ದುಶ್ಚಟದಿಂದ ದೂರಿರಲು ವಿದ್ಯಾರ್ಥಿಗಳಿಗೆ ಡಾ. ಸುರೇಶ ಬಣಕಾರ ಕರೆ

ದುಶ್ಚಟದಿಂದ ದೂರಿರಲು ವಿದ್ಯಾರ್ಥಿಗಳಿಗೆ  ಡಾ. ಸುರೇಶ ಬಣಕಾರ ಕರೆ Dr. Suresh Banakar calls on students to stay away from addiction

ರಾಣೆಬೆನ್ನೂರು  17: ಮಾದಕ ವ್ಯಸನಗಳಿಂದ ದೂರವಿರಬೇಕಾದ ಇಂದಿನ ಅಗತ್ಯವಿದೆ. ಮಧ್ಯ, ಗುಟಕಾ, ತಂಬಾಕು, ಚರಸ್, ಅಫೀಮು ಸೇರಿದಂತೆ ಮತ್ತಿತರೆ ಅಮಲು ಪದಾರ್ಥಗಳು ಅನೇಕ ರೋಗ,ರುಜಿನಗಳಿಗೆ ಕಾರಣವಾಗುತ್ತಲ್ಲಿದೆ. ಅವುಗಳಿಗೆ ದಾಸರಾಗದೆಆರೋಗ್ಯವಂತ ಬದುಕು ಸಾಗಿಸಲು ಮುಂದಾಗಬೇಕುಎಂದು ಬಿ.ಎ. ಜೆ.ಎಸ್‌.ಎಸ್‌. ಪದವಿ ಕಾಲೇಜು ಪ್ರಾಚಾರ್ಯ, ಡಾ.ಸುರೇಶ ಬಣಕಾರ ಕರೆ ನೀಡಿದರು. ಅವರು ಕಾಲೇಜಿನ ಮಾಜಿ ಸಂಸದ ಐ.ಜಿ. ಸನದಿ ಸಭಾ ಭವನದಲ್ಲಿ ನಡೆದ ವ್ಯಸನ ಮುಕ್ತ ಪ್ರತಿಜ್ಞಾವಿಧಿ ಸ್ವೀಕಾರ  ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.   

ಮಧ್ಯ ಸೇವನೆ ಇಂದಿನ ಯುವ ಹವ್ಯಾಸವಾಗಿ ಬೆಳೆಯುತ್ತಿರುವುದರಿಂದ, ಕುಟುಂಬದಲ್ಲಿಎಲ್ಲರೀತಿಯಿಂದಲೂ ಸಮಸ್ಯೆಗಳನ್ನು ಎದುರಿಸುವಂತಾಗಿದೆಇಂತಹ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆಜನ ಜಾಗೃತಿಗೊಳಿಸಲು, ಪ್ರತಿಯೊಬ್ಬರು ಮುಂದಾಗಬೇಕಾದಅಗತ್ಯವಿದೆಎಂದರು.ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಪೃಥ್ವಿರಾಜಕಟ್ಟಿಮನಿ ಅವರು ಪ್ರತಿಜ್ಞಾವಿಧಿ ಭೋಧಿಸಿದರು.ಎನ್‌.ಎಸ್‌.ಎಸ್‌.ಘಟಕ 2 ರ, ಕಾರ್ಯಕ್ರಮಾಧಿಕಾರಿರಾಜೀವ ಎಂ, ಉಪನ್ಯಾಸಕರಾದ ಸಂತೋಷ್ ಭಜಂತ್ರಿ, ಬಸವರಾಜ ಮಾಳೇನಹಳ್ಳಿ, ಡಾ.ಪುಷ್ಪಾಂಜಲಿ ಕಾಂಬಳೆ, ಡಾ. ಹನುಮಂತಪ್ಪ ಬ್ಯಾಡಗಿ, ಡಾ. ಅಶೋಕ ಹಳ್ಳಿಯವರ, ಬಿರೇಶ ಲಮಾಣಿ, ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.