ಡಾ, ಟಿ.ಹೆಚ್ ಮುಲ್ಲಾಗೆ ಅಳವಂಡಿ ಗ್ರಾಮದಲ್ಲಿ ಅಂಜುಮನ್ ಕಮಿಟಿಯಿಂದ ಸನ್ಮಾನ
Dr. T.H. Mulla felicitated by Anjuman Committee in Alavandi village
ಡಾ, ಟಿ.ಹೆಚ್ ಮುಲ್ಲಾಗೆ ಅಳವಂಡಿ ಗ್ರಾಮದಲ್ಲಿ ಅಂಜುಮನ್ ಕಮಿಟಿಯಿಂದ ಸನ್ಮಾನ
ಕೊಪ್ಪಳ 08: ಹಿರಿಯ ವೈದ್ಯ ನಿವೃತ್ತ ಡಿ, ಎಚ್, ಓ, ಡಾ, ಟಿ,ಎಚ್, ಮುಲ್ಲಾ ರವರಿಗೆ ಅಳವಂಡಿ ಗ್ರಾಮ ದಲ್ಲಿ ಅಲ್ಲಿನ ಅಂಜುಮನ್ ಕಮಿಟಿ ವತಿಯಿಂದ ಹಜರತ್ ಮಹಬೂಬೇ ಸುಭಾನಿ ಜಗ್ಯಾರವಿ ಶರೀಫ್ ಹಬ್ಬದ ಸಂದರ್ಭದಲ್ಲಿ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು, ಡಾ, ಟಿ.ಹೆಚ್. ಮುಲ್ಲಾ ರವರು ಅಳವಂಡಿ ಗ್ರಾಮದ ಪಕ್ಕದ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ನಿವಾಸಿಯಾಗಿದ್ದು ಅವರು ಸುಮಾರು ಒಂದು ದಶಕಗಳ ಕಾಲ ಅಳವಂಡಿ ಗ್ರಾಮದಲ್ಲಿ ತಮ್ಮ ಆರಂಭಿಕ ವೈದ್ಯಕೀಯ ಸೇವೆ ಪ್ರಾರಂಭಿಸಿ ನಂತರ ಕೊಪ್ಪಳಕ್ಕೆ ಬಂದಿದ್ದರು ,ಅಲ್ಲದೇ ಇತ್ತೀಚಿಗಷ್ಟೇ ಅವರಿಗೆ ಅವರ ವೈದ್ಯಕೀಯ ಸೇವೆಗಾಗಿ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಸೇರಿದಂತೆ ವಿವಿಧ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಅವರನ್ನು ಅಳವಂಡಿ ಗ್ರಾಮಕ್ಕೆ ಕರೆಸಿ ಅಲ್ಲಿನ ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಬೆಳಗಟ್ಟಿ ದರ್ಗಾ ಶರೀಫ್ ನ ಪೀಠಾಧಿಪತಿ ಗುರುಗಳು, ರಾಶಿದ ಖಾಜಿ ಗುರುಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಮೂರ್ತಿ ಸ್ವಾಮಿ ಇನಾಮ್ದಾರ್, ಅಲ್ಲದೆ ಅಂಜುಮನ್ ಕಮಿಟಿಯ ಅಧ್ಯಕ್ಷ ಅನ್ವರ್ ಗಡಾದ್ ಸೇರಿದಂತೆ ಗ್ರಾಮದ ಜನ ಪ್ರತಿನಿಧಿಗಳು ಗಣ್ಯರು ಮತ್ತಿತರರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 