ಮೈಸೂರು,
ಏ.13, ಕೊರೊನಾ ಸೋಂಕು ತಡೆಗಟ್ಟಲು ಲಾಕ್ ಡೌನ್ ಜಾರಿಯಾಗಿದ್ದರಿಂದ ಸಂವಿಧಾನ
ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಎಲ್ಲರೂ ಸರಳವಾಗಿ ಆಚರಿಸಬೇಕು ಎಂದು
ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಜನರಲ್ಲಿ ಮನವಿ ಮಾಡಿದ್ದಾರೆ.ಸೋಮವಾರ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.14ರಂದು ಡಾ.ಬಿ ಆರ್ ಅಂಬೇಡ್ಕರ್
ಜಯಂತಿ ಪ್ರಯುಕ್ತ ಯಾವುದೇ ಜಾಥಾ ಮಾಡಬಾರದು. ಹೆಚ್ಚು ಜನ ಸೇರುವಂತಿಲ್ಲ. ಮನೆಯಲ್ಲೇ
ಎಲ್ಲರೂ ಸರಳವಾಗಿ ಆಚರಿಸುವ ಮೂಲಕ ಅಂಬೇಡ್ಕರ್ ಅವರ ಕನಸನ್ನು ಈಡೇರುವ ಹಾಗೇ ಮಾಡೋಣ
ಎಂದು ಜನರಲ್ಲಿ ಮನವಿ ಮಾಡಿದ್ದಾರೆ.ಇನ್ನು, ಜುಬಿಲೆಂಟ್ ಕಾರ್ಖಾನೆಯಿಂದಲೇ
ಕೊರೊನಾ ಸೋಂಕು ಹೆಚ್ಚಾಗಿ ದೃಢಪಡುತ್ತಿದ್ದು, ಇದಕ್ಕೆ ಮೂಲ ಕಾರಣ ಏನು ಎಂಬುದು
ಗೊತ್ತಾಗಬೇಕಿದೆ. ಜಿಲ್ಲಾಡಳಿತ, ಸಚಿವರು ಈಗಾಗಲೇ ತನಿಖೆಗೆ ಮುಂದಾಗಿದ್ದಾರೆ.
ಶೀಘ್ರದಲ್ಲೇ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬರಲಿದೆ ಎಂದರು. ತನಿಖೆಯ ವರದಿ ಬಂದ ನಂತರ ಜುಬಿಲೆಂಟ್ ಫ್ಯಾಕ್ಟರಿ ತೆರೆಯೋಬೇಕೋ, ಬೇಡವೋ ಎಂಬುದನ್ನು ತೀರ್ಮಾನಿಸಲಾಗುವುದು ಎಂದರು.