ಡಾ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಹಣ್ಣು ಹಂಪಲು ವಿತರಣೆ
Dr. Veerendra Heggade's birthday fruit distribution
ಬೆಳಗಾವಿ 26: ಗ್ರಾಮೀಣ ಮಹಿಳೆಯರ ಸವಾಂರ್ಗೀಣ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಪೂಜ್ಯರಾದ ಡಾ.ಡಿ ವೀರೇಂದ್ರ ಹೆಗ್ಗಡೆ ಹುಟ್ಟು ಹಬ್ಬದ ಪ್ರಯುಕ್ತ ಬೆಳಗಾವಿ ತಾಲೂಕಿನ ವಿಜಯ ನಗರ ವಲಯದಲ್ಲಿ ಸಮೃದ್ಧ ವಿಕಲಚೇತನ ಸಂಸ್ಥೆಯಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಪೂಜ್ಯರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಗೌರವಾನ್ವಿತ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯನ್ನು ಸ್ಥಾಪಿಸಿ ಕರ್ನಾಟಕ ರಾಜ್ಯದ ಬಡವರ, ರೈತರ, ಹಾಗೂ ಮಹಿಳೆಯರಿಗೆ ಆರ್ಥಿಕ ಸಹಾಯ-ಸಹಕಾರಿ ದಾರೀದೀಪವಾಗಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಲಕ್ಷಾಂತರ ಬಡಕುಟುಂಬಗಳು ಉತ್ತಮ ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು. ಈ ವೇಳೆ ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಜಿ. ಆರ್. ಸೂನೆರ್, ತಾಲ್ಲೂಕಿನ ಯೋಜನಾಧಿಕಾರಿ ರಾಮ್. ಎಮ್, ಒಕ್ಕೂಟ ಅಧ್ಯಕ್ಷರಾದ ಲಲಿತಾ ತೊಗರಸಿ ವಲಯದ ಮೇಲ್ವಿಚಾರಕಿ ಸಂಗೀತಾ ಹಾಗೂ ಸಮೃದ ಸಂಸ್ಥೆ ಅಧ್ಯಕ್ಷ ರಾದ ಶಿವನಗೌಡ ಪಾಟೀಲ ಮತ್ತು ಕಾರ್ಯ ದರ್ಶಿ ಪ್ರಶಾಂತ ಪೊದಾರ ಕೃಷಿ ಅಧಿಕಾರಿ ನಾಗರಾಜ ಸರ್ ಮತ್ತು ವಲಯದ ಸೇವಾ ಪ್ರತಿನಿಧಿ ಗಳು ಮತ್ತು ಸಮೃದ್ಧ ಅಂಗವಿಕಲರ ಸಂಸ್ಥೆ ಮಕ್ಕಳು ಉಪಸ್ಥಿತ ರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 