ರಾಷ್ಟ್ರಮಟ್ಟದ ಸಮಾವೇಶಕ್ಕೆ ಡಾ. ಮಹಾಂತೇಶ ರಾಮಣ್ಣವರ ಆಯ್ಕೆ
ಬೆಳಗಾವಿ 11 : ಹರಿಯಾಣ ರಾಜ್ಯದ ಗುರು ಗೋವಿಂದ ಸಿಂಗ್ ಟ್ರೈ ಸೆಂಟೇನರಿ ವಿಶ್ವವಿದ್ಯಾಲಯದ ಗುರುಗ್ರಾಂ ವತಿಯಿಂದ ಇದೇ ದಿನಾಂಕ ಡಿಸೆಂಬರ್ 12 ರಂದು ಜರುಗಲಿರುವ ವೈದ್ಯಕೀಯ, ಆಯುರ್ವೇದ, ದಂತ, ನಸಿಂರ್ಗ್ ಹಾಗೂ ನ್ಯಾಚುರೋಪತಿ ವೈದ್ಯ ವಿದ್ಯಾರ್ಥಿಗಳಿಗೆ ದೇಹದಾನ ಹಾಗೂ ಅಂಗಾಂಗ ದಾನದ ಜಾಗೃತಿ ಕಾರ್ಯಕ್ರಮವನ್ನು ಎಸ್ ಜಿ ಟಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಕರ್ನಾಟಕದ ದೇಹದಾನದ ರಾಯಭಾರಿ, ಕೆಎಲ್‌ಇ ಬಿ.ಎಂ.ಕಂಕಣವಾಡಿ ಆಯುರ್ವೆದ ಮಹಾವಿದ್ಯಾಲಯದ ರಚನಾ ಶರೀರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಮಹಾಂತೇಶ ಬಿ ರಾಮಣ್ಣವರ ಅವರನ್ನು ಸಂಪನ್ಮೂಲವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ. ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ದ ಮೂಲಕ ಕಳೆದ 15 ವರ್ಷದಿಂದ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ನೇತ್ರ ಚರ್ಮ ದೇಹದಾನ ಹಾಗೂ ಅಂಗಾಂಗ ದಾನದ ಜಾಗೃತಿ ಮೂಡಿಸಿ ಕರ್ನಾಟಕದಲ್ಲಿ ಟ್ರಸ್ಟಿನ ಮುಖಾಂತರ ಹೆಚ್ಚಿನ ಸಂಖ್ಯೆಯಲ್ಲಿ ದೇಹದಾನ ಅಂಗಾಂಗ ದಾನ ಡಾ. ಮಹಾಂತೇಶ ರಾಮಣ್ಣನವರ ಹೆಚ್ಚಿನ ಶ್ರಮ ವಹಿಸಿದ್ದಾರೆ. ಇತ್ತೀಚಿಗಷ್ಟೇ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟಿಗೆ ಅತ್ಯುತ್ತಮ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಮಾನ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.