 10-10-2018ರಂದು ಕರಡು ಮತದಾರರ ಪಟ್ಟಿ
ಪ್ರಕಟಣೆ, ದಿನಾಂಕ : 10-10-2018 ರಿಂದ 20-11-2018ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಅವಧಿ, ದಿನಾಂಕ : 20-12-2018ರೊಳಗಾಗಿ ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ ಹಾಗೂ ದಿನಾಂಕ : 04-01-2019 ರಂದು ಅಂತಿಮ
ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.
ದಿನಾಂಕ : 01-01-2019ಕ್ಕೆ 18 ವರ್ಷ ವಯೋಮಿತಿ ಹೊಂದುವ
ಹಾಗೂ ಮತದಾರರ ಪಟ್ಟಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಾಗಿ ಅಂದರೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ನಮೂನೆ 6, ಹೆಸರು ತೆಗೆದುಹಾಕಲು ನಮೂನೆ ನಂ.7, ತಿದ್ದುಪಡಿಗಾಗಿ ನಮೂನೆ ನಂ.8 ಹಾಗೂ ಒಂದೇ
ಮತಕ್ಷೇತ್ರದಲ್ಲಿ ಬೇರೆ ಮತಗಟ್ಟೆಗೆ ವಗರ್ಾವಣೆ
ಹೊಂದಲು ನಮೂನೆ ನಂ.8ಎ ರಲ್ಲಿ
ಸಂಬಂಧಪಟ್ಟ ಮತಗಟ್ಟೆಯ ಬಿಎಲ್ಓ ಅಥವಾ ಸಂಬಂಧಪಟ್ಟ ತಾಲೂಕಿನ
ತಹಶೀಲ್ದಾರ ಕಚೇರಿಯಲ್ಲಿ ಅಕ್ಟೋಬರ್ 10 ರಿಂದ ನವೆಂಬರ್ 20ರೊಳಗಾಗಿ
ಅಜರ್ಿ ಸಲ್ಲಿಸಬಹುದಾಗಿದ್ದು, ಈ ಕುರಿತು ದೂರುಗಳಿದ್ದಲ್ಲಿ
ಸಂಬಂಧಪಟ್ಟ ಮತದಾರರ ನೊಂದಣಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ
ಮಾಹಿತಿಗಾಗಿ ದೂ: 08352-251289 ಸಂಪಕರ್ಿಸಿ ದೂರು ಸಲ್ಲಿಸಬಹುದು ಎಂದು
ಅವರು ಹೇಳಿದರು.
ರಾಜಕೀಯ ಪಕ್ಷದವರು ಬಿಎಲ್ಎಗಳನ್ನು ಇನ್ನಷ್ಟು ಚುರುಕುಗೊಳಿಸಿ ಮತದಾರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಮತದಾರರ
ಪಟ್ಟಿಗೆ ಸೇರ್ಪಡೆಗೊಳಿಸಲು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರಿಗೆ ಉಪವಿಭಾಗಾಧಿಕಾರಿಗಳು ಮಾಹಿತಿ ನೀಡಿ, ಈ ಮೊದಲು ಮತದಾರರ
ಪಟ್ಟಿ ಕಾರ್ಯ ಇಆರ್ಎಂಎಸ್ ಸಾಫ್ಟವೇರ್ನಲ್ಲಿ ಮಾಡಲಾಗುತ್ತಿದ್ದು,
ಸಧ್ಯ ಭಾರತ ಚುನಾವಣಾ ಆಯೋಗವು ಇಆರ್ಓ
ನೆಟ್ ಸಾಫ್ಟವೇರ್ ಪರಿಚಯಿಸಿದ್ದು, ಅದರಲ್ಲಿ ಮತದಾರರ
ಪಟ್ಟಿ ಕಾರ್ಯನಿರ್ವಹಿಸಲಾಗುತ್ತಿದ್ದು, ಈ ಕುರಿತಂತೆ ವಿವರವಾಗಿ
ಮಾಹಿತಿ ನೀಡಿದರು.
ಸಭೆಯಲ್ಲಿ
ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಉಪವಿಭಾಗಾಧಿಕಾರಿ
ಕರಲಿಂಗನ್ನವರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.