ಕರಡು ಮತದಾರರ ಪಟ್ಟಿ ಪ್ರಕಟ; ಸೆ. ೨೩ರವರೆಗೆ ಆಕ್ಷೇಪಣೆಗೆ ಅವಕಾಶ
Draft electoral roll published; objections accepted until September 23.
ಲೋಕದರ್ಶನ ವರದಿ
ಬಳ್ಳಾರಿ ೨೪: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೂತನ ಕರಡು ಮತದಾರರ ಪಟ್ಟಿಯನ್ನು ಆ. ೨೪ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ತಿಳಿಸಿದ್ದಾರೆ.
ನಗರದ ನೂತನ ಜಿಲ್ಲಾಡಳಿತ ಭವನದ ಕೇಶ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲ ನಿಗದಿತ ಸ್ಥಳಗಳಲ್ಲಿ ಹಾಗೂ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಪ್ರಕಟಿಸಲಾಗಿದೆ ಎಂದರು.
ಸೆ. ೨೩ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಅಥವಾ ಹೆಸರು ಕೈಬಿಡುವ ಕುರಿತು ಸಾರ್ವಜನಿಕರು ಹಾಗೂ ಅರ್ಹ ಮತದಾರರು ಆಕ್ಷೇಪಣೆ ಮತ್ತು ಅರ್ಜಿಗಳನ್ನು ಸಲ್ಲಿಸಬಹುದು. ಆ. ೨೪ರಿಂದ ಸೆ. ೨೩ರವರೆಗೆ ಒಂದು ತಿಂಗಳ ಕಾಲ ಅವಕಾಶ ಕಲ್ಪಿಸಲಾಗಿದೆ.
ಸಲ್ಲಿಕೆಯಾಗುವ ಆಕ್ಷೇಪಣೆ ಹಾಗೂ ಅರ್ಜಿಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಅ. ೨೨ರೊಳಗೆ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಅ. ೨೭ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ೧೦.೦೬ ಲಕ್ಷ ಮತದಾರರು
ಮತಗಟ್ಟೆಗಳ ಪುನರ್ವಿಂಗಡಣೆ ಬಳಿಕ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು ೧,೨೬೦ ಮತಗಟ್ಟೆಗಳು ಇದ್ದು, ೧೦,೦೬,೩೦೭ ಮತದಾರರು ಕರಡು ಪಟ್ಟಿಯಲ್ಲಿದ್ದಾರೆ. ಇವರಲ್ಲಿ ೪,೯೪,೩೭೧ ಪುರುಷರು, ೫,೧೧,೭೪೦ ಮಹಿಳೆಯರು ಹಾಗೂ ೧೯೬ ತೃತೀಯಲಿಂಗ ಮತದಾರರು ಸೇರಿದ್ದಾರೆ.
ವರ್ಗವಾರು ವಿವರದಂತೆ, ೧೮–೧೯ ವರ್ಷದ ಯುವ ಮತದಾರರು ೧೭,೭೬೭, ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ೧೨,೬೦೭, ವಿಶೇಷ ಚೇತನ ಮತದಾರರು ೧೩,೨೮೮ ಹಾಗೂ ಸೇವಾ ಮತದಾರರು ೧೮೩ ಇದ್ದಾರೆ. ಹೊಸದಾಗಿ ಸಲ್ಲಿಕೆಯಾಗಿರುವ ಫಾರಂ-೬ ಅರ್ಜಿಗಳ ಸಂಖ್ಯೆ ೭,೮೪೧ ಆಗಿದೆ.
ಕ್ಷೇತ್ರವಾರು ಮತದಾರರ ವಿವರ
o ಕಂಪ್ಲಿ (೯೧): ೨೫೩ ಮತಗಟ್ಟೆಗಳು; ೧,೦೦,೭೦೬ ಪುರುಷರು, ೧,೦೪,೦೪೭ ಮಹಿಳೆಯರು, ೩೯ ತೃತೀಯಲಿಂಗ ಮತದಾರರು; ಒಟ್ಟು ೨,೦೪,೭೯೨.
o ಸಿರುಗುಪ್ಪ (೯೨): ೨೪೪ ಮತಗಟ್ಟೆಗಳು; ೯೬,೯೬೩ ಪುರುಷರು, ೯೯,೧೫೩ ಮಹಿಳೆಯರು, ೫೭ ತೃತೀಯಲಿಂಗ ಮತದಾರರು; ಒಟ್ಟು ೧,೯೬,೧೭೩.
