ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಡಾ. ಸುಧಾಮೂರ್ತಿರಿಂದ ಸನ್ಮಾನ
Dr. Sudha Murthy felicitates athletes who have achieved success at the national level
ವಿಜಯಪುರ 30: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲ್ಲೆ ಅನೇಕ ಅಂತರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟುಗಳನ್ನು ನೀಡಿದೆ. ಅದರಲ್ಲೂ ವಿಜಯಪುರ ನಗರದಲ್ಲಿ ಕ್ರೀಡಾ ವಸತಿ ನಿಲಯ ಇರುವುದರಿಂದ ಇಲ್ಲಿನ ಭಾಗದ ಯುವಕರಿಗೆ ಸಾಧನೆ ಮಾಡಲು ಅನುಕೂಲವಾಗಿದೆ ಎಂದು ರಾಜ್ಯ ಸಭಾ ಸದಸ್ಯರಾದ ಡಾ. ಸುಧಾ ಮೂರ್ತಿಯವರು ಅಭಿಪ್ರಾಯಪಟ್ಟರು.
ನಗರದ ಸರಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿ ಸೈಕ್ಲಿಂಗ್ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ರಸ್ತೆಯಲ್ಲಿ ಅಪಘಾತ ಹಾಗೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನನ್ನ ಪರವಾಗಿ ವಸತಿ ನಿಲಯದಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಜೀವ ವಿಮೆಯನ್ನು ಮಾಡಿಸಲಾಗುವುದು ಹಾಗೂ ದಿನಾಲು ಅಭ್ಯಾಸ ಮಾಡಲು ವಸತಿ ನಿಲಯದಲ್ಲೆ ಸಂಸದರ ಅನುದಾನ ಅಡಿಯಲ್ಲಿ ಉನ್ನತ ಮಟ್ಟದ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ ಮಾಡಿಕೊಡುತ್ತೇನೆ ಹಾಗೂ ಉನ್ನತ ಮಟ್ಟದ ಕ್ರೀಡಾ ಸಲಕರಣೆಗಳನ್ನು ಪೂರೈಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
16 ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಬೆಳಗಾವಿ ದಿನಾಂಕ: 03 ಮತ್ತು 04 ನೇ ಅಕ್ಟೋಬರ್ 2025
* ಶ್ರೀನಿವಾಸ್ ರಜಪೂತ - ಬಂಗಾರ ಪದಕ -1
* ದೀಪಿಕಾ ಫಡತರೆ - ಬಂಗಾರ ಪದಕ ಹಿ 2
* ಛಾಯಾ ನಾಗಶೆಟ್ಟಿ - ಬಂಗಾರ ಪದಕ - 2
* ಸುಜಲ ಜಾಧವ - ಬಂಗಾರ ಪದಕ -1, ಬೆಳ್ಳಿ ಪದಕ - 1
* ಅಭಿಷೇಕ ದಿಡ್ಡಿಬಾಗಿಲು - ಬೆಳ್ಳಿ ಪದಕ ಹಿ 1
* ಕೋಕಿಲಾ ಚವ್ಹಾಣ - ಬೆಳ್ಳಿ ಪದಕ ಹಿ 1
* ನೀತೀಶ ಪೂಜಾರಿ - ಬೆಳ್ಳಿ ಪದಕ ಹಿ 1
* ಪುನಿತ ಬಿರಾದಾರ ಹಿ ಕಂಚಿನ ಪದಕ -2
* ಬಸವರಾಜ ಯಳಮೇಲಿ - ಕಂಚಿನ ಪದಕ -2
* ವರ್ಷಾ ಚವ್ಹಾಣ - ಕಂಚಿನ ಪದಕ -1
* ಜ್ಯೋತಿ ರಾಠೋಡ - ಕಂಚಿನ ಪದಕ -1
* ಪಾಯಲ್ ಚವ್ಹಾಣ - ಕಂಚಿನ ಪದಕ -1
ಮಹಿಳೆಯರ ವಿಭಾಗದಲ್ಲಿ ವಿಜಯಪುರ ಜಿಲ್ಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ
ಪುರುಷರ ವಿಭಾಗದಲ್ಲಿ ವಿಜಯಪುರ ಜಿಲ್ಲೆ ದ್ವಿತೀಯ ವೀರಾಗ್ರಣಿ ಪ್ರಶಸ್ತಿ
ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾ. ಜಾವಿದ ಜಮಾದಾರ, ಭೀಮಸೇನ ಕೊಕರೆ, ಎಸ್.ಎಸ್. ಹಿರೇಮಠ, ರಾಜು ಬಿರಾದಾರ, ರಾಜಶೇಖರ ಧೈವಾಡಿ, ಆಕಾಶ ತಿಮ್ಮಶೆಟ್ಟಿ, ಜಿ.ಎಮ್. ಮಲ್ಜಿ, ಪ್ರಿಯಾಂಕ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 