ಶಿಕ್ಷಣದ ಮಹತ್ವ ಎತ್ತಿ ತೋರಿಸಿದ ಡಾ. ವಿ.ಕೆ. ಗೋಕಾಕರು - ವೀರಯ್ಯಸ್ವಾಮಿ
Dr. V.K. Gokak Highlighted the Importance of Education – Veerayyaswamy
ಲೋಕದರ್ಶನ ವರದಿ
ಹಾವೇರಿ, ಸೆ. 5: ಶಿಕ್ಷಣಕ್ಕೆ ಹೆಚ್ಚಿನ ಬೆಲೆ ಇದೆ. ಅದರ ಮೂಲಕ ಎಂತಹ ಎತ್ತರಕ್ಕೂ ಏರಬಹುದು ಎಂಬ ಸಂದೇಶವನ್ನು ನಾಡಿಗೆ ನೀಡಿದವರು ಡಾ. ವಿ.ಕೆ. ಗೋಕಾಕರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹೇಳಿದರು.
ಉತ್ತರ ಕರ್ನಾಟಕದಲ್ಲಿ ಪಿಎಚ್ಡಿ ಮಾಡುವವರ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಅವರು ಸಲಹೆ ನೀಡಿದರು.
ಡಾ. ವಿ.ಕೆ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಸವಣೂರಿನ ಶ್ರೀ ಚೆನ್ನಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಡಾ. ವಿ.ಕೆ. ಗೋಕಾಕರ ಜನ್ಮದಿನದ ಅಂಗವಾಗಿ ಏರಿ್ಡಸಿದ್ದ ಕವನ ಮತ್ತು ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಸ್ಟ್ನ ಸದಸ್ಯ ಲಿಂಗರಾಜ ಸೊಟ್ಟಪ್ಪನವರ ಮಾತನಾಡಿ, “ಕನ್ನಡಕ್ಕೆ ಒಬ್ಬರೇ ಗೋಕಾಕರು” ಎಂಬ ನುಡಿ ನಮ್ಮೆಲ್ಲರ ಎದೆಯ ಧ್ವನಿಯಾಗಬೇಕು. ವಿಶ್ವಮಾನವ ಪ್ರಜ್ಞೆಯ ಧಾರೆಯನ್ನು ಬೆಳೆಸಿದ ಗೋಕಾಕರು, ಕನ್ನಡತನವನ್ನು ಕೊನೆಯವರೆಗೂ ಉಳಿಸಿಕೊಂಡ ಧೀಮಂತ ಸಾಹಿತಿ ಎಂದು ಹೇಳಿದರು.
ಟ್ರಸ್ಟ್ನ ಅಧ್ಯಕ್ಷ ಡಾ. ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಆರ್.ಎನ್. ತೊಂಡೂರು, ಚಂದ್ರಗೌಡ ಎನ್. ಪಾಟೀಲ, ಮಲ್ಲಾರ್ಪ ತಳ್ಳಿಹಳ್ಳಿ, ಪರಶುರಾಮ ಈಳಗೇರ, ಗುರುಪಾದಯ್ಯ ಆರಾಧ್ಯಮಠ, ಪ.ಪೂ. ಕಾಲೇಜಿನ ಪ್ರಾಚಾರ್ಯೆ ಚೈತ್ರಾ ಎಲ್., ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹರೀಶ ಭರಮಣ್ಣವರ, ವಿಶ್ವನಾಥ ಹಾವಣಗಿ ಸೇರಿದಂತೆ ಹಲವರು ಮಾತನಾಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ಕು. ಸೌಂದರ್ಯ ಬಂಕಾಪುರ, ಶಾಂಭವಿ ಬೆಂಡಿಗೇರಿ, ಬಿಬಿಹಾಜರ ಮುನ್ಸಿ ಹಾಗೂ ಲಕ್ಷ್ಮೀ ರಾಠೋಡ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದರು.
ಬಿ.ಎಡ್. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರಿ್ಡಸಿದ್ದ ಕವನ ಸ್ಪರ್ಧೆಯಲ್ಲಿ ಕು. ಸಹನಾ ಬಾಣದ, ವಿದ್ಯಾಶ್ರೀ ಬಡಿಗೇರ ಹಾಗೂ ರೇಣುಕಾ ಶಿಂದೊಳ್ಳಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು. ಸುಮಾ ಉಳ್ಳಾಗಡ್ಡಿ, ವೀಣಾ ಹಳ್ಳಿ ಹಾಗೂ ಮೊಯಿಸಿನ್ ಅಂಗಡಗಿ ಸಮಾಧಾನಕರ ಬಹುಮಾನಗಳಿಗೆ ಭಾಜನರಾದರು. ಕಾರ್ಯಕ್ರಮದ ಆರಂಭದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್. ಪಾಟೀಲ ಸ್ವಾಗತಿಸಿದರು. ವಿದ್ಯಾಶ್ರೀ ಬಡಿಗೇರ ನಿರೂಪಿಸಿದರು. ಶ್ರೀಮತಿ ನಾಗವೇಣಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 