o ಬಳ್ಳಾರಿ ಗ್ರಾಮೀಣ (೯೩): ೨೩೮ ಮತಗಟ್ಟೆಗಳು; ೯೮,೨೧೪ ಪುರುಷರು, ೧,೦೧,೭೧೩ ಮಹಿಳೆಯರು, ೪೫ ತೃತೀಯಲಿಂಗ ಮತದಾರರು; ಒಟ್ಟು ೧,೯೯,೯೭೨.
o ಬಳ್ಳಾರಿ ನಗರ (೯೪): ೨೬೧ ಮತಗಟ್ಟೆಗಳು; ೯೭,೨೯೮ ಪುರುಷರು, ೧,೦೫,೩೦೮ ಮಹಿಳೆಯರು, ೩೫ ತೃತೀಯಲಿಂಗ ಮತದಾರರು; ಒಟ್ಟು ೨,೦೨,೬೪೧.
o ಸಂಡೂರು (೯೫): ೨೬೪ ಮತಗಟ್ಟೆಗಳು; ೧,೦೧,೧೯೦ ಪುರುಷರು, ೧,೦೧,೫೧೯ ಮಹಿಳೆಯರು, ೨೦ ತೃತೀಯಲಿಂಗ ಮತದಾರರು; ಒಟ್ಟು ೨,೦೨,೭೨೯.
ಸ್ಥಳಾಂತರ ಹಾಗೂ ಮೃತಪಟ್ಟ ಮತದಾರರ ವಿವರ
ಮನೆ-ಮನೆ ಭೇಟಿ ಸಂದರ್ಭದಲ್ಲಿ ಪತ್ತೆಯಾಗದ ಮತದಾರರು ೪೯,೭೦೦, ಶಾಶ್ವತವಾಗಿ ಸ್ಥಳಾಂತರಗೊAಡವರು ೧,೦೨,೧೫೧, ಎರಡು ಕಡೆ ಹೆಸರು ಹೊಂದಿರುವವರು ೨೧,೪೭೨ ಎಂದು ಗುರುತಿಸಲಾಗಿದೆ. ಜಿಲ್ಲಾದ್ಯಂತ ಮೃತಪಟ್ಟಿರುವ ೪೧,೧೪೪ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇತರ ವರ್ಗದಲ್ಲಿ ೮,೭೯೨ ಮತದಾರರು ಇದ್ದಾರೆ.
ಹೊಸ ಮತದಾರರಿಗೆ ನೋಂದಣಿಗೆ ಅವಕಾಶ
ಅ. ೧, ೨೦೨೬ಕ್ಕೆ ೧೮ ವರ್ಷ ಪೂರ್ಣಗೊಳಿಸುವ ಅರ್ಹ ಯುವಕ-ಯುವತಿಯರು ಘೋಷಣಾ ನಮೂನೆಯೊಂದಿಗೆ ಫಾರಂ-೬ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು, ವಿಳಾಸ, ಭಾವಚಿತ್ರ ಸೇರಿದಂತೆ ವಿವರಗಳ ತಿದ್ದುಪಡಿಗೆ ಫಾರಂ-೮, ಮೃತಪಟ್ಟ ಅಥವಾ ಶಾಶ್ವತವಾಗಿ ಸ್ಥಳಾಂತರಗೊAಡ ಮತದಾರರ ಹೆಸರು ಕೈಬಿಡಲು ಫಾರಂ-೭ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ನಾಗರಿಕರು ಆನ್ಲೆöÊನ್ ಮೂಲಕ ಇಅIಓಇಖಿ ಆ್ಯಪ್ ಅಥವಾ ಚುನಾವಣಾ ಆಯೋಗದ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದು. ಆಫ್ಲೆöÊನ್ನಲ್ಲಿ ಸಂಬAಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳು ಅಥವಾ ತಾಲೂಕು ಕಚೇರಿಗಳನ್ನು ಸಂಪರ್ಕಿಸಬಹುದು.
ಕರಡು ಮತದಾರರ ಪಟ್ಟಿಯನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಜಾಲತಾಣ ಹಾಗೂ ಬಳ್ಳಾರಿ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ನಲ್ಲಿಯೂ ಪ್ರಕಟಿಸಲಾಗಿದೆ.
ಸಾರ್ವಜನಿಕರು ಅವಕಾಶ ಬಳಸಿಕೊಳ್ಳಬೇಕು
ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ, ತಪ್ಪುಗಳಿದ್ದರೆ ಅಥವಾ ಅನರ್ಹರ ಹೆಸರು ಸೇರಿದ್ದರೆ, ಸಾರ್ವಜನಿಕರು ಆ. ೨೪ರಿಂದ ಸೆ. ೨೩ರವರೆಗೆ ಸಂಬAಧಪಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ಲಿಖಿತವಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ರಜುಬೇರ್ ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ., ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರೇಣುಕಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 